ಕುಂದಾಪುರದ ಟ್ರೋಲ್ ಕಿಂಗ್ ವೈಕುಂಠ ತೀವ್ರ ಅಸ್ವಸ್ಥ!: ಜನರ ಮನಗೆದ್ದ ಬಿಂದಾಸ್ ಹಾಡುಗಾರ ಆಸ್ಪತ್ರೆಗೆ, ಜನರಿಂದ ಪ್ರಾರ್ಥನೆ

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ತನ್ನ ವಿಭಿನ್ನ ಶೈಲಿಯ ಹಾಡುಗಾರಿಕೆ ಮೂಲಕ ಕುಂದಾಪುರದ ಜನರನ್ನು ರಂಜಿಸುತ್ತಿದ್ದ ರಾಕ್‌ಸ್ಟಾರ್ ಖ್ಯಾತಿಯ ಕುಂದಾಪುರದ ವೈಕುಂಠ ತೀವ್ರ ಅಸ್ವಸ್ಥಗೊಂಡ ಪರಿಣಾಮ ಬುಧವಾರ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಂಗಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನೇರಂಬಳ್ಳಿ ನಿವಾಸಿ ವೈಕುಂಠ ಕಳೆದ ನಾಲ್ಕು ದಿನಗಳಿಂದ ಕುಂದಾಪುರದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ತೀವ್ರ ಅಸ್ವಸ್ಥಗೊಂಡು ಮಲಗಿದ್ದರು. ಸ್ಥಳೀಯರು ಅಸ್ವಸ್ಥಗೊಂಡಿರುವ ವೈಕುಂಠ ಅವರ ಫೋಟೋ ಕ್ಲಿಕ್ಕಿಸಿ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು […]

ಅಂಬೇಡ್ಕರ್ ರನ್ನು ಇತಿಹಾಸದಿಂದ ಮರೆಮಾಚಿಸುವ ಷಡ್ಯಂತ್ರ: ನಾರಾಯಣ ಮಣೂರು

ಉಡುಪಿ: ಮನುವಾದಿಗಳು ತಮ್ಮ ಧಾರ್ಮಿಕ ಹಿತಾಸಕ್ತಿ ಹಾಗೂ ಅಧಿಕಾರ ಶಾಹಿ ವ್ಯವಸ್ಥೆಗೆ ಅಪಾಯ ಎದುರಾಗಬಾರದೆಂಬ ನಿಟ್ಟಿನಿಂದ ಅಂಬೇಡ್ಕರ್‌ನ್ನು ಇತಿಹಾಸದಿಂದ ಮರೆಮಾಚಿಸುವ ವ್ಯವಸ್ಥಿತ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಆರೋಪಿಸಿದರು. ಶಿಕ್ಷಣ ಇಲಾಖೆ ಮಾಡಿರುವ ಅಂಬೇಡ್ಕರ್‌ ಅವಹೇಳನವನ್ನು ಖಂಡಿಸಿ ಹಾಗೂ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಯ ವಜಾಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಉಡುಪಿ ಜಿಲ್ಲಾ ಸಮಿತಿ ಮತ್ತು ಉಡುಪಿಯ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕದ […]

ಕನಕದಾಸರ ಸಾಹಿತ್ಯ, ಜೀವನ ಪರಂಪರೆ ಅಜರಾಮರ: ಪಲಿಮಾರು ಶ್ರೀ

ಉಡುಪಿ: ಕನಕದಾಸರು ದೇವರು ಸಮಾಜಕ್ಕೆ ಕೊಟ್ಟಿರುವ ಸಂಪತ್ತು. ಅವರು ಸಮಾಜಕ್ಕೆ ನೀಡಿರುವ ಸಾಹಿತ್ಯ, ಜೀವನ, ಪರಂಪರೆ ಎಲ್ಲವೂ ಅಜಾರಾಮರವಾಗಿದೆ ಎಂದು ಪರ್ಯಾಯಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು. ಭಕ್ತ ಕನಕದಾಸರ 532ನೇ ಜಯಂತಿ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆ ಸಮಿತಿ ಹಾಗೂ ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಯ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನಕದಾಸರು ಕಾಣದ ಬೆಳಕನ್ನು ಪ್ರಕಾಶಿಸುವಂತೆ […]

ಕಡಬ: ಗೋದಾಮಿಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

ಮಂಗಳೂರು: ಅಡಿಕೆ ಹಾಗೂ ತೆಂಗಿನಕಾಯಿ ಇರಿಸಿದ್ದ ಗೋದಾಮಿಗೆ ಬೆಂಕಿ ತಗುಲಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ಪಿಲಿಮಜಲು ರಾಧಾಕೃಷ್ಣ ಭಟ್ ಎಂಬವರ ಮನೆಯ ಪಕ್ಕದಲ್ಲೇ ಇದ್ದ ಗೋದಾಮು ತಡರಾತ್ರಿ ವೇಳೆ ಬೆಂಕಿ ತಗುಲಿ ಉರಿಯುತ್ತಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಪರಿಸರದ ಯುವಕರು ತಕ್ಷಣವೇ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರಾದರೂ, ಬೆಳಗ್ಗಿನ ವೇಳೆಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಅಪಾರ ಅಡಿಕೆ ಹಾಗೂ ತೆಂಗಿನಕಾಯಿ ಸುಟ್ಟು ಕರಕಲಾಗಿದ್ದು, […]

ಅಂಬೇಡ್ಕರ್ ಕೊಟ್ಟ ಸಂವಿಧಾನ ಒಪ್ಪದಿದ್ದರೆ ದೇಶ ಬಿಟ್ಟು ತೊಲಗಿ: ಜಯನ್ ಮಲ್ಪೆ ಆಕ್ರೋಶ

ಕುಂದಾಪುರ: ಬಹಳ ಹಿಂದಿನಿಂದಲೂ ಆರೆಸ್ಸೆಸ್ ಈ ದೇಶಕ್ಕೆ ಸಂವಿಧಾನ ನೀಡಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಇತಿಹಾಸದ ಪುಟಗಳಲ್ಲಿ ಅಂಬೇಡ್ಕರ್ ಅವರ ಹೆಸರನ್ನು ನಾಶ ಮಾಡಿದರೆ ಮಾತ್ರ ತಾವು ಬದುಕಬಹುದೆಂಬ ತಂತ್ರ ಮನುವಾದಿಗಳಲ್ಲಿದೆ. ಆದರೆ ಈ ನೆಲದಲ್ಲಿ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಯಾರು ಒಪ್ಪುವುದಿಲ್ಲವೋ ಅವರು ಕೂಡಲೇ ಈ ದೇಶ ಬಿಟ್ಟು ತೊಲಗಲಿ ಎಂದು ದಲಿತ ಮುಖಂಡ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು. ಅವರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ […]