ಬರಹ ರೂಪದ ಹಾಸ್ಯ ಸಾಹಿತ್ಯಕ್ಕೆ ಬರಗಾಲ: ಡಾ.ಮಹಾಬಲೇಶ್ವರ ರಾವ್
ಉಡುಪಿ: ಇಂದು ಕನ್ನಡದಲ್ಲಿ ಬರಹ ರೂಪದ ಹಾಸ್ಯ ಸಾಹಿತ್ಯಕ್ಕೆ ಬರಗಾಲ ಬಂದಿದ್ದು, ಹಾಸ್ಯ ಸಾಹಿತಿಗಳ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ ಎಂದು ಕುಂಜಿಬೆಟ್ಟು ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಆತಂಕ ವ್ಯಕ್ತಪಡಿಸಿದರು. ಸುಹಾಸಂ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ನಗರದ ಕಿದಿಯೂರು ಹೋಟೆಲ್ನ ಪವನ್ ರೂಫ್ಟಾಪ್ನಲ್ಲಿ ಭಾನುವಾರ ನಡೆದ ಎಚ್. ಶಾಂತರಾಜ ಐತಾಳ್ ಅವರ ‘ಆಯುಬೊವಾನ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಸ್ಯದ ಮೂಲಕ ವ್ಯಂಗ್ಯವಾಗಿ ಬದುಕಿನ […]
ಗುಣಮಟ್ಟದ ಟೈಲರಿಂಗ್ ಗೆ ಎಂದಿಗೂ ಬೇಡಿಕೆ: ಕೋಟ
ಉಡುಪಿ: ಗುಣಮಟ್ಟದ ಟೈಲರಿಂಗ್ ಮಾಡುವವರಿಗೆ ಯಾವತ್ತು ಕೂಡ ಬೇಡಿಕೆ ಕಡಿಮೆ ಆಗುವುದಿಲ್ಲ. ಹೊಸ ವ್ಯವಸ್ಥೆಗಳು ಬಂದಾಗ ಅದನ್ನು ಸವಾಲು ಆಗಿ ಸ್ವೀಕರಿಸಿ ನಾವು ಕೂಡ ಹೊಸತನ್ನು ಕೊಡಲು ಪ್ರಯತ್ನಿಸಬೇಕು. ಇದರಿಂದ ವೃತ್ತಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಉಡುಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ಮಾರ್ಟ್ಕಾರ್ಡ್ ವಿತರಣೆ ಮತ್ತು […]
ಮಲೆಕುಡಿಯ ಸಂಘದ ಆಶ್ರಯದಲ್ಲಿ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮ
ಕಾರ್ಕಳ: ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಆಶ್ರಯದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳಿಂದ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮವು ನ. 3ರಂದು ಸಂಘದ ಕೇಂದ್ರ ಕಚೇರಿ ಮಾಳ ಪೇರಡ್ಕದಲ್ಲಿ ಜರಗಿತು. ಮಾಳ – ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಗೋವಿಂದ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಮಲೆಕುಡಿಯ ಸಂಘವು ಹಲವಾರು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ […]
ಮಂಗಳೂರು: ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ
ಮಂಗಳೂರು: ಕಾಂಗ್ರೆಸ್ ಮುಖಂಡ ಹಾಗೂ ಕೆಥೋಲಿಕ್ ಸಭಾ ಮಂಗಳೂರು ಧರ್ಮ ಪ್ರಾಂತ ಇದರ ರಾಜಕೀಯ ಸಂಚಾಲಕ, ಅಖಿಲ ಭಾರತ ಕೆಥೋಲಿಕ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಆಗಿರುವ ದೀಪಕ್ ಅತ್ತಾವರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖ ಕಾರ್ಯಕರ್ತರಾದ ಸಿಡ್ನಿ ಫೆರ್ನಾಂಡೀಸ್ ಫಳ್ನೀರ್, ನವೀನ್ ವಾಸ್ ಬಾಬುಗುಡ್ಡ ಇವರು ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಶಾಸಕ ವೇದವ್ಯಾಸ್ ಕಾಮತ್ ಅವರು ಶಾಲು ಹೊದೆಸಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ದೀಪಕ್ […]