ಉಡುಪಿ ಶ್ರೀ ಕೃಷ್ಣ ದೇವರಿಗೆ “ಸತ್ಯಭಾಮೆ” ಅಲಂಕಾರ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ನವರಾತ್ರಿಯ ಪ್ರಯುಕ್ತ  ಶ್ರೀ ಕೃಷ್ಣ ದೇವರಿಗೆ “ಸತ್ಯಭಾಮೆ” ಅಲಂಕಾರ ಮಾಡಿದರು. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆ ಮಾಡಿ,  ಮಹಾಪೂಜೆಯನ್ನು ನೆರವೇರಿಸಿದರು.

ಮಂಗಳೂರು: ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ

ಮಂಗಳೂರು: ದಸರಾ ಹಬ್ಬ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ, ಪ್ರದೇಶದಿಂದ ವಿಭಿನ್ನತೆ. ಮೈಸೂರು ಭಾಗದ ಆಚರಣೆಗೂ ಮಂಗಳೂರು ಭಾಗದ ಆಚರಣೆಗೂ ವ್ಯತ್ಯಾಸವಿದೆ. ಮೈಸೂರಿನಲ್ಲಿ ದಸರಾ ಗೊಂಬೆಗಳನ್ನು ಮನೆಯಲ್ಲಿಟ್ಟು ಆಚರಿಸುತ್ತಾರೆ. ಆದರೆ ಕರಾವಳಿ ಭಾಗದಲ್ಲಿ ಈ ಸಂಸ್ಕೃತಿ ಕಂಡು ಬರೋದಿಲ್ಲ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಕಂಡು ಬರುವ ಸಂಸ್ಕೃತಿಯನ್ನು ಮಂಗಳೂರು ಭಾಗದ ಜನರಿಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ವಾಸವಾಗಿರುವ ಹಳೆ ಮೈಸೂರಿನ ಭಾಗದ ಜನರು ‘ವಿಪ್ರಕೂಟ ನಮ್ಮವರು’ ಸಂಘಟನೆ ಕಟ್ಟಿ ಹಲವು ವರ್ಷಗಳಿಂದ ದಸರಾವನ್ನು ವಿಷೇಶವಾಗಿ […]

ಕಾರ್ಕಳ: ಹಗಲಿನಲ್ಲಿಯೇ ಕಾಣಿಸಿಕೊಂಡಿತು ಪ್ರೇತಗಳ ಜೋಡಿ

ವರದಿ : ಚರಣ್ ಸಂಪತ್ ಕಾರ್ಕಳ ಕಾರ್ಕಳ : ರಾತ್ರಿ ವೇಳೆ ಭೂತ, ಪ್ರೇತಗಳ ಸಂಚಾರ‌ ಇರುತ್ತದೆ ಎನ್ನುವ ಕತೆಗಳನ್ನು ನಾವೆಲ್ಲ ಜನಗಳ ಬಾಯಲ್ಲಿ ಕೇಳುತ್ತಲೇ ಇರುತ್ತೇವೆ. ಅದ್ರೆ‌ ಕಾರ್ಕಳದಲ್ಲಿ  ಹಗಲಿನಲ್ಲಿಯೂ ಪ್ರೇತಗಳು ‌ಓಡಾಡುತ್ತೆ ಅಂದ್ರೆ ನೀವು ನಂಬುವಂತದ್ದೇ..? ಎಸ್, ನೋಡಿ ಎರಡು ಪ್ರೇತಗಳು ಮಟಮಟ ಮಧ್ಯಾಹ್ನದ ವೇಳೆ ದಾರಿ ರಸ್ತೆ ಉದ್ದಕ್ಕೂ ಸಂಚಾರ ನಡೆಸುತ್ತಾ, ಚೀರಾಡುತ್ತಿವೆ ಎಂದರೆ ಆಶ್ಚರ್ಯ ಹಾಗೂ ಎದೆ ಜಲ್ಲ್ ಅನ್ನದೇ‌ ಇರುತ್ತಾ..! ಪ್ರೇತಗಳು ನಿರ್ಭೀತಿಯಾಗಿ ಸಂಚರಿಸಿದ್ದು ಬೇರೆಲ್ಲೂ ಅಲ್ಲ, ಕಾರ್ಕಳ ಪುರಸಭೆ […]