ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಞದಲ್ಲಿ ಅಯೋಧ್ಯೆ ರಾಮಮಂದಿರದ ಸಂಕಲ್ಪ- ಇಂದಿಗೆ ಒಂದು ವರ್ಷ!
ಕುಂದಾಪುರ: ವರ್ಷದ ಹಿಂದೆ ಇಲ್ಲಿನ ಬೀಜಾಡಿ-ಗೋಪಾಡಿಯ ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವದ ಅಂಗವಾಗಿ ನಡೆದ “ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಞ”ದಂದು ರಾಮಮಂದಿರ ನಿರ್ಮಾಣ ಸಂಕಲ್ಪಮಾಡಲಾಗಿದ್ದು, ಶನಿವಾರಕ್ಕೆ ಒಂದು ವರ್ಷ ಕಳೆದಿದೆ. ಕಾಕತಾಳೀಯವೂ ಎಂಬಂತೆ ಇದೇ ದಿನ ಅಯೋಧ್ಯೆ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥಗೊಂಡಿದೆ. ೨೦೧೮ರ ನ.೯ ರಂದು ಕುಂದಾಪುರ ತಾಲೂಕಿನ ಸದ್ಯ ಗೋಪಾಡಿ-ಬೀಜಾಡಿ ಭಜನಾ ಮಂದಿರದಲ್ಲಿ ನಡೆದ ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಞದ ವೇಳೆ ಧಾರ್ಮಿಕ ವಿಧಾನ ನಡೆಸಿದ ವಿದ್ವಾಂಸರು ಹೇಳಿದ ಮಾತಿನ ತುಣುಕು […]
ದೇಶದ ಆರಾಧ್ಯ ದೇವರನ್ನು ಎಬ್ಬಿಸುವ ಉತ್ತಮ ತೀರ್ಪು: ಪಲಿಮಾರು ಶ್ರೀ
ಉಡುಪಿ: ಉತ್ಥಾನ ದ್ವಾದಶಿಯ ಪರ್ವ ಕಾಲದಲ್ಲಿ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟು, ದೇಶದ ಆರಾಧ್ಯ ದೇವರನ್ನು ಎಬ್ಬಿಸುವಂತಹ ಉತ್ತಮ ತೀರ್ಪಿನ ನ್ಯಾಯ ನೀಡಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ. ನ್ಯಾಯಾಲಯದ ಮೇಲಿಟ್ಟ ನಿರೀಕ್ಷೆ, ಭರವಸೆ ಈಡೇರಿದೆ, ನ್ಯಾಯ ಸಿಕ್ಕಿದೆ. ನ್ಯಾಯಾಧೀಶರೂ ಅಭಿನಂದನೀಯರು. ಹಿಂದೂಗಳ ಪರ ನ್ಯಾಯಕ್ಕೆ ಹಿಂದೆ ಮುಂದೆ ನೋಡದೆ, ಸಂಕೋಚವಿಲ್ಲದೆ ದಿಟ್ಟ ತೀರ್ಮಾನ ಕೈಗೊಂಡಿದ್ದಾರೆ. ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದುಗೊಳಿಸಲು ಭೂಮಿಕೆ ಸಿದ್ಧಪಡಿಸಿದಂತೆ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದ […]
ಅಯೋಧ್ಯೆ ರಾಮ ಮಂದಿರ ನಿರ್ಮಾಣ: ಸುಪ್ರೀಂ ತೀರ್ಪಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸ್ವಾಗತ
ಉಡುಪಿ: ಬಹು ದಶಕಗಳ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದವು ಸುಪ್ರೀಂ ಕೋರ್ಟ್ ತೀರ್ಪಿನಿಂದ ತೆರೆ ಕಂಡಂತಾಗಿದೆ. ದೇಶದ ಸಂವಿಧಾನದ ಮೇಲೆ ಭರವಸೆ ಇರುವ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ. ಕೇಂದ್ರ ಸರಕಾರವೇ ೩ ತಿಂಗಳ ಒಳಗೆ ಮಂದಿರ ನಿರ್ಮಾಣಕ್ಕೆ ಟ್ರಸ್ಟನ್ನು ರಚಿಸಿ ಕ್ರಮ ಕೈಗೊಳ್ಳಬೇಕು. ಮುಸ್ಲೀಮರಿಗೂ ೫ ಎಕರೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಪ್ರಕಟಿಸಿರುವ ಐತಿಹಾಸಿಕ ತೀರ್ಪು ಹಿಂದೂ […]
ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಸೇವೆ ಮಹತ್ತರವಾದುದು: ಜಿ. ಜಗದೀಶ್
ಉಡುಪಿ: ವಿಶೇಷ ಮಕ್ಕಳ ಶಾಲೆಯನ್ನು ನಿರ್ವಹಿಸುವುದು ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ಸೇವೆ ಮಹತ್ತರವಾದುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಕುಂದಾಪುರ ಅಂಪಾರಿನ ವಾಗ್ಜೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಯ ಸಹಯೋಗದಲ್ಲಿ ಶನಿವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರ ಜಿಲ್ಲಾಮಟ್ಟದ ವಿಶೇಷ ಮಕ್ಕಳ ಸಾಂಸ್ಕೃತಿಕ ಹಬ್ಬ ‘ಹೊಂಗಿರಣ–2109’ವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಿ. ಶಂಕರ್ […]
ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇವೆ: ದೇವೇಗೌಡ
ಮಂಗಳೂರು: ಅಯೋಧ್ಯೆ ವಿವಾದ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. 1992ರಲ್ಲಿ ಬಾಬರಿ ಮಸೀದಿ ಒಡೆದು ಹಾಕಿದ್ದು ಸರಿಯಲ್ಲ ಎಂದು ತೀರ್ಪಲ್ಲಿ ಉಲ್ಲೇಖಿಸಲಾಗಿದೆ. ಮಸೀದಿ ಒಡೆದಿರುವುದು ತಪ್ಪು ಅನ್ನುವುದಾದರೆ ಅಲ್ಪ ಸಂಖ್ಯಾತರಿಗೆ ಹೊಸ ಮಸೀದಿ ನಿರ್ಮಾಣಕ್ಕೆ ಒಂದಿಷ್ಟು ಪರಿಹಾರವನ್ನು ಘೋಷಿಸಬೇಕಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಾಧ್ಯಮದ ಜತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ನಾನು ವಿವರವಾಗಿ ಓದಿಲ್ಲ. ಕೇಂದ್ರ ಸರಕಾರವೇ ಪರಿಹಾರ ನೀಡುವಂತೆ ನಿರ್ದೇಶನ ನೀಡಬಹುದಾಗಿತ್ತು ಎಂದರು. […]