ವಾತಾವರಣ ಶುದ್ದಗೊಳಿಸಲು ತುಳಸಿ-ಅಮೃತಬಳ್ಳಿ ನೆಡಬೇಕು: ಬಾಬಾ ರಾಮ್ ದೇವ್
ಉಡುಪಿ: ಮನೆಯ ಆವರಣದಲ್ಲಿ ಅಗಾಧವಾದ ಔಷಧೀಯ ಗುಣ ಹೊಂದಿರುವ ತುಳಸಿ, ಅಲೆವೇರಾ, ಅಮೃತಬಳ್ಳಿಗಳನ್ನು ಬೆಳೆಸುವುದರಿಂದ ವಾತಾವರಣವನ್ನು ಶುದ್ಧಗೊಳಿಸಲು ಸಾಧ್ಯ. ದೆಹಲಿಯ ಕಲುಷಿತ ವಾತಾವರಣ ದೂರ ಮಾಡಲು ಮೊದಲು ಈ ಕೆಲಸ ಮಾಡಬೇಕು ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದರು. ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಎರಡನೆ ದಿನವಾದ ಭಾನುವಾರ ಮುಂಜಾನೆ ನಡೆದ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು. ಡೆಂಗಿ, […]
ತುಳು ಭಾಷೆ ನಮ್ಮಸಂಸ್ಕೃತಿಯ ಪ್ರತಿರೂಪ: ಜಯಕರ ಶೆಟ್ಟಿ
ಉಡುಪಿ: ತುಳು ಎನ್ನುವುದು ಕೇವಲ ಭಾಷೆಯಲ್ಲ, ಅದು ತುಳುನಾಡಿನ ಸಂಸ್ಕೃತಿಯ ಪ್ರತಿರೂಪ ಎಂದು ಉಡುಪಿ ತುಳುಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಜೈ ತುಳುನಾಡ್ ಒಡಿಪು, ತುಳು ಪಾತೆರ್ಗ ತುಳು ಒರಿಪಾಗ ಕುಡ್ಲ–ದುಬೈ ಹಾಗೂ ನಮ್ಮ ತುಳುನಾಡ್ ಟ್ರಸ್ಟ್ ಸಹಯೋಗದಲ್ಲಿ ಕೊಡವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಬನ್ನಿ ತುಳು ಲಿಪಿ ಕಲಿಯುವ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ತುಳು ಸಾಹಿತ್ಯ, ಸಂಸ್ಕಾರ ಹೊಂದಿರುವ ಸಮೃದ್ಧ ಭಾಷೆ. ಪ್ರತಿಯೊಬ್ಬರು ಕನಿಷ್ಠ ತಮ್ಮ ಹೆಸರನ್ನು […]
ಕುಂದಾಪುರ:ಚತುಷ್ಪತ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ವಿರುದ್ದ ಉಗ್ರ ಸ್ವರೂಪದ ಹೋರಾಟ, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನಿರ್ಧಾರ
ಕುಂದಾಪುರ: ಪುರಸಭಾ ವ್ಯಾಪ್ತಿಯ ವಿನಾಯಕದಿಂದ ಸಂಗಮ್‌ವರೆಗಿನ ಚತುಷ್ಪತ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ವಿರುದ್ದ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶನಿವಾರ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಡಿಸೆಂಬರ್ ೩ ರಂದು ಮೊದಲ ಹಂತದ ಹೋರಾಟವಾಗಿ ಧರಣಿ ನಡೆಸಲು ಸಮಿತಿ ನಿರ್ಧರಿಸಿದೆ. ಹೆದ್ದಾರಿ ಹೋರಾಟ ಜಾಗೃತಿ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ […]
ಕುಂದಾಪುರ: 1 ಲಕ್ಷ ರೂ. ಮೌಲ್ಯದ ಸಾಗುವಾನಿ ಮರ ವಶ. ಓರ್ವನ ಬಂಧನ.
ಕುಂದಾಪುರ: ಸಾಗುವಾನಿ ಮರ ಕಡಿದು ಗೃಹಪಯೋಗಿ ವಸ್ತುಗಳಿಗೆ ಬಳಸಲು ತಯಾರು ಮಾಡಿ ಇಟ್ಟಿದ್ದ ಮನೆಗೆ ಕೊಲ್ಲೂರು ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಂಡ್ಸೆ ಗ್ರಾಮದ ಹಳ್ಳಿಬೇರು ವಿಜಂii (31) ಎಂಬವನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಶಿರಸಿ ಹಾಲಗಲ್ ನಿವಾಸಿ ಸಮೀಉಲ್ಲಾ (19) ಪರಾರಿಯಾಗಿದ್ದಾರೆ. 1 ಲಕ್ಷ ರೂ ಮೌಲ್ಯದ ಸಾಗುವಾನಿ ಮರ ವಶಕ್ಕೆ ಪಡೆಯಲಾಗಿದೆ. ವಂಡ್ಸೆ ಗ್ರಾಮದ ಚಿತ್ತೂರು ವಲಯ ರಕ್ಷಿತಾರಣ್ಯದಲ್ಲಿ ವನ್ಯಜೀವ ಸಂರಕ್ಷಣಾ ವಿಭಾಗದವರು ಸಾಗುವಾನಿ ಮರ ಬೆಳೆಸಿದ್ದರು. ಕಳೆದ ಕೆಲ […]