ಬೈಂದೂರು: ಎಸ್. ರಾಜು ಪೂಜಾರಿ ಅವರಿಗೆ ಶ್ರೇಷ್ಠ ಸಹಕಾರಿ ರಾಜ್ಯ ಪ್ರಶಸ್ತಿ

ಬೈಂದೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುತ್ತಿರುವ ಶ್ರೇಷ್ಠ ಸಹಕಾರಿ ರಾಜ್ಯ ಪ್ರಶಸ್ತಿಗೆ ಸಹಕಾರಿ ಧುರೀಣ, ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಭಾಜನರಾಗಿದ್ದು, ಅವರು ಬುಧವಾರ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಸಂಯುಕ್ತ ಸಹಕಾರಿ ನೇತೃತ್ವದಲ್ಲಿ ನಡೆದ ೬೬ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಸಹಕಾರಿ ಸಚಿವ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಶಾಸಕ ಜಿ. ಟಿ. […]
ಬೆಳ್ತಂಗಡಿ: ನಾಳೆಯಿಂದ(ನ.22) ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೊತ್ಸವ ನಾಳೆಯಿಂದ ಆರಂಭವಾಗಲಿದೆ. ಮಂಜುನಾಥ ಸ್ವಾಮಿಯ ಸನ್ನಿಧಿ ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳುತ್ತಿದ್ದು, ದೀಪೋತ್ಸವದ ಅಂಗವಾಗಿ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ವಸ್ತು ಪ್ರದರ್ಶನ ನಡೆಯಲಿದೆ. ಅಲ್ಲದೇ ನ. 25, 26ರಂದು ಸಂಜೆ ಸರ್ವಧರ್ಮ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರು ವಿದ್ವಾಂಸರು, ಹಾಗೂ ಕಲಾವಿದರ ಭಾಗವಹಿಸಲಿದ್ದಾರೆ. ಲಕ್ಷದೀಪೊತ್ಸವ ಪ್ರಯುಕ್ತ ದೇವರಿಗೆ ವಿಶೇಷ ಪೂಜೆಗಳು ಹಾಗೂ ಪ್ರತಿದಿನ ರಾತ್ರಿ ಮಂಜುನಾಥ ಸ್ವಾಮಿ ಕಟ್ಟೆ […]
ಮಾನವೀಯ ಮೌಲ್ಯಗಳ ಮೂಲಕ ಸೌಹಾರ್ದತೆ ನಿರ್ಮಿಸಲು ಪ್ರಯತ್ನಿಸಬೇಕು: ಫರ್ಡಿನಾಂಡ್ ಗೋನ್ಸಾಲ್ವಿಸ್

ಉಡುಪಿ: ಪ್ರತಿಯೊಬ್ಬರು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸೌಹಾರ್ದ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್‌ನ ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು. ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ 2020ರ ಜನವರಿ 19ರಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್‌ನ ಆವರಣದಲ್ಲಿ ಆಯೋಜಿಸಿರುವ ಧರ್ಮಪ್ರಾಂತ್ಯ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್–2020’ದ ಸ್ಟಿಕ್ಕರ್ ಮತ್ತು ಪೋಸ್ಟರ್‌ಅನ್ನು ಗುರುವಾರ ಅನಾವರಣಗೊಳಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ನಾಗರಾಜ್ ರಾವ್ ಮಾತನಾಡಿ, ಕ್ರೈಸ್ತ ಸಮುದಾಯ ಸೇವೆಯ […]
ಒಂದು ತುಳಸಿ ಎಲೆಯಿಂದ ಏನೇನ್ ಲಾಭವಿದೆ ಅಂತ ಗೊತ್ತಾದ್ರೆ ಅಚ್ಚರಿಪಡ್ತೀರಿ : ಡಾಕ್ಟರ್ ಹೇಳಿದ್ದಾರೆ ತುಳಸಿಯ ಗುಟ್ಟು

ಆಯುರ್ವೇದದಲ್ಲಿ ತುಳಸಿಯನ್ನು ಪವಿತ್ರ ಹಾಗೂ ಗಿಡಮೂಲಿಕೆಗಳ ರಾಣಿ ಎಂದು ಹೇಳಲಾಗಿದೆ. ಒಂದು ತುಳಸಿ ಎಲೆಯಿಂದ ನೂರೆಂಟು ಪ್ರಯೋಜನಗಳಿವೆ. ತುಳಸಿ ಎಲೆಯಿಂದಾಗುವ ಲಾಭಗಳೇನು? ಎನ್ನುವುದನ್ನು ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ಇಲ್ಲಿ ತಿಳಿಸಿದ್ದಾರೆ. ತುಳಸಿಯ ಲಾಭ ತಿಳಿದುಕೊಳ್ಳಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ತುಳಸಿಯಲ್ಲಿ ಬಹಳ ಪ್ರಕಾರಗಳಿದ್ದು ಇದರಲ್ಲಿ ಹಸಿರು ಬಣ್ಣದ ತುಳಸಿಯನ್ನು ರಾಮ ತುಳಸಿ ಎಂದು ಹಾಗೂ ಹಸಿರು ಕರಿ ಮಿಶ್ರ ವಿರುವ ತುಳಸಿಯನ್ನುಕೃಷ್ಣ ತುಳಸಿ ಎಂದು ಕರೆಯುತ್ತಾರೆ. ತುಳಸಿಯ ಪ್ರತಿ ಭಾಗದಲ್ಲಿ ಔಷಧೀಯ ಗುಣವಿದ್ದು ಅನೇಕ ರೋಗಗಳಿಗೆ […]