ದೀಪಾವಳಿಯನ್ನು ಸ್ಮರಣೀಯವಾಗಿಸುತ್ತಿದೆ “ಸ್ಮರಣಿಕಾ”: ದೀಪದ ಹಬ್ಬಕ್ಕೆ ಇಲ್ಲಿದೆ ಸೂಪರ್ ಕೊಡುಗೆ
ಉಡುಪಿ: ಈ ಸಲದ ದೀಪಾವಳಿ ಹಬ್ಬವನ್ನು ಸ್ಮರಣೀಯವಾಗಿಸಲು ಸ್ಮರಣಿಕಾ ಸಂಸ್ಥೆ ಸಜ್ಜಾಗಿದೆ. ಮೊಮೆಂಟೊ ಮತ್ತು ಗಿಫ್ಟ್ ಗೆ ಹೆಸರಾದ ಸ್ಮರಣಿಕಾ ಸಂಸ್ಥೆಯು ಕಲ್ಸಂಕ ವೃತ್ತದ ಬಳಿಯ ಸ್ಮರಣಿಕಾ ರೋಯಲೆ ಕಟ್ಟಡದಲ್ಲಿದೆ. ಅಂದ ಹಾಗೇ ಈ ಸಲ ಸ್ಮರಣಿಕಾ ಮೊಮೆಂಟೊ ಗಿಫ್ಟ್ ಮಳಿಗೆಯ ಪ್ರಥಮ ವಾರ್ಷಿಕೋತ್ಸದ ಸಂಭ್ರಮ ಮತ್ತು ದೀಪಾವಳಿಯ ಪ್ರಯುಕ್ತ ಈ ಹೆಮ್ಮೆಯ ಸಂಸ್ಥೆ ವಿಶೇಷ ಕೊಡುಗೆಯ ಮಾರಾಟ ಆಯೋಜಿಸಿದೆ. ರೂ 1,000 ಖರೀದಿಗೆ ಕಾದಿದೆ ಭರ್ಜರಿ ಬಹುಮಾನ: ಉಡುಪಿ ರೆಸಿಡೆನ್ಸಿ ಸಮೀಪದ ಅಫನ್ ಕಾಂಪ್ಲೆಕ್ಸ್ ನಲ್ಲಿ […]
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಎಂಸ್ಕ್ರಿಪ್ಟ್ಸ್ ನಡುವೆ ಒಡಂಬಡಿಕೆ
ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬೆಂಗಳೂರಿನ ಎಂಸ್ಕ್ರಿಪ್ಟ್ಸ್ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ ನಡುವಿನ ಶೈಕ್ಷಣಿಕ ಒಪ್ಪಂದದ ಹಸ್ತಾಂತರ ಕಾರ್ಯಕ್ರಮವು ಸೆ.24 ರಂದು ಕಾಲೇಜಿನಲ್ಲಿ ನಡೆಯಿತು. ಒಪ್ಪಂದದ ಪ್ರಮಾಣಪತ್ರಕ್ಕೆ ನಿಟ್ಟೆ ತಾಂತ್ರಿಕ ಕಾಲೇಜಿನ ವತಿಯಿಂದ ಪ್ರಾಂಶುಪಾಲ ಡಾ| ನಿರಂಜನ್ ಎನ್.ಚಿಪ್ಳೂಣ್ಕರ್ ಹಾಗೂ ಎಂಸ್ಕ್ರಿಪ್ಟ್ಸ್ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ ವತಿಯಿಂದ ಕಂಟ್ರಿಮ್ಯಾನೇಜರ್ ಮತ್ತು ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಶ್ರೀ ಮಹೇಶ್ ಶ್ರೀವಾತ್ಸವ್ ಸಹಿಹಾಕಿದರು. ಈ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ| ಐ ಆರ್ ಮಿತ್ತಂತಾಯ, ಡಾ| […]
ಎಂಡೋಸಲ್ಫಾನ್ ಬಾಧಿತ ವಿಶೇಷ ಚೇತನ ಬಾಲಕಿಯ ನೃತ್ಯ ವೈರಲ್..
ಮಂಗಳೂರು: ಎಂಡೋಸಲ್ಫಾನ್ ಬಾಧಿತ ವಿಶೇಷಚೇತನ ಬಾಲಕಿಯೊಬ್ಬಳು ಶಾಲೆಯಲ್ಲಿ ಮಾಡಿದ ನೃತ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಸಂಚಲನ ಮೂಡಿಸಿದೆ. ಕೇರಳದ ಕಾಸರಗೋಡು ಜಿಲ್ಲೆ ಕಾಟುಕುಕ್ಕೆಯ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತೃಷಾಲಕ್ಷ್ಮೀ ಈಗ ಎಲ್ಲರ ಕಣ್ಮಣಿ. ಈಕೆ ತುಳು ಗೀತೆಗೆ ತನ್ನ ಊನಗೊಂಡ ಪಾದಗಳ ಮೂಲಕ ಇರಿಸಿದ ಹೆಜ್ಜೆ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ. ಮನದೊಳಗಿನ ಕಲೆಯ ಬಗೆಗಿನ ಆಸಕ್ತಿ ಹಾಗೂ ತನ್ನ ಪ್ರತಿಭೆಯನ್ನು ಅನಾವರಣಗೊಳಿಸುವ ತುಡಿತದಿಂದ ಶಾಲಾ […]
ಕರಾವಳಿಯಾದ್ಯಂತ ಮಳೆ: ಅಲ್ಲಲ್ಲಿ ಹಾನಿ
ಉಡುಪಿ: ಕರಾವಳಿಯಲ್ಲಿ ಮಳೆ ಮುಂದುವರಿದ್ದು, ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ವನಜ ಪೂಜಾರ್ತಿ ಅವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ತಗ್ಗುಪ್ರದೇಶ ಕೃಷಿ ಗದ್ದೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಕಟಾವಿಗೆ ಬಂದಿದ್ದ ಭತ್ತ ಬೆಳೆಗೆ ಹಾನಿ ಆಗಿದೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಉಡುಪಿಯಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮಳೆ ಜೋರಾಗಿ ಸುರಿದಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 81.20 ಮಿ.ಮೀ ಸರಾಸರಿ ಮಳೆಯಾಗಿದ್ದು, ಉಡುಪಿಯಲ್ಲಿ 97.1, ಕುಂದಾಪುರದಲ್ಲಿ 86.4 ಹಾಗೂ […]
ದ.ಕ.ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ: ಅ. 25ರಂದು ಶಾಲೆ/ಪಿಯು ಕಾಲೇಜುಗಳಿಗೆ ರಜೆ
ಮಂಗಳೂರು: ಅರಬ್ಬಿ ಸಮುದ್ರ ಹಾಗೂ ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಅ.23ರ ರಾತ್ರಿಯಿಂದ ತೀವ್ರಗತಿಯಲ್ಲಿ ಮಳೆಯಾಗುತ್ತಿದೆ. ಹೀಗಾಗಿ ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಸನ್ನಿವೇಶವು ಉದ್ಭವಿಸಿದ್ದು, ಇದು ತೀವ್ರ ರೂಪ ಪಡೆದುಕೊಂಡು ಇನ್ನಷ್ಟು ಬಿರುಸಾಗಿ ಮಳೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ ಅನುದಾನಿತ ಮತ್ತು ಪಿಯು ತರಗತಿವರೆಗೆ ನಾಳೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ […]