ದೀಪಾವಳಿ ಸೌಹಾರ್ದತೆಯ ಸಂದೇಶ ಸಾರುತ್ತದೆ: ಕೆ.ಪಿ. ಮಹಾಲಿಂಗು
ಉಡುಪಿ: ನಾವು ನಮ್ಮಲ್ಲಿರುವ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದರ ಮೂಲಕ ಸೌಹಾರ್ದತೆಯನ್ನು ಕಾಣಬೇಕು. ದೀಪಾವಳಿ ಹಬ್ಬ ಕೂಡ ಇದೇ ಸಂದೇಶವನ್ನು ಸಾರುತ್ತದೆ ಎಂದು ಸಾಹಿತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಡುಪಿ ವಲಯದ ಪ್ರಾದೇಶಿಕ ನಿರ್ದೇಶಕ ಕೆ.ಪಿ. ಮಹಾಲಿಂಗು ಹೇಳಿದರು. ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಉಡುಪಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಶೋಕಮಾತಾ ಇಗರ್ಜಿಯ ವಠಾರದಲ್ಲಿ ಮಂಗಳವಾರ ಆಯೋಜಿಸಿದ ಸರ್ವ ಧರ್ಮ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ […]
ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ: ಪಿ.ಎಸ್. ಎಡಪಡಿತ್ತಾಯ
ಉಡುಪಿ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಗುರುವಿನ ಮಾರ್ಗದರ್ಶನ, ನಿರ್ದಿಷ್ಟ ಗುರಿ, ಯೋಗ್ಯತೆ ಹಾಗೂ ದೈವಿ ಶಕ್ತಿ ಮುಖ್ಯ. ಇವುಗಳನ್ನು ಬ್ರಾಹ್ಮಣರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಸ್. ಎಡಪಡಿತ್ತಾಯ ಹೇಳಿದರು. ಉಡುಪಿ ಸೌತ್ ಕೆನರಾ ಕಾಸರಗೋಡು ದ್ರಾವಿಡ ಬ್ರಾಹ್ಮಣ ಎಜುಕೇಶನ್ ಸೊಸೈಟಿಯ ವತಿಯಿಂದ ಉಡುಪಿ ಅದಮಾರು ಗೆಸ್ಟ್‌ಹೌಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ರಾಹ್ಮಣಿಕೆಯ ಮೂಲಕ ಮಾನವೀಯತೆ ಮೆರೆದರೆ ಉತ್ತಮ ಬ್ರಾಹ್ಮಣರಾಗಲು […]
ದೈವಾರಾಧನೆಗೆ ಅಪಚಾರ ಎಸಗಿದ ವ್ಯಕ್ತಿಯ ಬಂಧನ
ಮಂಗಳೂರು: ತುಳುವರ ನಂಬಿಕೆ ಯಾದ ದೈವಾರಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ದ ಆರೋಪಿಯನ್ನು ಮಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುದ್ದುರಾಜ ಕನ್ನಡಿಗ ಅಲಿಯಾಸ್ ಮುದ್ದುರಾಜ ದೇಸಾಯಿಗೌಡ(37) ಬಂಧಿತ ಆರೋಪಿ. ಟ್ರೋಲ್ ಹು ಟ್ರೋಲ್ ಕನ್ನಡಿಗ’ ಎಂಬ ಪೇಜ್ನಲ್ಲಿ ದೈವಾರಾಧನೆಯ ಬಗ್ಗೆ ಟ್ರೋಲ್ ಮಾಡಿದ್ದ. ಅರ್ನಾಲ್ಡ್ ತುಳುವ ಎಂಬುವರು ಸೈಬರ್ ಕ್ರೈಂಗೆ ದೂರು ನೀಡಿದ್ದರು.
ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಹೋರಾಟ: ಮುನೀರ್ ಕಾಟಿಪಳ್ಳ
ಮಂಗಳೂರು: ಎಂಆರ್ ಪಿ ಎಲ್ ಉದ್ಯೋಗಗಳಲ್ಲಿ ಶೇಕಡಾ 80 ರಷ್ಟು ಪಾಲು ಸ್ಥಳೀಯ ನಿರುದ್ಯೋಗಿ ಯುವಜನರಿಗೆ ಸಿಗಲೇಬೇಕು. ಅದು ಕೈಗಾರಿಕೆಗಾಗಿ ನೆಲ, ಜಲ ನೀಡಿದ ತುಳುನಾಡಿನ ಹಕ್ಕು. ಕಂಪೆನಿ ಈ ನ್ಯಾಯಯುತ ಬೇಡಿಕೆಯನ್ನು ಕಡೆಗಣಿಸಿದರೆ ಉದ್ಯೋಗದ ಹಕ್ಕಿನ ಹೋರಾಟ ಗಂಭೀರ ಸ್ವರೂಪ ಪಡೆಯಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು. ಅವರು ಎಂ ಆರ್ ಪಿ ಎಲ್ ಪ್ರಧಾನ ದ್ವಾರದ ಮುಂಭಾಗ ಎಮ್ ಆರ್ ಪಿ ಎಲ್ ನೇಮಕಾತಿ ನಡೆಸುತ್ತಿರುವ 233 ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು […]
ಮಂಗಳೂರು: ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ವಿಶೇಷ ಅಡುಗೆ ಸ್ಪರ್ಧೆ
ಮಂಗಳೂರು: ವಿದ್ಯಾರ್ಥಿಗಳು ಮತ್ತು ಪೊಷಕರು ಪಾಕಶಾಲೆಯ ಕೌಶಲ್ಯಗಳನ್ನು ಒಟ್ಟಾಗಿ ಅನ್ವೇಷಿಸಲು ಮತ್ತು ಪ್ರದರ್ಶಿಸಲು ಪದವಿ ಪೂರ್ವ ಶಿಕ್ಷಣದಲ್ಲಿ ನಡೆದ ಮಾಸ್ಟರ್ ಶೆಫ್ ಸ್ವರ್ಧೆ ೨೦೧೯ ಕಾರ್ಯಕ್ರಮವು ವಳಚ್ಚಿಲ್ ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜು ಮತ್ತು ಸ್ಪೇಡ್ ಇಂಟಿಗ್ರೇಟೆಡ್ ಸರ್ವೀಸಸ್ ಘಟಕವಾದ ಸ್ಪೈಸಸ್‌ಎನ್ ಶೆಫ್ ಇವರ ಜಂಟಿ ಆಶ್ರಯದಲ್ಲಿ ನಡೆಯಿತು. ಗೇಟ್ ವೇ ಹೊಟೇಲ್ (ತಾಜ್) ಕಾರ್ಯನಿರ್ವಾಹಕ ಬಾಣಸಿಗ ಶ್ರೀಯುತ ಸಿನು ವಿಜಯನ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಹಲವು ಸವಾಲು ಬರುತ್ತವೆ ಆದರೆ ಅವುಗಳನ್ನು ಮೆಟ್ಟಿನಿಂತು ಗೆಲ್ಲಬೇಕು ಎಂದು […]