ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ:ಭಜನ ಮಂಗಲೋತ್ಸವ

ಕಾರ್ಕಳ: ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ ಇದರ ವಾರ್ಷಿಕ ಭಜನ ಮಂಗಲೋತ್ಸವವು ಸೋಮವಾರ ನಡೆಯಿತು . ಹಿರ್ಗಾನ ಶ್ರೀ ಮಹಾಲಕ್ಷ್ಮೀ ಭಜನಾಮಂಡಳಿ ಲಕ್ಷ್ಮೀಪುರ, ಸಿರಿಬೈಲು ಕಡ್ತಲ ಶ್ರೀ ದುರ್ಗಾಪರಮೇಶ್ವರಿ ಭಜನಾಮಂಡಳಿ , ಎರ್ಲಪಾಡಿ ಶ್ರೀ ಆದಿಶಕ್ತಿ ಕಾಳಿಕಾಂಬ ಭಜನಾಮಂಡಳಿ ಗಳು ಭಜನಾ ಕಾರ್ಯಕ್ರಮ ವನ್ನು ನಡೆಸಿ ಕೊಟ್ಟರು. ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ,ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಅಶೋಕ್ ನಾಯಕ್,, ದೇವಸ್ಥಾನ ಆಡಳಿತ ಮೊಕ್ತೆಸರ ರಘುರಾಮ ಪ್ರಭು, ಸಮಿತಿ ಯ ಕಾರ್ಯಾಧ್ಯಕ್ಷ […]

ಶ್ರೀ ಕೃಷ್ಣ ಮಠ:ಕಿಶೋರ ಯಕ್ಷಗಾನ ಸಂಭ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಯಕ್ಷಗಾನ ಕಲಾರಂಗ, ಉಡುಪಿ,ಯಕ್ಷಶಿಕ್ಷಣ ಟ್ರಸ್ಟ್(ರಿ) ಉಡುಪಿ ಇದರ ಕಿಶೋರ ಯಕ್ಷಗಾನ ಸಂಭ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ನಿ.ಬಿ.ವಿಜಯ ಬಲ್ಲಾಳ್,ವಿಶ್ವನಾಥ್ ಶೆಣೈ ಹಾಗೂ ಮಠದ ದಿವಾನರಾದ ವೇದವ್ಯಾಸ ತಂತ್ರಿ ಗಳವರು ಉಪಸ್ಥಿತರಿದ್ದರು.ಎಸ್.ವಿ.ಭಟ್ ರವರು ಸ್ವಾಗತಿಸಿ ಎಂ.ಗಂಗಾಧರ್ ರಾವ್ ಧನ್ಯವಾದ ಸಮರ್ಪಿಸಿದರು.ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ […]

ಉಡುಪಿ: ಆನ್‍ಲೈನ್ ಮೂಲಕ  ಮರಳು ಮಾರಾಟಕ್ಕೆ ಚಾಲನೆ

ಉಡುಪಿ : ಮರಳು ಮಾರಾಟದಲ್ಲಿ ಯಾವುದೇ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಬಡವರಿಗೂ ಕೈಗೆಟುಕುವ ದರದಲ್ಲಿ ಮರಳು ಲಭ್ಯವಾಗುವಂತೆ ಉಡುಪಿ ಇ-ಸ್ಯಾಂಡ್ ವೆಬ್‍ಸೈಟ್ ಮತ್ತು ಆಪ್ ಮೂಲಕ ಮರಳನ್ನು ಗ್ರಾಹಕರಿಗೆ ವಿತರಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಚಾಲನೆ ನೀಡಿದರು. ಸೋಮವಾರ ಹಿರಿಯಡ್ಕ ಮರಳು ಸಂಗ್ರಹಾರದಲ್ಲಿ ಆನ್‍ಲೈನ್ ಪ್ರಕಿಯೆಯ ಮೂಲಕ ನೊಂದಾಯಿಸಲ್ಪಟ್ಟ ಲಾರಿ ಮಾಲೀಕರಿಗೆ ಟ್ರಿಪ್ ಷೀಟ್ ನೀಡುವ ಮೂಲಕ ಮರಳು ಸಾಗಾಟಕ್ಕೆ ವಿಧಿವತ್ತಾಗಿ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್,ವೆಬ್‍ಸೈಟ್‍ ಮೂಲಕ ಗ್ರಾಹಕರು ಮುಂಗಡವಾಗಿ ಮರಳನ್ನು ಕಾದಿರಿಸಬಹುದು. ಈ […]

ಶಾಲಾ ವಾಹನ ಪಲ್ಟಿ: 18 ವಿದ್ಯಾರ್ಥಿಗಳಿಗೆ ಗಾಯ

ಉಡುಪಿ: ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮಿನಿ ಕಾರೊಂದು ಪಲ್ಟಿ ಹೊಡೆದ ಪರಿಣಾಮ 18ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಅಲೆವೂರಿನ ಪ್ರಗತಿ ನಗರದಲ್ಲಿ ಸೋಮವಾರ ಸಂಭವಿಸಿದೆ. ಸಂಜೆ ಕರ್ವಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅಲೆವೂರಿನ ಪ್ರಗತಿ ನಗರದ ಕಾಲೋನಿಗೆ ಬಿಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಓಮಿನ ಕಾರಿನಲ್ಲಿ 25 ವಿದ್ಯಾರ್ಥಿಗಳು ಇದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಶೋರ ಯಕ್ಷಸಂಭ್ರಮ-2019 ಗೆ ಚಾಲನೆ; ಮಕ್ಕಳಿಗೆ ಯಕ್ಷಗಾನದ‌ ಅರಿವು-ಶಿಕ್ಷಣ ಅತ್ಯಗತ್ಯ: ಪಲಿಮಾರು ಶ್ರೀ

ಉಡುಪಿ: ಪಾಶ್ಚಿಮಾತ್ಯ ಸಂಸ್ಕೃತಿಯ ವಿಕೃತಿ ಮಕ್ಕಳನ್ನು ಬೇರೆಡೆಗೆ ಸೆಳೆಯುತ್ತಿದೆ. ಇದರಿಂದ ನಮ್ಮ ಮಕ್ಕಳನ್ನು ಹೊರತರಬೇಕಾದರೆ, ಅವರಿಗೆ ನಮ್ಮ ದೇಶೀಯ ಸಾಂಸ್ಕೃತಿಕ ಕಲೆಯಾದ ಯಕ್ಷಗಾನದ ಮೂಲಕ ಶಿಕ್ಷಣ ನೀಡಬೇಕು ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷ ಶಿಕ್ಷಣ ಟ್ರಸ್ಟ್‌ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದ್ದ ‘ಕಿಶೋರ ಯಕ್ಷ ಸಂಭ್ರಮ-–2019’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಇಂದಿನ […]