ಉಡುಪಿ: ಶೆಫಿನ್ಸ್ ಸಂಸ್ಥೆಯ ‌ವತಿಯಿಂದ ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ

ಉಡುಪಿ: ಮಣಿಪಾಲ ಶೆಫಿನ್ಸ್‌ ಸಂಸ್ಥೆ ವತಿಯಿಂದ ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಹಾಗೂ ಪದವೀಧರ ಮಹಿಳೆಯರಿಗೆ ಉಚಿತ ಸ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಮನೋಜ್‌ ಕಡಬ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ ಒಂದು ಲಕ್ಷ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಹಾಗೂ 2 ಸಾವಿರ ಪದವೀಧರ ಮಹಿಳೆಯರಿಗೆ ಸ್ಪೋಕನ್‌ ಇಂಗ್ಲಿಷ್‌ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಶಾಲೆಯ ಗೌರವ ಶಿಕ್ಷಕಿಯರು ಸೇರಿದಂತೆ ಪದವೀಧರ ಮಹಿಳೆಯರಿಗೆ ಪ್ರಥಮ ಹಂತವಾಗಿ […]

ಉಡುಪಿ: ನವೀಕೃತ ಜಿಲ್ಲಾ ಸಹಕಾರಿ ಯೂನಿಯನ್ ಕಚೇರಿ ