ಪಿಎಸ್‌ಐ ಅಮಾನತು: ಶ್ರೀರಾಮಸೇನೆ ಖಂಡನೆ
ಉಡುಪಿ: ಉಡುಪಿ ನಗರ ಠಾಣೆ ಪಿಎಸ್‌ಐ ಅನಂತ ಪದ್ಮನಾಭ ಹಾಗೂ ಹೆಡ್ ಕಾನ್‌ಸ್ಟೆಬಲ್ ಮೇಲೆ ಕರ್ತವ್ಯ ಲೋಪದ ಆರೋಪ ಹೊರೆಸಿ ಅಮಾನತು ಮಾಡಿರುವುದು ಖಂಡನೀಯ. ಎಸ್ಪಿ ಈ ಬಗ್ಗೆ ಏಕಪಕ್ಷೀಯವಾಗಿ ಕ್ರಮ ತೆಗೆದುಕೊಂಡಿದ್ದು, ಇದಕ್ಕೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ತಿಳಿಸಿದ್ದಾರೆ. ಅಮಾನತು ಆದೇಶವನ್ನು 48 ಗಂಟೆಯೊಳಗೆ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೀನು ಸಾಗಟ ವಾಹನದ ತ್ಯಾಜ್ಯ ನೀರು ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮನವಿ
ಉಡುಪಿ: ಹಸಿ ಮೀನು ಸಾಗಾಟ ವಾಹನದ ತ್ಯಾಜ್ಯ ನೀರನ್ನು ಸೂಕ್ತ ವಿಲೇವಾರಿ ಮಾಡಲು ಹೆದ್ದಾರಿ ಹಾಗೂ ರಸ್ತೆಯ ಬದಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಮಂಗಳೂರು ದಕ್ಕೆ ಮೀನು ಲಾರಿ ಚಾಲಕರ ಸಂಘದ ಮೊಹಮ್ಮದ್ ಹನೀಫ್ ನೇತೃತ್ವದ ನಿಯೋಗವು ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಿತು. ಬಹುತೇಕ ಮೀನು ಸಾಗಾಟದ ಲಾರಿ ಹಾಗೂ ವಾಹನಗಳಲ್ಲಿ ಮಾಲಿನ್ಯ ನೀರು ಸಂಗ್ರಹವಾಗಲು 200 ರಿಂದ 400ಲೀ. ಸಾಮರ್ಥ್ಯದ ಕಂಟೈನರ್ ಜೋಡಿಸಲಾಗಿದೆ. ಆದರೂ ಕೆಲವೊಮ್ಮೆ ಕಂಟೈನರ್ ತುಂಬಿ […]
ಮಣಿಪಾಲದ ಈ ಕೆರೆ ಪ್ರದೇಶದಲ್ಲಿ ಏನೇನ್ ನಡಿಯುತ್ತೆ ಗೊತ್ತಾ?: ದುರಾವಸ್ಥೆಯ ಹಳ್ಳ, ಈ ಮಣ್ಣ ಪಳ್ಳ
ರಾಮ್ಅಜೆಕಾರು ಕಾರ್ಕಳ ಉಡುಪಿ ಜಿಲ್ಲೆಯ ಮಣಿಪಾಲ ಶಿಕ್ಷಣ ಕ್ಷೇತ್ರದ ರಾಜಧಾನಿ. ಇಲ್ಲಿನ ಹಿರಿದಾದ ಕೆರೆ ಮಣ್ಣ ಪಳ್ಳ, ನೂರ ಇಪ್ಪತ್ತು ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಈಗ ಇದೇ ಕೆರೆ ಮಣ್ಣ ಪಳ್ಳ ಪರಿಸರ ಅವ್ಯವಸ್ಥೆಯ ತಾಣವಾಗಿ ಮಾರ್ಪಾಡಾಗಿದೆ. ಸರಿ ಸುಮಾರು 5 ಕೋಟಿ ರೂಪಾಯಿ ಗಳ ವೆಚ್ಚದಲ್ಲಿ ಮಣಿಪಾಲ್ ನ ಮಣ್ಣ ಪಳ್ಳ ವನ್ನು ಅಭಿವೃದ್ಧಿ ಪಡಿಸಿ ಉತ್ತಮ ಗೊಳಿಸಲಾಗಿತ್ತು. ಎರಡು ಕಿಮಿ ಉದ್ದದ ವಾಕಿಂಗ್ ಟ್ರ್ಯಾಕ್ ಕೂಡ ನಿರ್ಮಿಸಿ ಜಿಲ್ಲೆಯ ಅತಿ ದೊಡ್ಡ ಟ್ರ್ಯಾಕ್ ಹೆಸರಿನಿಂದ […]
ಶಾಂತಿಯುತ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಮುಖ್ಯ: ಕಾವೇರಿ
ಉಡುಪಿ: ಶಾಂತಿಯುತ ಸಮಾಜ ನಿರ್ಮಾಣದಲ್ಲಿ ವಕೀಲರ ಹಾಗೂ ಕಾನೂನು ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಕಾವೇರಿ ಹೇಳಿದರು. ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಒಂದು ದೇಶ, ಒಂದು ಸಂವಿಧಾನ- ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ನ್ಯಾಯ ದೊರಕಿಸಿ ಕೊಡುವ ಹಾಗೂ ನೆಲದ ಕಾನೂನನ್ನು ಎತ್ತಿಹಿಡಿಯುವ ಜವಾಬ್ದಾರಿ ವಕೀಲರ ಮೇಲಿದೆ ಎಂದರು. ಕಾನೂನು ಇಲಾಖೆಯ ಉಪಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಕಾನೂನು […]
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಬೆಳಗ್ಗೆಯಿಂದ ಬಿರುಸಿನ ಮತದಾನ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆ ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆಯೇ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದರು. ಮಿಲಾಗ್ರಿಸ್ ಶಾಲೆಯ 40ನೇ ಬೂತ್ ನಲ್ಲಿ 20ಕ್ಕೂ ಅಧಿಕ ಮಂಗಳಮುಖಿಯರು ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದರು. ಅನಾರೋಗ್ಯಕ್ಕೀಡಾಗಿರುವ ಉದ್ಯಮಿ ಸುಧೀರ್ ಘಾಟೆ ಮೂಗಿಗೆ ಆಕ್ಸಿಜನ್ ಪೈಪ್ […]