ಸೈಂಟ್ ಮೇರೀಸ್ ದ್ವೀಪದಲ್ಲೇ ರಾತ್ರಿ ಕಳೆದ ಪ್ರವಾಸಿಗರು; ಬೋಟ್ ತಪ್ಪಿದ ಪರಿಣಾಮ ಘಟನೆ

ಉಡುಪಿ: ಪ್ರವಾಸಿಗರನ್ನು ಕರೆದೊಯ್ಯುವ ಕೊನೆಯ ಬೋಟು ತಪ್ಪಿದ ಪರಿಣಾಮ  ನಾಲ್ವರು ಪ್ರವಾಸಿಗರು ಮಲ್ಪೆ ಸಮುದ್ರ ಮಧ್ಯೆ ಇರುವ ಸೈಂಟ್ ಮೇರಿಸ್ ದ್ವೀಪದಲ್ಲಿ ಇಡೀ ರಾತ್ರಿ ಕಳೆದ ಆತಂಕಕಾರಿ ಘಟನೆ ನ.23ರಂದು ನಡೆದಿದೆ. ಕೇರಳದ ಕೊಚ್ಚಿನ್ ನಿವಾಸಿಗಳಾದ ಜಸ್ಟಿನ್(34), ಶೀಜಾ(33), ಜೋಶ್(28) ಹಾಗೂ ಹರೀಶ್(17) ಅವರು ದ್ವೀಪಕ್ಕೆ ತೆರಳಿ ಅಲ್ಲೇ ಉಳಿದವರು. ನ.24ರಂದು ಬೆಳಗ್ಗೆ 7:30ರ ಸುಮಾರಿಗೆ ಸೈಂಟ್ ಮೇರಿಸ್ ದ್ವೀಪದಿಂದ ರಕ್ಷಿಸಿ ತೀರಕ್ಕೆ ಕರೆತರಲಾಗಿದೆ. ಇವರನ್ನು ವಿಚಾರಣೆ ನಡೆಸಿದ ಮಲ್ಪೆ ಪೊಲೀಸರು ಇವರನ್ನು ಸುರಕ್ಷಿತವಾಗಿ ಕೇರಳ ರಾಜ್ಯಕ್ಕೆ […]

ನ.27-29: ಉಡುಪಿಯಲ್ಲಿ ಪುರಿ ಗೋವರ್ಧನ ಪೀಠದ ಜಗದ್ಗುರು ನಿಶ್ಚಲಾನಂದ ಶ್ರೀಗಳ ಧರ್ಮಸಭಾ ಸಂದೇಶ

ಉಡುಪಿ: ಶ್ರೀಕ್ಷೇತ್ರ ಪುರಿ ಗೋವರ್ಧನ ಪೀಠದ ಜಗದ್ಗುರು ನಿಶ್ಚಲಾನಂದ ಸರಸ್ವತೀ ಮಹಾಸ್ವಾಮಿಗಳ ಸನಾತನ ಧರ್ಮ ಸಭಾ ಸಂದೇಶ ಕಾರ್ಯಕ್ರಮವನ್ನು ನ.27ರಿಂದ 29ರ ವರೆಗೆ ಉಡುಪಿಯಲ್ಲಿ ಆಯೋಜಿಸಲಾಗಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್‌ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ. 27ರಂದು ನಿಶ್ಚಲಾನಂದ ಸರಸ್ವತೀ ಮಹಾಸ್ವಾಮಿ ಉಡುಪಿಗೆ ಆಗಮಿಸಲಿದ್ದು, ಅಂದು ಬೆಳಿಗ್ಗೆ 7ಗಂಟೆಗೆ ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಲಾಗುವುದು. ಬಳಿಕ ಅವರು ಮೂರು ದಿನಗಳ ಕಾಲ ವಾಸ್ತವ್ಯ ಹೂಡಲಿರುವ ಮಂಚಿಕೋಡಿಯ ಗುರ್ಮೇಬೆಟ್ಟುವಿನ ಸುವರ್ಧನ್‌ ನಾಯಕ್‌ರ […]

