ಮುಂದಿನ ತಲೆಮಾರಿಗೆ ಅರಣ್ಯ ಉಳಿಸಿ :ಜಿ.ಜಗದೀಶ್

ಉಡುಪಿ : ನಮ್ಮ ಹಿಂದಿನ ತಲೆಮಾರಿನವರು ಅರಣ್ಯವನ್ನು ಉಳಿಸಿ, ಬೆಳೆಸಿದ ಕಾರಣ ಅದರ ಪ್ರಯೋಜನವನ್ನು ನಾವು ಪಡೆಯುತ್ತಿದ್ದೇವೆ, ನಾವೂ ಸಹ ನಮ್ಮ ಮುಂದಿನ ತಲೆಮಾರಿನ ಪ್ರಯೋಜನಕ್ಕೆ ಅರಣ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ. ಅವರು ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ಪ್ರೆಸ್‍ಕ್ಲಬ್ ಉಡುಪಿ ಸಹಯೋಗದೊಂದಿಗೆ, ಬಡಗಬೆಟ್ಟುವಿನ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ನಡೆದ ವೃಕ್ಷೋತ್ಸವ 2019 ಅರಣ್ಯ, ವನ್ಯಜೀವಿ […]

ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ

ಉಡುಪಿ : ಮಲ್ಪೆ ಬೀಚ್‍ಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈಗಿರುವ ಐದು ಜನರ ಜೊತೆಗೆ ಹೆಚ್ಚುವರಿ ಐದು ಜೀವರಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಲ್ಪೆ ಅಭಿವೃದ್ದಿ ಸಮಿತಿ ಸದಸ್ಯರಿಗೆ ಸೂಚಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಲ್ಪೆ ಬೀಚ್ ನೋಡಲು ಬರುವ ಪ್ರವಾಸಿಗರ ಸುರಕ್ಷತೆ ಪ್ರಥಮ ಆದ್ಯತೆಯಾಗಿರುವುದರಿಂದ ಈಗಿರುವ ಐದು ಜನ ಜೀವರಕ್ಷಕರ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ಐದು ಜನರನ್ನು ನೇಮಕ ಮಾಡುವಂತೆ ಸೂಚಿಸಿದ […]

ಉಡುಪಿ ಶ್ರೀ ಕೃಷ್ಣ ದೇವರಿಗೆ “ಭುವನಮೋಹಿನಿ” ಅಲಂಕಾರ

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನವರಾತ್ರಿಯ ಪ್ರಯುಕ್ತ ಸೋದೆ ಮಠದ  ಶ್ರೀ ಶ್ರೀ ವಿಶ್ವವಲ್ಲಭತೀರ್ಥರು  ಶ್ರೀ ಕೃಷ್ಣ ದೇವರಿಗೆ “ಭುವನಮೋಹಿನಿ” ಅಲಂಕಾರ ಮಾಡಿದರು. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆ ಮಾಡಿ ಮಹಾಪೂಜೆಯನ್ನು ನೆರವೇರಿಸಿದರು.

ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರಿಂದ ಯೋಗಾಭ್ಯಾಸ ಆರಂಭ 

ಮಂಗಳೂರು: ಕೆಲಸದ ಒತ್ತಡ ತಪ್ಪಿಸಲು ಮತ್ತು ದೈಹಿಕ ಕ್ಷಮತೆ ಮತ್ತು ಮಾನಸಿಕ ನೆಮ್ಮದಿ ಮೂಡಿಸಲು ಮಂಗಳೂರು ವಕೀಲರ ಸಂಘ ನ್ಯಾಯವಾದಿಗಳಿಗೆ ಯೋಗಾಭ್ಯಾಸವನ್ನು ಆರಂಭಿಸಿದೆ. ಮಂಗಳೂರು ಹಳೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಕಟ್ಟಡದಲ್ಲಿ ಯೋಗಾಭ್ಯಾಸ ಅಕ್ಟೋಬರ್ 3ರಂದು ದಸರಾದ ಶುಭ ಸಂದರ್ಭದಲ್ಲಿ ಆರಂಭಿಸಲಾಯಿತು. ಪ್ರಕೃತಿದತ್ತವಾದ ತಂಪಾದ ಗಾಳಿ ಮತ್ತು ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಯೋಗಾಭ್ಯಾಸ ನಡೆಯುತ್ತಿದ್ದು, ನ್ಯಾಯವಾದಿಗಳಲ್ಲಿ ಹೊಸ ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ ಮತ್ತು ಪ್ರಧಾನ ಕಾರ್ಯದರ್ಶಿ […]

ಮಣ್ಣಗುಡ್ಡ: 30 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಶಾಸಕ ಕಾಮತ್ ಅವರಿಂದ ಗುದ್ದಲಿಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡೆ ವಾರ್ಡಿನ ಮಂಗಳ ಕ್ರೀಡಾಂಗಣದ ಸಮೀಪ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುವ ತಡೆಗೋಡೆ ರಚನೆಯ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಕುರಿತು ಮಾತನಾಡಿದ ಶಾಸಕರು, ಈ ಹಿಂದೆ ಸ್ಥಳೀಯರು ನನ್ನನ್ನು ಭೇಟಿ ಮಾಡಿ ತಡೆಗೋಡೆಯ ಕಾಮಗಾರಿ ನಡೆಸುವಂತೆ ಕೇಳಿಕೊಂಡಿದ್ದರು. ಕೇಂದ್ರ ಸರಕಾರದಿಂದ ನೀಡಲಾಗುವ ಹದಿನಾಲ್ಕನೇ ಹಣಕಾಸು ವ್ಯವಸ್ಥೆಯ ಅನುದಾನದಡಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 30 ಲಕ್ಷ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು, ಶೀಘ್ರವೇ […]