ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ: ಕುಂದಾಪುರದಲ್ಲಿ ದಿನೇಶ್ ಅಮೀನ್ ಮಟ್ಟು ಆರೋಪ

ಕುಂದಾಪುರ: ಈ ದೇಶದಲ್ಲಿ ಇಂದು ತುರ್ತು ಪರಿಸ್ಥಿತಿ ಘೋಷಣೆಯಾಗಿಲ್ಲ. ಆದರೆ ಅಘೋಷಿತ ತುರ್ತು ಪರಿಸ್ಥಿತಿಯ ವಾತಾರವಣ ಇದೆ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಯಾರ್‍ಯಾರನ್ನು ಯಾವ್ಯಾವ ರೀತಿಯಲ್ಲಿ ಹಣಿಯಬೇಕು ಆ ಕೆಲಸ ನಿರಂತರವಾಗಿ ಆಗುತ್ತಿದೆ. ಯಾವ ಪ್ರಭುತ್ವವೂ ಕೂಡ ಸ್ವತಂತ್ರ ಮಾಧ್ಯಮವನ್ನು ಇಷ್ಟಪಡುವುದಿಲ್ಲ. ಹಿಂದೆ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದಾಗ ಮಾಧ್ಯಮದವರು ಸೇರಿ ದೇಶಾದ್ಯಂತ ಪ್ರಬಲ ವಿರೋಧಗಳು ವ್ಯಕ್ತವಾಗಿದ್ದವು. ಆದರೆ ಇಂದು ಈಗಿರುವ ಪರಿಸ್ಥಿತಿಯನ್ನು ಮಾಧ್ಯಮಗಳು ಸೇರಿ ಯಾರೂ ಕೂಡ ಪ್ರಶ್ನೆ ಮಾಡದಿರುವಂತಹ […]