ಅಕ್ರಮ ಮರಳುಗಾರಿಕೆ: ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸರಕಾರಕ್ಕೆ ಶಿಫಾರಸ್ಸು

ಉಡುಪಿ: ಜಿಲ್ಲೆಯಲ್ಲಿ ಅನಧಿಕೃತ ಮರಳುಗಾರಿಕೆ, ಸಾಗಾಣಿಕೆ ಅಥವಾ ದಾಸ್ತಾನು ಮಾಡುತ್ತಿರುವ ಪ್ರಕರಣಗಳು ಪುನರಾವರ್ತನೆ ಆದಲ್ಲಿ, ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ. ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕಾರ್ಯ ಆರಂಭವಾದ ಬಳಿಕ ಅನಧಿಕೃತ ಮರಳುಗಾರಿಕೆ, ಸಾಗಾಟ ಮತ್ತು ದಾಸ್ತಾನು ವಿರುದ್ಧ ನ್ಯಾಯಾಲಯದಲ್ಲಿ 23 ಖಾಸಗಿ ದೂರು ದಾಖಲಾಗಿವೆ. ಹಾಗಾಗಿ ಸಿಆರ್‌ಝಡ್‌ ಮತ್ತು ನಾನ್‌ಸಿಆರ್‌ಝಡ್‌ […]

ಗಿಡಮರಗಳ ನಾಶದಿಂದ ಉಷ್ಣಾಂಶ ಹೆಚ್ಚುತ್ತಿದೆ: ಡಾ. ಎಚ್. ಗಂಗಾಧರ್ ಭಟ್

ಉಡುಪಿ: ಗಿಡಮರಗಳನ್ನು ಕಡಿದು ಕಾಂಕ್ರಿಟ್‌ ಕಟ್ಟಡಗಳನ್ನು ನಿರ್ಮಿಸುತ್ತಿರುವ ಪರಿಣಾಮ ವಾತಾವರಣದ ಉಷ್ಣಾಂಶ ಹೆಚ್ಚುತ್ತಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಭೂ ಸಾಗರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎಚ್‌. ಗಂಗಾಧರ್‌ ಭಟ್‌ ಆತಂಕ ವ್ಯಕ್ತಪಡಿಸಿದರು. ಉಡುಪಿ ವಿಜ್ಞಾನ ಫೌ-ಂಡೇಶನ್‌ ಫಾರ್‌ ಇನೋವೇಶನ್‌ ರಿಸರ್ಚ್‌ ಹಾಗೂ ಬೆಳ್ಳಾರೆ ಜಿಐಎಸ್‌ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಉಡುಪಿ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಭೌಗೋಳಿಕ ಮಾಹಿತಿ ವ್ಯವಸ್ಥೆ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮೂರರಿಂದ […]

ಮಂಗಳೂರು: ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಓರ್ವ ಸಾವು

ಮಂಗಳೂರು: ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ್ದ ಪರಿಣಾಮ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ನಗರದ ಕುಡುಪು ಬಳಿ ಇರುವ ತೇಜಸ್ವಿನಿ ಹಾಸ್ಪಿಟಲ್ ಗ್ರೂಪ್ ಆಫ್ ಇನ್ಸ್ಟಿಟೂಷನ್ ಬಳಿ‌ ಗುರುವಾರ ನಡೆದಿದೆ. ಮಣ್ಣಿನಡಿಯಿಂದ ಓರ್ವ ನನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿರುವ ಕಾರ್ಮಿಕನನ್ನು ಶ್ಯಾಮ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ.‌ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆ ಮಹಾನಗರಪಾಲಿಕೆ ಮತ ಎಣಿಕೆ; ಜಿಲ್ಲಾಧಿಕಾರಿ ಅವರಿಂದ ಸಿದ್ದತೆ ಪರಿಶೀಲನೆ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಚುನಾವಣಾ ಮತ ಎಣಿಕೆ ಗುರುವಾರ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು. ತಲಾ 5 ವಾರ್ಡ್‍ಗೆ ಒಬ್ಬರಂತೆ  ಒಟ್ಟು 12 ಚುನಾವಣಾಧಿಕಾರಿಗಳು 12 ಕೊಠಡಿಗಳಲ್ಲಿ ಮತ ಎಣಿಕೆ ನಡೆಸಲಿದ್ದಾರೆ. ಆಯಾ ಚುನಾವಣಾಧಿಕಾರಿಗಳು ಪ್ರತಿಯೊಂದು ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಇನ್ನೊಂದು ವಾರ್ಡ್‍ನ ಮತ ಎಣಿಕೆ ಕೈಗೊಳ್ಳಲಿದ್ದಾರೆ. ಒಂದು ಸುತ್ತಿನಲ್ಲಿ 4 ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ […]

ಶ್ರೀಕೃಷ್ಣ ಮಠ:”ಸಂಸ್ಕಾರ ಪ್ರದೀಪ” ಬಿಡುಗಡೆ

ಉಡುಪಿ:  ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ,ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ವಿಂಶತ್ಯುತ್ಸವದಲ್ಲಿ ‘ಷೋಡಶ ಸಂಸ್ಕಾರ’ ಗಳ ಕುರಿತು ಹಲವಾರು ಪುರೋಹಿತ ವಿದ್ವಾಂಸರಿಂದ ಪುರೋಹಿತಗೋಷ್ಠಿಗಳನ್ನು ನಡೆಸಲು ಅವಕಾಶವನ್ನಿತ್ತು ಅನುಗ್ರಹ ಸಂದೇಶವನ್ನು ನೀಡಿ ಪ್ರೋತ್ಸಾಹಿಸಿದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು “ಸಂಸ್ಕಾರ ಪ್ರದೀಪ”  ಎಂಬ ಗ್ರಂಥವನ್ನು ಬಿಡುಗಡೆಗೂಳಿಸಿ ಅನುಗ್ರಹಿಸಿದರು. ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಹರಸಿದರು.ರಾಜ್ಯ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಶುಭ ಹಾರೈಸಿದರು.ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ಶ್ರೀ ಕೆ.ರಾಮದಾಸ್ ಭಟ್  […]