ಸಾಣೂರು: ಹೃದಯ ರೋಗ- ಕಣ್ಣಿನ ಉಚಿತ ತಪಾಸಣೆ

ಕಾರ್ಕಳ: ಯುವಕ ಮಂಡಲ ಸಾಣೂರು, ಗ್ರಾಮ ಪಂಚಾಯತ್ ಸಾಣೂರು, ಡಾ|| ಟಿ‌.ಎಂ.ಎ.ಪೈ. ರೋಟರಿ ಆಸ್ಪತ್ರೆ, ಕಾರ್ಕಳ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಸಂಯುಕ್ತ ಆಶ್ರಯದಲ್ಲಿ ನ.24ರಂದು ಉಚಿತ ಹೃದಯ ರೋಗ ತಪಾಸಣೆ ಮತ್ತು ಕಣ್ಣಿನ ತಪಾಸಣಾ ಶಿಬಿರ  ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ಜರುಗಿತು. ಶಿಬಿರವನ್ನು ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಉದ್ಘಾಟಿಸಿ ಶುಭಹಾರೈಸಿದರು. ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾದ ಸುರೇಂದ್ರ ನಾಯಕ್ ಪ್ರಸ್ತಾವನೆಗೈದರು ಲ. ಸಾಣೂರು ಯುವಕ  […]

ದೇವರ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ

ಕಾರ್ಕಳ: ದೇವರ ಸೇವೆಯಿಂದ ಪುಣ್ಯ ಪ್ರಾಪ್ತಿ ಸಿಧ್ಧಿಯಾಗುತ್ತದೆ ಎಂದು ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಜಿ ಹೇಳಿದರು. ಕಾರ್ಕಳ ಹಿರ್ಗಾನ ದ ಶಿವಾನಂದ ಸರಸ್ವತಿ ಸಭಾಭವನದಲ್ಲಿ ನಡೆದ ಉದಾರ ದಾನಿಗಳಿಗೆ ಹಾಗೂ ಕರಸೇವಕರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಮಾತನಾಡಿ, ಉತ್ತಮ ಸಂಸ್ಕಾರ ವೈದಿಕ ಸಂಸ್ಕಾರ ಯಜ್ಞ ಯಾಗಾದಿಗಳನ್ನು ಮಾಡುವುದರಿಂದ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಲು ಸಾಧ್ಯ ಎಂದರು. ಅಧ್ಯಕ್ಷ ತೆ ವಹಿಸಿದ್ದ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ಮಾತನಾಡಿ, ಕರ ಸೇವೆಯನ್ನು ಎಲ್ಲರಿಗೂ ಹಂಚಿಕೊಂಡು […]

ವ್ಯಂಗ್ಯಚಿತ್ರಕಾರರು ಯಾವಾಗಲೂ ಪ್ರತಿಪಕ್ಷದ ಸ್ಥಾನದಲ್ಲಿಯೇ ಇರುತ್ತಾರೆ:ಬಾದಲ್ ನಂಜುಂಡಸ್ವಾಮಿ

ಕುಂದಾಪುರ: ವ್ಯಂಗ್ಯಚಿತ್ರಕಾರರು ಯಾವಾಗಲೂ ಪ್ರತಿಪಕ್ಷದ ಸ್ಥಾನದಲ್ಲಿಯೇ ಇರುತ್ತಾರೆ. ವ್ಯಂಗ್ಯಚಿತ್ರಕಾರರಿಗೆ ನಾಯಕರು ಇಲ್ಲ. ಆದರೆ ಸ್ಪರ್ಧಿಗಳು ಇದ್ದಾರೆ. ದೇಶದ ರಾಜಕಾರಣಿಗಳಿಗಿಂತ ರಾಜಕಾರಣದ ಬಗ್ಗೆ ಹೆಚ್ಚು ತಿಳಿದುಕೊಂಡಿರುವ ವ್ಯಂಗ್ಯಚಿತ್ರಕಾರರು ಯಾಕೆ ರಾಜಕಾರಣಿಗಳಾಗಬಾರದು ಎಂದು ಹಲವು ಸಲ ಜಿಜ್ಞಾಸೆ ಮೂಡಿದೆ ಎಂದು ಬೆಂಗಳೂರಿನ ಪ್ರಸಿದ್ಧ ಸ್ಟ್ರೀಟ್ ಆರ್ಟ್ ಕಲಾವಿದ ಬಾದಲ್ ನಂಜುಂಡಸ್ವಾಮಿ ಹೇಳಿದರು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷೀನರಸಿಂಹ ಕಲಾಮಂದಿರದಲ್ಲಿ ಕಾರ್ಟೂನ್ ಬಳಗ ಕುಂದಾಪುರದ ಆಶ್ರಯದಲ್ಲಿ ನಡೆಯುತ್ತಿರುವ ‘ಕಾರ್ಟೂನ್ ಹಬ್ಬ’ ದ ಅಂಗವಾಗಿ ಭಾನುವಾರ ತಾಲ್ಲೂಕು ಕಾರ್ಯನಿರತ […]