ಶ್ರೀಕೃಷ್ಣ ಮಠ:ಬೃಹತ್ ಉಚಿತ ಚರ್ಮರೋಗ ತಪಾಸಣೆ ಹಾಗು ಹೃದಯ ರೋಗ ತಪಾಸಣಾ ಶಿಬಿರ ಉದ್ಘಾಟನೆ
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ, ಶ್ರೀಧನ್ವಂತರಿ ಚಿಕಿತ್ಸಾಲಯ,ಲಯನ್ಸ್ ಕ್ಲಬ್ ಅಂಬಲಪಾಡಿ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ ಇವರ ಆಯೋಜನೆಯಲ್ಲಿ ನಡೆದ ಬೃಹತ್ ಉಚಿತ ಚರ್ಮರೋಗ ತಪಾಸಣೆ ಹಾಗು ಹೃದಯ ರೋಗ ತಪಾಸಣಾ ಶಿಬಿರವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ.ಸತೀಶ್ ಪೈ, ಡಾ.ಸುಧೀರ್ ನಾಯಕ್, ಡಾ.ನಿಶಾಂತ್ ಶೆಟ್ಟಿ, ಡಾ.ರವೀಂದ್ರ, ಡಾ.ನರಸಿಂಹ ರಾವ್ ಮತ್ತು ಲ|ಪಿ.ಎಲ್.ಭಟ್, ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಕೊಲ್ಲೂರಿನ ಕೊಡಚಾದ್ರಿ ಬೆಟ್ಟವೇರಿದ ಕುಂದಾಪುರದ ಪೊಲೀಸರು!:ಇದು ರಾಜ್ಯದಲ್ಲೇ ಪೊಲೀಸರ ಫಸ್ಟ್ ಸಾಮೂಹಿಕ ಪಿಕ್ನಿಕ್ !
ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ದಿನಾಲು ಕೇಸು, ಫೈಲು, ಬಂದೋಬಸ್ತ್, ಗಸ್ತು ತಿರುಗುವ ಜಂಜಾಟಗಳಿಂದ ಬಸವಳಿದು ಹೋಗಿದ್ದ ಪೊಲೀಸರು ಪಿಕ್ನಿಕ್‌ಗೆ ತೆರಳಿ ಮನಸ್ಸನ್ನು ಕೊಂಚ ರಿಲ್ಯಾಕ್ಸ್ ಮಾಡಿಕೊಂಡಿದ್ದಾರೆ. ಕುಂದಾಪುರ ಪೊಲೀಸ್ ಸಿಬ್ಬಂದಿಗಳು ಸಾಮೂಹಿಕವಾಗಿ ಪಿಕ್ನಿಕ್‌ಗೆ ತೆರಳಿದ್ದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವುದು ಮತ್ತೊಂದು ವಿಶೇಷ. ಹಗಲಿರುಳು ದುಡಿದು ತಾಲೂಕಿನ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಈ ಪ್ರವಾಸ ಸಾಕಷ್ಟು ಮನೋಲ್ಲಾಸ ನೀಡಿದೆ. ಕುಂದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಹರೀಶ್ ಆರ್ […]
ಮಾನವೀಯ ಮೌಲ್ಯಗಳನ್ನು ರೂಢಿಸಿ ಬದುಕುವುದೇ ಮಾನವ ಧರ್ಮ: ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ
ಕಾರ್ಕಳ ; ಮಾನವೀಯ ಮೌಲ್ಯಗಳನ್ನು ರೂಡಿಸಿ ಬದುಕುವುದೇ ಮಾನವ ಧರ್ಮ ಎಂದು ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಜಿ ಹೇಳಿದರು. ಕಾರ್ಕಳ ಹಿರ್ಗಾನ ದ ಶಿವಾನಂದ ಸರಸ್ವತಿ ಸಭಾಭವನದ ಉದ್ಘಾಟಿಸಿ ಆಶೀರ್ವಚನ ನೀಡುತ್ತಾ ಮಾತನಾಡಿ, ಗುರುಪರಂಪರೆಯನ್ನು ಗೌರವಿಸುತ್ತಾ ಅದನ್ನು ರೂಢಿಸಿಕೊಂಡು ಬರುವುದು ಹೆಮ್ಮೆಯ ವಿಚಾರವಾಗಿದ್ದು ಭವಿಷ್ಯದಲ್ಲಿ ಧರ್ಮದ ಉಳಿವಿಗೆ ಮುನ್ನುಡಿ ಬರೆದಂತೆ, ಅದರ ಜೊತೆಗೆ ಸಿಧ್ದಿ ಬುಧ್ಧಿಯನ್ನು ರೂಢಿಸಿಕೊಂಡು ಬದುಕಿ ನಡೆದರೆ ಜೀವನ ಪಾವನ ವಾಗುವುದು, ಜೀವನವನ್ನು ತಿದ್ದಿ ಬದುಕಿ ನಡೆಯಿರಿ ಎಲ್ಲೆಡೆಯೂ ಗೌರವವು ಪ್ರಾಪ್ತಿಯಾಗುವುದು […]