ಕೃತಿಯ ಮೂಲಭಾಷೆ ಅರಿತರೆ ಅನುವಾದ ಸಮರ್ಥವಾಗಿಸಬಹುದು: ಪಾರ್ವತಿ‌ ಜಿ.ಐತಾಳ್ 

ಉಡುಪಿ: ನಾವು ಆಯ್ದುಕೊಳ್ಳುವ ಕೃತಿಯ ಮೂಲಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಗ್ರಹಿಸಿಕೊಳ್ಳುವ ಶಕ್ತಿಯಿದ್ದರೆ, ಅನುವಾದವನ್ನು ಸಮರ್ಥವಾಗಿ ಅಭಿವ್ಯಕ್ತಿಪಡಿಸಬಹುದು ಎಂದು ಲೇಖಕಿ ಡಾ. ಪಾರ್ವತಿ ಜಿ. ಐತಾಳ್‌ ಹೇಳಿದರು. ರಥಬೀದಿ ಗೆಳೆಯರು ಉಡುಪಿ ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್‌ನ ಸಹಯೋಗದಲ್ಲಿ ಉಡುಪಿ ಪೇಜಾವರ ಮಠದ ಹಿಂಭಾಗದ ರಾಮವಿಠಲ ಸಭಾಭವನದಲ್ಲಿ ಶನಿವಾರ ನಡೆದ ಡಾ. ಮಹಾಲಿಂಗ ಭಟ್‌ ಅವರ ‘ನಾಣಜ್ಜೆರ್‌ ಸುದೆ ತಿರ್ಗಾಯೆರ್‌’ ತುಳು ಕಾದಂಬರಿಯನ್ನು ಡಾ. ಟಿ.ಕೆ. ರವೀಂದ್ರನ್‌ ಇಂಗ್ಲಿಷ್‌ ಭಾಷೆಗೆ ಅನುವಾದಿಸಿದ ‘ಅನ್‌ ಹೆಡ್‌ ಸೌಂಡ್ಸ್‌ ಆನ್‌’ […]

ನನ್ನ ಮೇಲೆ ನಡೆದ ಹಲ್ಲೆಯ ಬಗ್ಗೆ ಪ್ರಕರಣ ದಾಖಲಾಗಿದೆ: ಮೊಯ್ದಿನ್ ಬಾವ

ಮಂಗಳೂರು: ಮಂಗಳೂರಲ್ಲಿ ಮಹಾನಗರಪಾಲಿಕೆ ‌ಟಿಕೆಟ್ ಹಂಚಿಕೆ ವಿಚಾರದಲ್ಲಿ ನಡೆದ ಕಾಂಗ್ರೆಸ್ ಜಟಾಪಟಿ ಕುರಿತು ಮಾಜಿ ಶಾಸಕ ಮೊಯ್ದಿನ್ ಬಾವ ಕೊನೆಗೂ ಪ್ರತಿಕ್ರಿಯೆ ನೀಡಿದ್ದು, ವಿಷಾದ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ‌ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಖಾಸಗಿ ಹೊಟೇಲ್ ಬಳಿ ನಡೆದ ಘಟನೆ ಬಗ್ಗೆ ಬಹಳ ವಿಷಾದವಿದೆ. ಗಲಾಟೆ ವೇಳೆ ಮಾಜಿ ಮಹಿಳಾ ಮೇಯರ್ ಗುಲ್ಜಾರ್ ಬಾನು ಪುತ್ರ ಹಾಗೂ ಡ್ರೈವರ್ ಜತೆಗಿದ್ದರು. ಟಿಕೆಟ್ ವಿಚಾರದಲ್ಲಿ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ನನ್ನ ಮೇಲೆ ಮಾಜಿ‌ ಮಹಿಳಾ ಮೇಯರ್ ಪುತ್ರ […]

ಉಪ್ಪಿನಂಗಡಿ: ಕಾರು-ಬೈಕ್ ಢಿಕ್ಕಿ‌ ಓರ್ವ ಸಾವು

ಮಂಗಳೂರು: ಬೈಕ್ ಗೆ ಕಾರು ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ ಶನಿವಾರ ಸಂಭವಿಸಿದೆ. ಮೃತ ಸವಾರನನ್ನು ಕಲ್ಲೇರಿ ನಿವಾಸಿ ಅಬ್ದುಲ್ ಅಝೀಜ್ (37) ಎಂದು ಗುರುತಿಸಲಾಗಿದೆ. ಅಝೀಝ್ ಅವರು ತನ್ನ ಬೈಕ್ ನಲ್ಲಿ ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಆಗಮಿಸುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕಾರು ನಡುವೆ ಮಠ ಮಸೀದಿಯ ಬಳಿ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅಬ್ದುಲ್ ಅಝೀಝ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ […]

ಸಹಕಾರಿ ಕ್ಷೇತ್ರಕ್ಕೆ ‌ವಿಧಿಸಿದ ಜಿಎಸ್ ಟಿ-ತೆರಿಗೆಯಿಂದ ಸಮಸ್ಯೆ: ಲಲಿತಾ ಜಿ.ಟಿ. ದೇವೇಗೌಡ

ಉಡುಪಿ: ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ವಿಧಿಸಿರುವ ಜಿಎಸ್‌ಟಿ ಹಾಗೂ ತೆರಿಗೆಯಿಂದ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳಿಯ ಅಧ್ಯಕ್ಷೆ ಕೆ. ಲಲಿತಾ ಜಿ.ಟಿ. ದೇವೇಗೌಡ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಹಾಗೂ ಉಡುಪಿ ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯೊಳಪಡುವ ಎಲ್ಲಾ ಜಿಲ್ಲೆಗಳ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ […]

ಮಂಗಳೂರು: ಲಂಚ ಆರೋಪ ಪೊಲೀಸ್ ಕಾನ್ಸ್ಟೇಬಲ್ ಅಮಾನತು

ಮಂಗಳೂರು: ಲಂಚ ಪಡೆಯುತ್ತಿದ್ದ ಆರೋಪದಡಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್‌ ಒಬ್ಬರನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಅವರು  ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯ ಗುಪ್ತಚರ ವಿಭಾಗದ ಮುಖ್ಯ‌ಪೇದೆ ಪ್ರಶಾಂತ್ ಶೆಟ್ಟಿ, ಸಸ್ಪೆಂಡ್  ಆದ ಪೊಲೀಸ್. ಕಂಕನಾಡಿ ಬಳಿಯ ಯೂನಿಸೆಕ್ಸ್ ಪಾರ್ಲರ್ ಮಾಲೀಕರನ್ನು ಬ್ಲ್ಯಾಕ್ ಮೇಲ್ ಮಾಡಿ ಮಾಮೂಲಿಗಾಗಿ ಕೈಚಾಚುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತೀರಿ ಎಂದು ಬೆದರಿಸಿ ಪ್ರತಿ ತಿಂಗಳು ಗೂಗಲ್ ಪೇ ಆಪ್ ಮೂಲಕ ಮಾಮೂಲಿ ಪಡೆಯುತ್ತಿದ್ದರು […]