ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪು ಪ್ರಕಟ: ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್

ನವದೆಹಲಿ: ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕಡೆಗೂ ಸುಪ್ರೀಂ ಕೋರ್ಟ್ ಪ್ರಕಟಿಸಿದ್ದು, ವಿವಾದಿತ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಶತಮಾನಗಳ ಧಾರ್ಮಿಕ ನಂಬಿಕೆಗೆ ಕಾನೂನಿನ ಮಾನ್ಯತೆ ದೊರಕಿಸಿಕೊಟ್ಟಿದೆ. ವಿವಾದಿತ 2.77 ಎಕರೆ ಪ್ರದೇಶದ ಮಂದಿರ ನಿರ್ಮಾಣಕ್ಕೆ ಸೇರಿದ್ದು ಎಂದಿರುವ ಸುಪ್ರೀಂ ಕೋರ್ಟ್, ರಾಮ್ ಲಲ್ಲಾಗೆ ವಹಿಸಿ ತೀರ್ಪು ನೀಡಿದೆ. ಹೀಗಾಗಿ ವಿವಾದಿತ ಜಾಗಕ್ಕೆ ಹೋರಾಡುತ್ತಿದ್ದ ಹಿಂದುಗಳ ನಂಬಿಕೆಗೆ ಐತಿಹಾಸಿಕ ಜಯ ದೊರೆತಂತಾಗಿದೆ. ಹಾಗೆಯೇ […]