ಮಂಗಳೂರು: ಮಾದಕ ವಸ್ತು ಮಾರಾಟ; ಇಬ್ಬರ ಬಂಧನ

ಮಂಗಳೂರು: ಮಾದಕ ವಸ್ತು ಎಂ.ಡಿ.ಎಂ.ಎ ಪೌಡರನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು  ಬಂಧಿಸಿ ಘಟನೆ ಮಂಗಳೂರಿನ‌ ಚಿಲಿಂಬಿಯಲ್ಲಿ ನಡೆದಿದೆ. ಮುಹಮ್ಮದ್ ನಿಯಾಝ್, ಮುಹಮ್ಮದ್ ಅಜೀಂ ಬಂಧಿತರು. ಮಂಗಳೂರಿನ ಉರ್ವ ಚಿಲಿಂಬಿ ಶಿರ್ಡಿ ಸಾಯಿ ಮಂದಿರದ ಕಡೆಯಿಂದ ಹಾದು ಹೋಗುವ ರಸ್ತೆಯಲ್ಲಿ ಆಲ್ಟೋ ಕಾರಲ್ಲಿ ಕುಳಿತು ಎಂ.ಡಿ.ಎಂ.ಎ ಪೌಡರ್ ಮಾರಾಟ ಮಾಡಲು ಗಿರಾಕಿಗಳನ್ನು ಕಾಯುತ್ತಿದ್ದರು. ಇದೇ ವೇಳೆ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ದಾಳಿ ನಡೆಸಿದ್ದಾರೆ. 4.80 ಗ್ರಾಂ. ತೂಕದ ಎಂ.ಡಿ.ಎಂ.ಎ.ಪೌಡರ್, ಮೆರೂನ್ ಬಣ್ಣದ ಆಲ್ಟೋ ಕಾರು, ಮೂರು […]

ಸಂವಿಧಾನದ ಆಶಯ ಮರೆಮಾಚುವ‌ ಉದ್ದೇಶದಿಂದ ಚರ್ಚೆ ನಡೆಸುತ್ತಿಲ್ಲ: ಡಾ. ಪಿ.ಎಲ್. ಧರ್ಮ

ಉಡುಪಿ: ಆಳುವ ವರ್ಗದವರು ಸಂವಿಧಾನದ ಆಶಯಗಳನ್ನು ಮರೆಮಾಚುವ ಉದ್ದೇಶದಿಂದ ಅದರ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಅವರು ಕಾನೂನು ಬಗ್ಗೆ ನಮ್ಮ ಜತೆಗೆ ಮಾತನಾಡುತ್ತಾರೆ ಹೊರತು, ಪ್ರತಿಕ್ರಿಯೆ ತೆಗೆದುಕೊಳ್ಳುತ್ತಿಲ್ಲ. ಇದು ದೇಶದ ಸಂವಿಧಾನ ಸಂಕೀರ್ಣ ಆಗಲು ಮುಖ್ಯ ಕಾರಣ ಎಂದು ಮಂಗಳೂರು ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಎಲ್. ಧರ್ಮ ಹೇಳಿದರು. ಉಡುಪಿ ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ […]

ಧರ್ಮಸ್ಥಳ: ಲಕ್ಷದೀಪೋತ್ಸವ ಪ್ರಯುಕ್ತ ಸಾಹಿತ್ಯ ಸಮ್ಮೇಳನ

ಧರ್ಮಸ್ಥಳ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಕೊನೆಯ ದಿನವಾದ ಮಂಗಳವಾರ ಧರ್ಮಸ್ಥಳದ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಕಾರ್ಯಕ್ರಮವನ್ನು ಡಿಸಿಎಂ ಡಾ. ಅಶ್ವತ ನಾರಾಯಣ ಉದ್ಘಾಟಿಸಿದರು. ಈ ವೇಳೆ ಧರ್ಮದರ್ಶಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಡಾ.ಬಿ.ಎ. ವಿವೇಕ ರೈ, ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಶ್ರೀಧರ ಬಳಗಾರ, ಡಾ. ವೀಣಾ ಬನ್ನಂಜೆ, ರಿಚರ್ಡ್ ಲೂಯಿಸ್ ಉಪನ್ಯಾಸ ನೀಡಿದರು.

ಮಂಗಳೂರು: ಬೈಕ್ ಅಪಘಾತ ಮೂವರಿಗೆ ಗಾಯ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನ ಹೊರವಲಯ ಕಲ್ಲಾಪು ಸಮೀಪದ ಆಡಂಕುದ್ರುವಿನಲ್ಲಿ  ನಡೆದ ಬೈಕ್ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ ಘಟನೆ ನಡೆದಿದೆ. ಬೈಕ್ ಸವಾರನು ರಸ್ತೆ ದಾಟುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಪಾದಚಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಹಾಗೂ ಸಹ ಸವಾರರಿಬ್ಬರಿಗೂ ಗಾಯಗಳಾಗಿವೆ. ಮೂವರು ಗಾಯಾಳುಗಳನ್ನು ಸ್ಥಳಿಯರು ನಗರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮಂಗಳೂರು ಸಂಚಾರ ದಕ್ಷಿಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನೆಟ್ಟಣ: ರೈಲಿನಡಿ ತಲೆಯಿಟ್ಟು ಯುವಕ‌ ಆತ್ಮಹತ್ಯೆ

ಮಂಗಳೂರು: ಮಂಗಳೂರಿನ ಯುವಕನೊಬ್ಬ ನೆಟ್ಟಣದಲ್ಲಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದ ಸಮೀಪ ಸೋಮವಾರ ರಾತ್ರಿ ನಡೆದಿದ್ದು, ಸ್ಥಳೀಯ ವ್ಯಕ್ತಿಯೋರ್ವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಯುವಕನ ಮೃತದೇಹವು ಕಂಡು ಬಂದಿದೆ. ಕೂಡಲೇ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಪಕ್ಕ ಬ್ಯಾಂಕ್ ಪಾಸ್ ಪುಸ್ತಕವೊಂದು ಸಿಕ್ಕಿದ್ದು,  ಅದರಲ್ಲಿ ಮಂಗಳೂರಿನ ಉಳ್ಳಾಲ ರೈಲ್ವೇ ನಿಲ್ದಾಣ ಬಳಿಯ ನಿವಾಸಿ ಪವನ್ ಕುಮಾರ್ ಎಂಬ ವಿಳಾಸ ಪತ್ತೆಯಾಗಿದೆ. ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ […]