ಸೆಟ್ಟೇರಲು ಸಿದ್ಧವಾಗ್ತಿದೆ ಕಾಮಿಡಿ ಹಾರರ್ ತುಳು ಚಿತ್ರ “ಶಕಲಕ ಬೂ0 ಬೂ0”: ಕನ್ನಡಕ್ಕೂ ಡಬ್ ಆಗ್ತಿದೆ ಈ ತುಳು ಸಿನಿಮಾ

ಮೂವಿ ಮಸಾಲ:  ನಿರ್ದೇಶಕ ಶ್ರೀಶಾ ಎಳ್ಳಾರೆ ನಿರ್ದೇಶನದಲ್ಲಿ ಕಾಮಿಡಿ ಹಾರರ್ ತುಳುಫಿಲಂ ಶಕ ಲಕ ಬೂ0 ಬೂ0 ತೆರೆಯಮೇಲೆ ಬರಲು ಸಿದ್ಧವಾಗುತ್ತಿದೆ. ವಿಶೇಷವೆಂದರೆ ಇದು ಕನ್ನಡ ಭಾಷೆಗೂ ಡಬ್ ಆಗಲಿದೆ.  ಸಿನಿಮಾ ಶೂಟಿಂಗ್ ಬೇಗ ಮುಗಿಸುವ ಯೋಚನೆ ಚಿತ್ರ ತಂಡಕ್ಕಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಖ್ಯಾತ ಯಕ್ಷಗಾನ ಕಲಾವಿದ ನೀಲ್ಕೋಡು ಶಂಕರ್ ಹೆಗಡೆಯವರು ನೆರೆವೇರಿಸಿ ಚಿತ್ರ ತಂಡಕ್ಕೆ ಶುಭಹಾರೈಸಿದ್ದಾರೆ. ವಿವಿದೆಡೆ ಚಿತ್ರೀಕರಣ : ಸಿನಿಮಾ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭಗೊಳ್ಳುತ್ತಿದ್ದು ಉಡುಪಿ, ಚಿಕ್ಕಮಗಳೂರು, […]

ಬಂಟ್ವಾಳ:ನಾನಾ ತರಬೇತಿಗಳ ಉದ್ಘಾಟನೆ

ಬಂಟ್ವಾಳ :ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ  ನಾನಾ ತರಬೇತಿಗಳ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಚಂದ್ರವತಿ  ಸೇಸಪ್ಪ ಕೋಟ್ಯಾನ್ ತರಬೇತಿ ಉದ್ಘಾಟಿಸಿದರು. ಮೀರಾ ರಮೇಶ್ ಮಾತನಾಡಿ, ಇಂತಹ ತರಬೇತಿಗಳು  ದೈಹಿಹ ಸದೃಢತೆ ನೀಡುತ್ತದೆ ಎಂದರು. ಶಿಕ್ಷಕಿ, ನೃತ್ಯಪಟು ಪೂರ್ಣಿಮಾ ಅವರು ತರಬೇತಿಯ ಕುರಿತು ವಿವಿಧ ಮಾಹಿತಿ ನೀಡಿದರು. ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಲಕ್ಷಿ , ಭುವನೇಶ್  ಸ್ವಾಗತಿಸಿದರು, ಕಾರ್ಯದರ್ಶಿ ಚಂದ್ರಾವತಿ ಕುಶಲರಾಜ್ ವಂದಿಸಿದರು. ಸಂಘಟಕರಾದ ಜಯಶ್ರೀ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.