ಉಪ್ಪಿನಂಗಡಿ: ಟ್ಯಾಂಕರ್ ನಿಂದ ಧಿಡೀರ್ ಅನಿಲ್ ಸೋರಿಕೆ; ಆತಂಕ

ಉಪ್ಪಿನಂಗಡಿ: ಅನಿಲ ಟ್ಯಾಂಕರೊಂದರ ಮೇಲ್ಭಾಗದ ವಾಲ್ ಏಕಾಏಕಿ ಓಪನ್ ಆಗಿ ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿ ಸ್ಥಳದಲ್ಲಿ ಆತಂಕ ಮೂಡಿಸಿದ ಘಟನೆ ಉಪ್ಪಿನಂಗಡಿ ಬಳಿಯ ಕರ್ವೇಲ್ ನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮಂಗಳೂರಿನಿಂದ ಹಾಸನ ಕಡೆ ಹೋಗುವ ಟೋಟಲ್ ಗ್ಯಾಸ್ ಕಂಪನಿಯ ಅನಿಲ ಟ್ಯಾಂಕರ್ ನ ಮೇಲ್ಭಾಗ ವಾಲ್ ಕರ್ವೇಲ್ ಬಳಿ ಬೆಳಗ್ಗೆ 8 ರ ಸುಮಾರಿಗೆ ಏಕಾಏಕಿ ತೆರೆದುಕೊಂಡಿತ್ತು. ಈ ಸಂದರ್ಭ ರಭಸದಿಂದ ನೀರು ಚಿಮ್ಮುವ ಶೈಲಿಯಲ್ಲಿ ಗ್ಯಾಸ್ ಮೇಲ್ಭಾಗಕ್ಕೆ ಚಿಮ್ಮಿ, ಗಾಳಿಯೊಂದಿಗೆ ಬೆರೆತು ಆವಿಯಾಗತೊಡಗಿತ್ತು. […]

ಮರಳಿಗಾಗಿ ಶಾಸಕರ ಮನೆಯತ್ತ ಕಟ್ಟಡ ಕಾರ್ಮಿಕರ ಬೃಹತ್ ಪಾದಯಾತ್ರೆ: ಕಾರ್ಮಿಕರನ್ನು ಸ್ವಾಗತಿಸಿದ ಶಾಸಕ ಹಾಲಾಡಿ

ಕುಂದಾಪುರ: ಕುಂದಾಪುರ, ಬೈಂದೂರು ಭಾಗಗಳಲ್ಲಿ ಅವಶ್ಯವಿರುವ ಕಡೆಗಳಲ್ಲಿ ಮರಳು ತೆಗೆಯುವ ಕುರಿತು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ಕುಂದಾಪುರ ಹಾಗೂ ಬೈಂದೂರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ(ಸಿಐಟಿಯು) ಸಂಘಟನೆಯ ನೇತೃತ್ವದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮನೆಗೆ ಕಾರ್ಮಿಕರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು. ಬೆಳಿಗ್ಗೆ ಕುಂದಾಪುರದ ವಿನಾಯಕ ಥಿಯೇಟರ್ ಎದುರಿನಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ದಾರಿಯೂದ್ದಕ್ಕೂ ವಿವಿಧ ಗ್ರಾಮ ಘಟಕಗಳ ಕಾರ್ಯಕರ್ತರು ಹೂವನ್ನು ಎಸೆಯುವುದರ ಮೂಲಕ ಪಾದಯಾತ್ರೆಯನ್ನು ಸ್ವಾಗತಿಸಿದರು. ಸಂಜೆ ೪.೩೦ರ ಸುಮಾರಿಗೆ ಸಾವಿರಾರು […]

ಕುಂದಾಪುರ: ಮರಳು ಸಮಸ್ಯೆ ನಿವಾರಿಸಲು ಆಗ್ರಹಿಸಿ ಸಿಐಟಿಯಿಂದ ಶಾಸಕರ ಮನೆಯತ್ತ ಪಾದಯಾತ್ರೆ

ಕುಂದಾಪುರ: ತಾಲೂಕಿನಲ್ಲಿ ಕಾಡುತ್ತಿರುವ ಮರಳು ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘ ಸಿಐಟಿಯು ನೇತೃತ್ವದಲ್ಲಿ ಶಾಸಕರ ಮನೆಯತ್ತ ಪಾದಯಾತ್ರೆ ಆರಂಭಗೊಂಡಿದೆ. ಸೋಮವಾರ ಬೆಳಿಗ್ಗೆ ೯.೩೦ಕ್ಕೆ ಕುಂದಾಪುರದ ವಿನಾಯಕ ಥಿಯೇಟರ್‌ನಿಂದ ಆರಂಂಭಗೊಂಡ ಕಾರ್ಮಿಕರ ಪಾದಯಾತ್ರೆಯು ಸಂಜೆ ಸುಮಾರು ೪ ಗಂಟೆಗೆ ಹಾಲಾಡಿಯಲ್ಲಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಮನೆಗೆ ತಲುಪಿ ಶಾಸಕರಿಗೆ ಮನವಿ ನೀಡಲಿದೆ. ಪಾದಯಾತ್ರೆಯಲ್ಲಿ ವಿವಿಧ ಭಾಗದ ಸುಮಾರು […]

ನ್ಯಾಯಾಲಯದಲ್ಲಿ ಇರುವ ಅನರ್ಹತೆಯ ಕುರಿತಾದ ಪ್ರಕರಣಕ್ಕೆ ಹಿನ್ನಡೆಯಾಗದು:ನಳಿನ್

ಕುಂದಾಪುರ : ಅನರ್ಹ ಶಾಸಕರು ರಾಜಿನಾಮೆ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನುವ ಧ್ವನಿ ಸುರುಳಿಯನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ನೀಡೋದರಿಂದ ನ್ಯಾಯಾಲಯದಲ್ಲಿ ಇರುವ ಅನರ್ಹತೆಯ ಕುರಿತಾದ ಪ್ರಕರಣಕ್ಕೆ ಯಾವುದೆ ರೀತಿಯ ಹಿನ್ನಡೆಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿಗೆ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. […]