ಬಹುಭಾಷಾ ನಟ ಅರ್ಜುನ್ ಸರ್ಜಾ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ
ಮಂಗಳೂರು: ಬಹುಭಾಷಾ ನಟಅರ್ಜುನ್ ಸರ್ಜಾ ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದರು. ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕೇತ್ರದ ವಾಸ್ತುಶಿಲ್ಪ ಕೆತ್ತನೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಜಾ ಅವರು ಚೆನ್ನೈಯ ಗೇರುಗಂಬಾಕನಲ್ಲಿ ಬೃಹತ್ ಹನುಮಾನ್ದೇವಸ್ಥಾನವೊಂದನ್ನು ನಿರ್ಮಿಸುತ್ತಿದ್ದಾರೆ. ಅದಕ್ಕಾಗಿ ಮಂಗಳೂರಿನ ವಾಸ್ತುಶಿಲ್ಪಿ ಜೊತೆ ಪೊಳಲಿ ಕ್ಷೇತ್ರದ ವಾಸ್ತು ಶಿಲ್ಪ ಮತ್ತು ಮರದ ಕೆತ್ತನೆಯನ್ನು ವೀಕ್ಷಿಸುವುದಕ್ಕಾಗಿ ಆಗಮಿಸಿದ್ದರು. ವಾಸ್ತುಶಿಲ್ಪ ಕೆತ್ತನೆಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಅ.26ರಂದು ರಜೆ
ಉಡುಪಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ(ಅ.26) ರಜೆ ನೀಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ನಮಗೆಲ್ಲ ಕ್ರೀಡಾಸ್ಪೂರ್ತಿಯಾದ ಹಿರಿಯಡ್ಕ ಗಾಂಧೀಮೈದಾನ ಉಳಿಸಿ ಎಂದು ಮೊರೆಯಿಟ್ಟರು: ಮೈದಾನದಲ್ಲಿ ಮರಳು ದಾಸ್ತಾನಿಗೆ ಸಾರ್ವಜನಿಕರ ಬೇಸರ
ಹಿರಿಯಡ್ಕ: ಕ್ರೀಡಾ ಸ್ಪೂರ್ತಿಗೆ ಕಿಚ್ಚಾಗಿದ್ದ, ಯುವ ಜನರ ಪ್ರೇರಣೆಯಾಗಿದ್ದ, ನೂರಾರು ಜನರ ಕ್ರೀಡಾ ಬದುಕಿಗೆ ದಾರಿದೀಪವಾಗಿದ್ದ ಹಿರಿಯಡ್ಕದ ಗಾಂಧೀ ಮೈದಾನವನ್ನು ಉಳಿಸಿಕೊಡಿ, ನಮ್ಮ ಕ್ರೀಡಾ ಮನೋಭಾವಕ್ಕೆ ಪೇರಣೆನೀಡುತ್ತಿದ್ದ ಈ ಪ್ರೀತಿಯ ಮೈದಾನವನ್ನು ಉಳಿಸಿಕೊಡಿ ಎಂದು ಗೋಗರೆಯುತ್ತಿದ್ದಾರೆ ಈ ಮೈದಾನದಲ್ಲಿ ಆಟವಾಡಿದ ಯುವಕರು. ಯಾಕಪ್ಪಾ ಅಂತದ್ದೇನಾಯ್ತು? ಈ ಮೈದಾನಕ್ಕೆ ಅಂತ ನೀವು ಕೇಳಬಹುದು. ಇಲ್ಲಿನ ಯುವಕರ ಜೀವವೇ ಆಗಿರುವ ಈ ಮೈದಾನದಲ್ಲಿ ಮರಳು ಶೇಖರಣೆ ಮಾಡಿ ಇದನ್ನು ಕ್ರಮೇಣವಾಗಿ ಮರಳು ಶೇಖರಣಾ ಸ್ಥಳ ಮಾಡುವ ಉದ್ದೇಶದಿಂದ ಮೈದಾನಕ್ಕೆ ಬೇಲಿ […]
ನಾವು ಬಿಡುವ ಪಟಾಕಿ ಸದ್ದಿನಿಂದ ಹಕ್ಕಿಗಳಿಗೇನಾಗುತ್ತೆ ಗೊತ್ತಾ? : ಕಣ್ಣು ತೆರೆಸೋ ಈ ವಿಡಿಯೋ ಒಮ್ಮೆ ನೋಡಿ
ವಿದ್ಯಾರ್ಥಿಗಳು ಮಾಡಿದ ಈ ವಿಡಿಯೋ ನೋಡಿ ಪಕ್ಷಿಗಳು ಅತ್ಯಂತ ಸೂಕ್ಷ್ಮ ಜೀವಿಗಳು, ಪಟಾಕಿಗಳ ಗಾಢ ಸದ್ದು ಅವುಗಳ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಡುತ್ತದೆ ಎನ್ನುವುದನ್ನು ಬಹಳ ಹೃದ್ಯವಾಗಿ ಪುಟ್ಟದ್ದೊಂದು ವಿಡಿಯೋ ಮೂಲಕ ಕಟ್ಟಿಕೊಟ್ಟಿದ್ದಾರೆ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು. ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಪ್ರತೀ ಸಲ ದೀಪಾವಳಿ ಬಂದಾಗಲೂ ದೀಪಕ್ಕಿಂತ ಮೊದಲು ನೆನಪಾಗೋದೇ ಡಬ್ ಡಬ್ ಮಾಡುವ ಪಟಾಕಿಗಳ ಕಿವಿಗಡಚಿಕ್ಕುವ ಸದ್ದು. ಪಟಾಕಿಗಳ ಹೊಗೆ, ಅದರ ಸದ್ದು, ಅದರ ಗಾಳಿ […]
ಉಡುಪಿ: ಶುಕ್ರವಾರ ಸುರಿಯಲಿದೆ ಭಾರೀ ಮಳೆ: ಶಾಲಾ-ಕಾಲೇಜುಗಳಿಗೆ ರಜೆ,
ಉಡುಪಿ: ಕರಾವಳಿ ಭಾಗಕ್ಕೆ ಕ್ಯಾರ್ ಚಂಡಮಾರುತದ ಪರಿಣಾಮ ತೀವ್ರವಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದ್ದು ಮುಂಜಾಗ್ರತಾ ಕ್ರಮವಾಗಿ, ಅ.25ರಂದು ಉಡುಪಿ ಜಿಲ್ಲೆಯ ಪ್ರಾಥಮಿಕ – ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ಈ ಮಾರುತಗಳ ಹೊಡೆತ ಕರಾವಳಿಗೆ ತಟ್ಟಲಿದೆ ಎನ್ನಲಿರುವ […]