ಮೌಲಾನಾ ಅಬುಲ್ ಕಲಾಂ ಆಜಾದ್ ಕೋಮು ಸಾಮರಸ್ಯದ ಪ್ರತೀಕ:ಡಾ. ರಾಮದಾಸ ಪ್ರಭು

ಉಡುಪಿ: ಮೌಲಾನಾ ಅಬುಲ್ ಕಲಾಂ ಆಜಾದರು ಭಾರತದ ಸೃಜನಶೀಲ ಕಾಲಖಂಡವೊಂದರ ಕೋಮು ಸಾಮರಸ್ಯದ ಪ್ರತೀಕ. ಅವರು ಈ ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣದಲ್ಲಿ ಪ್ರಜಾಪ್ರಭುತ್ವವಾದಿ ಮತನಿರಪೇಕ್ಷ ಮೌಲ್ಯಗಳಿಗೆ ಹಾಗೂ ಸ್ವಾಯತ್ತತೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಉಡುಪಿ ಡಾ. ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಪ್ರಾಧ್ಯಾಪಕ ಡಾ. ರಾಮದಾಸ ಪ್ರಭು ಹೇಳಿದರು. ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಪ್ರಯುಕ್ತ ಕುಂಜಿಬೆಟ್ಟು ಡಾ. ಟಿಎಂಎ ಪೈ […]
ಅಸಮಧಾನ ಸ್ಪೋಟ: ಅಧ್ಯಕ್ಷರ ವಿರುದ್ದವೇ ತಿರುಗಿಬಿದ್ದ ಆಡಳಿತ ಪಕ್ಷದ ಸದಸ್ಯರು: ತಾ.ಪಂ ಸಾಮಾನ್ಯಸಭೆ ಮುಂದೂಡಿ ಹೊರನಡೆದ ಅಧ್ಯಕ್ಷೆ!

ಕುಂದಾಪುರ: ತಾಲೂಕು ಪಂಚಾಯಿತಿ ಅಧ್ಯಕ್ಷರ ವಿರುದ್ದವೇ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಅಸಮಧಾನ ಸ್ಪೋಟಿಸಿದ್ದಾರೆ. ಜನಸಾಮಾನ್ಯರ ಸಂಕಷ್ಟಗಳು, ಅಭಿವೃದ್ದಿಯ ಕುರಿತಾಗಿ ಚರ್ಚೆ ನಡೆಯಬೇಕಿದ್ದ ಸಾಮಾನ್ಯ ಸಭೆ ಕೇವಲ ಗಲಾಟೆ ಗದ್ದಲಗಳಿಗಷ್ಟೇ ಸೀಮಿತವಾಯಿತು. ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಆಡಳಿತ ಹಾಗೂ ವಿಪಕ್ಷ ಸದಸ್ಯರ ಪ್ರಶ್ನೆಗಳ ಸರಮಾಲೆಗೆ ಉತ್ತರಿಸಲಾಗದೆ ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ನವೆಂಬರ್ ೨೬ಕ್ಕೆ ಮುಂದಿನ ದಿನಾಂಕ ಪ್ರಕಟಿಸಿ ಸಭೆಯಿಂದ ಹೊರನಡೆದ ಘಟನೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಸಭಾಂಗಣದಲ್ಲಿ […]
ಶಿರಿಯಾರ: ನ. 19ರಿಂದ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಮೊಕ್ಕಾಂ
ಉಡುಪಿ: ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್, ಶ್ರೀರಾಮಮಂದಿರ, ಶಿರಿಯಾರ ಕಲ್ಮರ್ಗಿ ಇದರ ಆಶ್ರಯದಲ್ಲಿ ಪರಮಪೂಜ್ಯ ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಮೊಕ್ಕಾಂ ನ. 19, 20, 21 ರಂದು ನಡೆಯಲಿದೆ. ಇದೇ ಸಮಯದಲ್ಲಿ ಶ್ರೀ ಗುರುವರ್ಯರ ದಿವ್ಯಸಾನಿಧ್ಯದಲ್ಲಿ ಶ್ರೀ ರಾಮನಾಮ ತಾರಕ ಮಂತ್ರ ಹವನ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟನೆ ತಿಳಿಸಿದೆ.