ನ.9-10: ಅಂತರಾಷ್ಟ್ರೀಯ ಸಾಹಿತ್ಯ ಮೇಳ ಮಿಲಾಪ್ -2019

ಉಡುಪಿ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ವತಿಯಿಂದ ನ. 9 ಮತ್ತು 10ರಂದು ಮಣಿಪಾಲದ ಟಿಎಂಎ ಪೈ ಸಭಾಂಗಣದಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಸಾಹಿತ್ಯ ಮೇಳ ‘ಮಿಲಾಪ್‌–2019’ ನಡೆಯಲಿದೆ ಎಂದು ಮಾಹೆಯ ಯುರೋಪಿಯನ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ನೀತಾ ಇನಾಂದಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ. 9ರಂದು ಬೆಳಿಗ್ಗೆ 9.30ಕ್ಕೆ ರಂಗಕರ್ಮಿ ಮಹೇಶ್‌ ದತ್ತಾನಿ ಮೇಳಕ್ಕೆ ಚಾಲನೆ ನೀಡುವರು. ಮಾಹೆಯ ಉಪಕುಲಪತಿ ಡಾ. ಎಚ್‌. ವಿನೋದ್‌ ಭಟ್‌ ಅಧ್ಯಕ್ಷತೆ ವಹಿಸುವರು ಎಂದರು. ಅಂದು ಬೆಳಿಗ್ಗೆ […]

ಬಹುನಿರೀಕ್ಷಿತ ಸಿನಿಮಾ “ಜಬರದಸ್ತ್ ಶಂಕರ” ನ. 8ರಂದು ತೆರೆಗೆ

ಮಂಗಳೂರು: ಬಹುನಿರೀಕ್ಷಿತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಹೊಚ್ಚ ಹೊಸ ತುಳು ಸಿನಿಮಾ “ಜಬರದಸ್ತ್ ಶಂಕರ” ನವೆಂಬರ್ 8 ರಂದು ಶುಕ್ರವಾರ ಬಿಡುಗಡೆಯಾಗಲಿದೆ. ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ “ಜಬರದಸ್ತ್ ಶಂಕರ” ತುಳು ಸಿನಿಮಾ ದಿನಾಂಕವನ್ನು ಚಿತ್ರದ ನಿರ್ದೇಶಕರಾಗಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಪ್ರಕಟಿಸಿದ್ದಾರೆ. ಜಲನಿಧಿ ಫಿಲ್ಸ್ ಬ್ಯಾನರಿನಲ್ಲಿ ಇದೇ ಮೊದಲ ಬಾರಿಗೆ ಅನಿಲ್ ಕುಮಾರ್ ಮತ್ತು ಲೊಕೇಶ್ ಕೋಟ್ಯಾನ್ ಚಿತ್ರ ನಿರ್ಮಾಪಕರಾಗುತ್ತಿದ್ದು, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತುಳು […]

ವೇತನ ಪರಿಷ್ಕರಣೆಗೆ ಆಗ್ರಹಿಸಿ ವಿಶೇಷ ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಜಿಲ್ಲೆಯ ವಿಶೇಷ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ವತಿಯಿಂದ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಜಿಲ್ಲಾ ಅಂಗವಿಕಲರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ್‌ ಅವರಿಗೆ ಮನವಿ ಸಲ್ಲಿಸಲಾಯಿತು. ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪ್ರಸ್ತುತ ಕೇವಲ 13,500 ಗೌರವಧನ ಲಭಿಸುತ್ತಿದ್ದು, ಇದರಿಂದ ಅವರ ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ. ಆದ್ದರಿಂದ ಈ ಗೌರವಧನವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದರ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು. 2010ರಲ್ಲಿ […]

ವಿಶ್ವಶಾಂತಿಯ ಪಯಣ ಶೀರ್ಷಿಕೆಯಡಿ ಚಿತ್ರಕಲಾ‌ ಸ್ಪರ್ಧೆ

ಉಡುಪಿ: ಲಯನ್ಸ್‌ ಕ್ಲಬ್‌ ಬ್ರಹ್ಮಗಿರಿ ಮತ್ತು ಜಿಲ್ಲಾ 317ಸಿ ಲಿಯೋ ಕ್ಲಬ್‌ ಸಹಯೋಗದಲ್ಲಿ ಬ್ರಹ್ಮಗಿರಿಯ ಬಾಲಭವನದಲ್ಲಿ ‘ವಿಶ್ವಶಾಂತಿಯ ಪಯಣ’ ಶೀರ್ಷಿಕೆಯೊಂದಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸುಮಾರು 60ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಲಾವಣ್ಯ ಯು. ರಾವ್‌, ದ್ವಿತೀಯ ಸ್ಥಾನ ಗಳಿಸಿದ ಪ್ರಾಪ್ತಿ ಪ್ರದೀಪ್‌ ಹಾಗೂ ತೃತೀಯ ಸ್ಥಾನ ಪಡೆದ ಕೆ. ಪ್ರತಿಷ್ಠಾ ಅವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ 317 ಸಿ ಲಿಯೋ ಅಧ್ಯಕ್ಷ ಫೌಜನ್‌ ಅಕ್ರಂ ಮಾತನಾಡಿ ಮಕ್ಕಳಿಗೆ ಶುಭಹಾರೈಸಿದರು. […]

ದುಬೈಯಿಂದ ಚಿನ್ನ, ಸಿಗರೇಟ್ ಸಾಗಿಸಲು ಯತ್ನ; ಆರೋಪಿ ಬಂಧನ 

ಮಂಗಳೂರು: ಅಕ್ರಮವಾಗಿ ಚಿನ್ನ ಹಾಗೂ ಸಿಗರೇಟ್ ಸಾಗಿಸಲು ಯತ್ನಿಸಿದ ವ್ಯಕ್ತಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ದುಬಾಯಿನಿಂದ ಸ್ಫೈಸ್ ಜೆಟ್ ವಿಮಾನದಲ್ಲಿ ಆಗಮಿಸಿದ್ದ.‌ ಬಂಧಿತ ಆರೋಪಿಯಿಂದ 9.65 ಲಕ್ಷ ವೌಲ್ಯದ ಚಿನ್ನ , 6.23 ಲಕ್ಷದ ಬೇರೆ ಬೇರೆ ಬ್ರ್ಯಾಂಡ್ ನ‌ 211 ಪ್ಯಾಕ್ ಗಳಿದ್ದ ಸಿಗರೇಟ್‌ನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಕ್ಕಳ ಆಟಿಕೆಯಲ್ಲಿ ಅಡಿಗಿಸಿ ಚಿನ್ನ ಹಾಗೂ ಸಿಗರೇಟ್‌ನ್ನು ಅಡಗಿಸಿಟ್ಟುಕೊಂಡು ಸಾಗಿಸಲು ಯತ್ನಿಸಿದ್ದಾನೆ. ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ತಪಾಸಣೆ ನಡೆಸಿದಾಗ […]