ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ ಬಿಡುಗಡೆ
ಕೋಟ: ಎಡಿಟರ್ಸ್‍ಹಬ್ ಮಿಡಿಯಾ ಹೌಸ್ ಮತ್ತು ಮಾಯಾಬಜಾರ್ ಸಾರಥ್ಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ ಚಿತ್ರ ನಟ ಪ್ರಮೋದ್ ಶೆಟ್ಟಿ ಬೇಳೂರಿನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಪತ್ರಕರ್ತ ವಸಂತ್ ಗಿಳಿಯಾರ್, ಹರೀಶ್ ಕಿರಣ್ ತುಂಗ, ಪ್ರವೀಣ್ ಯಕ್ಷಿಮಠ್, ರಾಘವೇಂದ್ರ ಹಿರಿಯಣ್ಣ ಉಪಸ್ಥಿತರಿದ್ದರು.
ಉಡುಪಿ ‘ಸಿಂಡ್ ವಾಹನ ಮೇಳ’ ಉದ್ಘಾಟನೆ: ವಾಹನ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಿಂಡ್ ಸಾಲ ಸೌಲಭ್ಯ: ಟಿ.ಅಶೋಕ್ ಪೈ
ಉಡುಪಿ: ಉಡುಪಿ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ಮತ್ತು 2ರ ಆಶ್ರಯದಲ್ಲಿ ಹಬ್ಬಗಳ ಸೀಸನ್ ಪ್ರಯುಕ್ತ ಅ.12, 13ರಂದು ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾದ ಸಿಂಡ್ ವಾಹನ ಮೇಳವನ್ನು ಮಣಿಪಾಲದ ಡಾ| ಟಿ.ಎನ್.ಎ ಪೈ. ಫೌಂಡೇಶನ್ ಕಾರ್ಯದರ್ಶಿ ಟಿ. ಅಶೋಕ ಪೈ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ನಮ್ಮ ಕೆಲವು ಹಬ್ಬ ಆಚರಣೆಯ ಸಮಯದಲ್ಲಿ ಹೊಸಬಗೆಯ ಚಿನ್ನ ವಾಹನ, ಇನ್ನಿತರ ಅವಶ್ಯ ಗೃಹೋಪಕರಣಗಳನ್ನು ಖರೀದಿಸುತ್ತೇವೆ. ಜತೆಗೆ ಸ್ವಂತ ವಾಹನ ಖರೀದಿಸಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಹೀಗಾಗಿ ಇಂಥವರಿಗೆ ಸಿಂಡ್ […]
ಮಂಗಳೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಇಬ್ಬರು ಯುವಕರಿಂದ ಮೌನ ಪ್ರತಿಭಟನೆ
ಮಂಗಳೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ದಿನನಿತ್ಯದಲ್ಲಿ ಹಲವು ರೀತಿಯ ಪ್ರತಿಭಟನೆ ನಡೆಯುತ್ತದೆ. ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಸಂಘ ಸಂಸ್ಥೆಗಳ ವತಿಯಿಂದ ಬೆಂಬಲ ಕೂಡ ಇರುತ್ತದೆ. ಆದರೆ ಇಲ್ಲಿ ಇಬ್ಬರು ವ್ಯಕ್ತಿಗಳು ಪ್ರಮುಖ ರಸ್ತೆ ಸರಿಪಡಿಸುವಂತೆ ಸರ್ಕಲ್‌ನಲ್ಲಿ ಕೂತು ಯಾವುದೇ ಪ್ರಚಾರವಿಲ್ಲದೇ, ಯಾರ ಬೆಂಬಲ ಇಲ್ಲದೇ ಪ್ರತಿಭಟನೆ ಮಾಡುತ್ತಿದ್ದಾರೆ. ಮಂಗಳೂರಿನ ನಂತೂರು ರಸ್ತೆ ದುರಸ್ತಿಗೆ ಆಗ್ರಹಿಸಿ ರೂಪನ್ ಫೆರ್ನಾಂಡೀಸ್ ಮತ್ತು ಅರ್ಜುನ್ ಮಸ್ಕರೇನಸ್ ಎಂಬುವರು ನಂತೂರು ಸರ್ಕಲ್ ವೃತ್ತದಲ್ಲಿ ನಾಗರಿಕರ ಪರವಾಗಿ ಮೌನ ಪ್ರತಿಭಟನೆ ನಡೆಸುತ್ತಿರುವವರು. ಈ […]
ಅ.14ರಿಂದ 20ರ ವರೆಗೆ ತುಳಸೀ ಸಂಕೀರ್ತನಾ ಸಪ್ತಾಹ
ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಉಡುಪಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಸಹಯೋಗದಲ್ಲಿ ಅ. 14ರಿಂದ 20ರ ವರೆಗೆ ಕೃಷ್ಣಮಠದ ಮಧ್ವಮಂಟಪದಲ್ಲಿ ತುಳಸೀ ಸಂಕೀರ್ತನಾ ಸಪ್ತಾಹ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಉಡುಪಿ ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಅಧ್ಯಕ್ಷ ಕೆ. ಅರವಿಂದ ಆಚಾರ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಂಕೀರ್ತನಾ ಸಪ್ತಾಹ ಸ್ಪರ್ಧೆಯಲ್ಲಿ ಒಟ್ಟು 25 ತಂಡಗಳು ಭಾಗವಹಿಸಲಿವೆ. ಪ್ರತಿ ತಂಡಕ್ಕೂ ಅರ್ಧ ಗಂಟೆಗಳ ಕಾಲ ಸಂಕೀರ್ತನಾ ಕಾರ್ಯಕ್ರಮ ನೀಡಲು ಅವಕಾಶ […]
ಕಡಬ: ಕಿದು ಸಿ.ಪಿ.ಸಿ.ಆರ್.ಐ. ಕೃಷಿ ಸಂಶೋಧನಾ ಕೇಂದ್ರ; ಕೃಷಿ ಹಾಗೂ ತೋಟಗಾರಿಕಾ ಮೇಳಕ್ಕೆ ಚಾಲನೆ
ಮಂಗಳೂರು: ಕರ್ನಾಟಕದ ಏಕೈಕ ಕಡಬ ತಾಲೂಕಿನ ಬಿಳಿನೆಲೆ ಕಿದು ಸಿ.ಪಿ.ಸಿ.ಆರ್.ಐ. ಕೃಷಿ ಸಂಶೋಧನಾ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕೃಷಿ ಮತ್ತು ತೋಟಗಾರಿಕಾ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಅಕ್ಟೋಬರ್ 12 ಹಾಗೂ 13 ರಂದು ನಡೆಯುತ್ತಿರುವ ಕೃಷಿ ಮೇಳದ ಉದ್ಘಾಟನೆಯನ್ನು ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಅವರು ಉದ್ಘಾಟಿಸಿದರು. ಸಿ.ಪಿ.ಸಿ.ಅರ್.ಐ. ನಿರ್ದೇಶಕರಾದ ಅನಿತಾ ಕರುಣ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, […]