ಬಿಜೆಪಿ ಸಂಕುಚಿತ ಮನೋಭಾವದಿಂದ ಟಿಪ್ಪು ಜಯಂತಿ ಆಚರಿಸುತ್ತಿಲ್ಲ: ಸಿದ್ದರಾಮಯ್ಯ
ಮಂಗಳೂರು: ಕಾಂಗ್ರೆಸ್ ಸರ್ಕಾರ ಇದ್ದಾಗ, ಕೇವಲ ಟಿಪ್ಪು ಜಯಂತಿ ಮಾತ್ರವಲ್ಲದೇ ವಿವಿಧ ಜಯಂತಿಗಳನ್ನು ಆಚರಿಸಿದ್ದೇವೆ. ಆದ್ರೆ ಬಿಜೆಪಿಯವರು ಸಂಕುಚಿತ ಮನೋಭಾವದಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಂಗಳೂರಿನಲ್ಲಿ ಮಹಾನಗರ ಪಾಲಿಕೆಯ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ಟು ಬೇರೆ ಯಾವುದು ಗೊತ್ತಿಲ್ಲ. ಸುಳ್ಳು ಎನ್ನೋದು ಬಿಜೆಪಿಗೆ ಅನರ್ಥ ನಾಮ ಇದ್ದಂತೆ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ, ದೇವೇಗೌಡ ಜೊತೆಗೆ ಪೋನ್ ಮೂಲಕ ಮಾತನಾಡಿದ […]
ಉಡುಪಿ ಶ್ರೀಕೃಷ್ಣ ಮಠಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ
ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಬುಧವಾರ ಉಡುಪಿ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ್ ರವರು ಪತ್ನಿ ಸಮೇತರಾಗಿ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಕ್ಷತೆ ಪಡೆದರು.
ನ.14ರಿಂದ 20: ಜಿಲ್ಲೆಯಾದ್ಯಂತ ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಧ್ಯೇಯ ವಾಕ್ಯದಡಿ ಸಹಕಾರ ಸಪ್ತಾಹ
ಉಡುಪಿ: ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ನ. 14ರಿಂದ 20ರ ವರೆಗೆ ಜಿಲ್ಲೆಯಾದ್ಯಂತ ‘ನವ ಭಾರತದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ಧ್ಯೇಯ ವಾಕ್ಯದೊಂದಿಗೆ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಲಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ, ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ನ. 14ರಂದು ಮಧ್ಯಾಹ್ನ 3 ಗಂಟೆಗೆ ಕಾಪು […]
ಸುಳ್ಯ: ಅಕ್ರಮ ಗಂಧ ಸಾಗಾಟ; ಮೂವರ ಬಂಧನ
ಮಂಗಳೂರು: ಕಾರಿನಲ್ಲಿ ಅಕ್ರಮವಾಗಿ ಗಂಧದ ಕೊರಡು, ಚಕ್ಕೆಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಅಶ್ರಫ್, ಉನೈಸ್, ಕೃಷ್ಣ ಕುಟ್ಟಿ ಬಂಧಿತ ಆರೋಪಿಗಳು. ಮಡಿಕೇರಿಯಿಂದ ಪುತ್ತೂರಿಗೆ ಮಾರುತಿ ಆಲ್ಟೋ ಕಾರಿನಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಎರಡು ಗೋಣಿ ಚೀಲಗಳಲ್ಲಿ ಸುಮಾರು 31.424 ಕೆಜಿ ಗಳಷ್ಟು ತೂಕದ 40 ಗಂಧದ ಹಸಿ ಕೊರಡುಗಳನ್ನು ಮತ್ತು 3 ಚಕ್ಕೆಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದರು. […]
ಮಂಗಳೂರು: ಗಾಂಜಾ ಸಾಗಾಟ ನಾಲ್ವರ ಬಂಧನ
ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಮಂಗಳೂರು ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಬೂಬಕರ್ ಸಮದ್, ಕಾಸರಗೋಡು ಕಡಂಬಾರು ನಿವಾಸಿ ಮುಹಮ್ಮದ್ ಅಶ್ರಫ್, ಮುಹಮ್ಮದ್ ಅಫ್ರಿದ್, ಮುಹಮ್ಮದ್ ಅರ್ಷದ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ, 2.5 ಲಕ್ಷ ಮೌಲ್ಯದ ಹುಂಡೈ ಕಾರು, 50 ಸಾವಿರ ರೂ. ಮೌಲ್ಯದ ಸ್ಕೂಟರ್, 3 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.