ಮಣಿಪಾಲ: ಭತ್ತ ಸಾಗಿಸುತ್ತಿದ್ದ ಲಾರಿ ಪಲ್ಟಿ; ಅಪಾಯದಿಂದ ಚಾಲಕ ಪಾರು
ಮಣಿಪಾಲ: ಉಡುಪಿಯದ ಕಾರ್ಕಳಕ್ಕೆ ಭತ್ತ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ಮಣಿಪಾಲದಲ್ಲಿ ನಡೆದಿದೆ. ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಣಿಪಾಲ ಮುಖ್ಯ ರಸ್ತೆಯಲ್ಲಿ ಅರೆಬರೆ ಹೆದ್ದಾರಿ ಕಾಮ ಗಾರಿಯಿಂದ ಎದುರಿಗೆ ಬಂದ ಬೈಕ್‌ವೊಂದನ್ನು ತಪ್ಪಿಸಲು ಮುಂದಾಗಿದ್ದು, ಈ ವೇಳೆ ಲಾರಿಯ ಚಕ್ರ ಕಾಂಕ್ರಿಟ್ ರಸ್ತೆಯಿಂದ ಕೆಳಗೆ ಜಾರಿದ ಪರಿಣಾಮ ಲಾರಿ ಉರುಳಿಬಿದ್ದಿದೆ. ಲಾರಿಯು ಹಳಿಯಾಳದಿಂದ ಕಾರ್ಕಳ ರೈಸ್ ಮಿಲ್‌ಗೆ ಭತ್ತವನ್ನು ಸಾಗಿಸುತಿತ್ತು ಎಂದು ತಿಳಿದುಬಂದಿದೆ. ಅಪಘಾತದಿಂದ ಲಾರಿ […]
ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಅಗ್ರಸ್ಥಾನ
ನವದೆಹಲಿ: ಸತತ 12ನೇ ಬಾರಿಗೂ ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ 3.7 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯೊಂದಿಗೆ ಅವರು ಮೊದಲ ಸ್ಥಾನ ಪಡೆದಿದ್ದಾರೆ. ಉದ್ಯಮಿ ಗೌತಮ್ ಅದಾನಿ ಈ ಸಲ 1.11 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ಅವರು 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಹಿಂದೂಜಾ ಸೋದರರು 1.1 ಲಕ್ಷ ಕೋಟಿ ರೂ. ಮೂರನೇ ಸ್ಥಾನದಲ್ಲಿ ಇದ್ದಾರೆ. ಇನ್ನು 4ರಲ್ಲಿ ಪಲ್ಲೋನ್‌ಜಿ ಮಿಸ್ತ್ರಿ 1 ಲಕ್ಷ ಕೋಟಿ ರೂ. […]
ಶಿರ್ವ: ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲ- ಧರ್ಮಗುರು ಮಹೇಶ್ ಡಿಸೋಜಾ ಅತ್ಮಹತ್ಯೆ
ಉಡುಪಿ: ಶಿರ್ವ ಡೋನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ್ ವಂ|ಮಹೇಶ್ ಡಿಸೋಜಾ (36) ಶುಕ್ರವಾರ ಆತ್ಮಹತ್ಯೆ ಶರಣಾಗಿದ್ದಾರೆ. ಶಾಲೆಯ ಕ್ಯಾಬಿನ್ ಒಳಗೆ ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಲತಃ ಮೂಡಬೆಳ್ಳೆಯವರಾಗಿದ್ದ ಅವರು 2013ರಲ್ಲಿ ಗುರು ದೀಕ್ಷೆ ಪಡೆದಿದ್ದರು. ಡಾನ್ ಬಾಸ್ಕೊ ಶಾಲೆಯನ್ನು ಸಿಬಿಎಸ್ ಸಿ ಪಠ್ಯಕ್ರಮಕ್ಕೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟ ಶಾಲೆಯಾಗಿದೆ. ಇವರು ಉಡುಪಿ ಧರ್ಮಪ್ರಾಂತ್ಯದ […]