ಕಾಂಗ್ರೆಸ್ ನಾಯಕಿ ಜಯಶ್ರೀಕೃಷ್ಣರಾಜ್ ನಿಧನ

ಉಡುಪಿ: ಕಾಂಗ್ರೆಸ್ ನಾಯಕಿ ಜಯಶ್ರೀ ಕೃಷ್ಣರಾಜ್ (68)ಸೋಮವಾರ ದಿಲ್ಲಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ, ಇಬ್ವರು ಪುತ್ರಿಯರನ್ನು ಅಗಲಿದ್ದಾರೆ. ದೆಹಲಿಯಲ್ಲಿರುವ ಮಗಳ‌ ಮನೆಗೆ ತಿಂಗಳ ಹಿಂದೆ ಹೋಗಿದ್ದರು. ಅಲ್ಲಿ ಹೃದಯಾಘಾತ ಸಂಭವಿಸಿದೆ. ಒಂದು ಬಾರಿ ಉಡುಪಿ ನಗರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದರು. ಇವರು ಮಲ್ಪೆ ಮಧ್ವರಾಜ್ ಅವರ ಸಹೋದರ ಕೃಷ್ಣರಾಜ ಅವರ ಪತ್ನಿ.

ಕಿನ್ನಿಮೂಲ್ಕಿ: ಪೃಥ್ವಿ ಏಜೆನ್ಸೀಸ್ ದೀಪಾವಳಿ ಸೇಲ್ ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ

ಉಡುಪಿ: ಇಲ್ಲಿನ ಕಿನ್ನಿಮುಲ್ಕಿಯಲ್ಲಿರುವ ಗೃಹೋಪಕರಣ, ಪೀಠೋಪಕರಣಗಳ ಮಳಿಗೆ ಪೃಥ್ವಿ ಏಜೆನ್ಸಿಸ್ ನಲ್ಲಿ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಆಫರ್ ಸೇಲ್ ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ದೀಪದ ಹಬ್ಬಕ್ಕೆ ಪೃಥ್ವಿ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಸಂತೃಪ್ತಿ ಪಡೆದಿದ್ದಾರೆ. ಆಫರ್ ನಲ್ಲಿ ಏನೇನಿದೆ? ಟೀಕ್ ವುಡ್ ಬೆಂಚ್, ರಾಕಿಂಗ್ ಚೇರ್, ಕಾರ್ನರ್ ರ್ಯಾಕ್, ಟಿವಿ ಯುನಿಟ್, ಫ್ಲವರ್ ಪಾಟ್, ಕಾಫಿ ಟೇಬಲ್, ಸೈಡ್ ಟೇಬಲ್, ಸ್ವಿಂಗ್ಸ್, ಶೋಕೇಸ್, ಸೋಫಾ ಸೆಟ್, ಮ್ಯಾಗಜಿನ್ ರ್ಯಾಕ್, ಟವಲ್ ರ್ಯಾಕ್, ಮಂದಿರ್, ವಾಕಿಂಗ್ […]

ಶ್ರೀ ಅದಮಾರು ಮಠದ ಗೋಶಾಲೆಯಲ್ಲಿ ದೀಪಾವಳಿ ಸಂಭ್ರಮ, ಗೋಪೂಜೆ

ಉಡುಪಿ:  ಶ್ರೀ ಅದಮಾರು ಮಠದ ಗೋಶಾಲೆಯ  ಗೋವುಗಳಿಗೆ   ದೀಪಾವಳಿಯ ಬಲಿ ಪಾಡ್ಯದಂದು  ಅದಮಾರು ಮಠಾಧೀಶರಾದ  ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಗೋಗ್ರಾಸ ನೀಡಿ  “ಗೋ ಪೂಜೆ”ಯನ್ನು ನಡೆಸಿದರು. ಮಠದ ವಿದ್ವಾಂಸರಾದ ವಂಶಿಕೃಷ್ಣ ಆಚಾರ್ಯ,ಅದಮಾರು ಮಠ ಅತಿಥಿ ಗೃಹದ ಪ್ರಬಂಧಕರಾದ ಗೋವಿಂದರಾಜ್,ಮಠದ ಜನಾರ್ಧನ ಕೊಟ್ಟಾರಿ ಉಪಸ್ಥಿತರಿದ್ದರು.

ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವುದರಿಂದ ಒತ್ತಡ ನಿವಾರಣೆ ಸಾಧ್ಯ – ಡಾ|ವಿರೂಪಾಕ್ಷ ದೇವರುಮನೆ

ಕೋಟ: ನಮ್ಮವರೊಂದಿಗೆ ಹೆಚ್ಚು ಹೆಚ್ಚು ಮಾತನಾಡುವುದರಿಂದ ಮತ್ತು ಪ್ರತಿಯೊಬ್ಬರ ಬಗ್ಗೆ ಸಕಾರತ್ಮಕ ಭಾವನೆ ಬೆಳೆಸಿಕೊಂಡು ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಂಡಾಗ ಮಾನಸಿಕ ಒತ್ತಡ ನಿವಾರಣೆ ಸಾಧ್ಯ ಎಂದು ಎ ವಿ ಬಾಳಿಗ ಆಸ್ಪತ್ರೆ ಇದರ ಮನೋರೋಗ ತಜ್ಞ ಡಾ|ವಿರೂಪಾಕ್ಷ ದೇವರು ಮನೆ ಅಭಿಪ್ರಾಯ ಪಟ್ಟರು. ಅವರು ಭಾನುವಾರ ಸಂತ ಅಂತೋನಿ ದೇವಾಲಯ ಸಾಸ್ತಾನ ಇದರ ಸ್ವಾಸ್ಥ್ಯ ಆಯೋಗ, ಕೆಥೊಲಿಕ್ ಸಭಾ ಮತ್ತು ಕೆಥೊಲಿಕ್ ಸ್ತ್ರೀ ಸಂಘಟನೆ ಜಂಟಿಯಾಗಿ ಆಯೋಜಿಸಿದ ಆಧುನಿಕ ಜೀವನ ಪದ್ದತಿ ಮತ್ತು ಒತ್ತಡ ನಿವಾರಣೆ ಕುರಿತ […]

ಯುಸಿಎ ಸಾಸ್ತಾನ ಘಟಕ ವತಿಯಿಂದ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ

ಕೋಟ: ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಇದರ ಸಾಸ್ತಾನ ಸಂತ ಅಂತೋನಿ ದೇವಾಲಯ ಘಟಕ, ಗ್ರಾಮ ಹಿತರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ ಮತ್ತು ಸ್ವಸಹಾಯ ಸಂಘಗಳು ಸೂಲ್ಕುದ್ರು ಇವರ ಜಂಟಿ ಆಶ್ರಯದಲ್ಲಿ ಹಿಂದೂ – ಕ್ರೈಸ್ತ ಬಾಂಧವರೊಂದಿಗೆ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ ಶನಿವಾರ ಜರುಗಿತು. ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಉದಯ ಪೂಜಾರಿ ದೀಪಾವಳಿ ಹಬ್ಬದ ದೀಪಗಳನ್ನು ಬೆಳಗಿಸಿ ಮಾತನಾಡಿ ಸಂಘಟನೆಯ ವತಿಯಿಂದ ಹೊಸ ಆಚರಣೆಗೆ ನಾಂದಿ ಹಾಡಿದ್ದು ಎಲ್ಲಾ ಸಮುದಾಯಗಳನ್ನು ಬೆಸೆಯುವ ದೀಪಗಳ ಹಬ್ಬ ಪ್ರತಿಯೊಬ್ಬರ ಬಾಳಿನಲ್ಲಿ […]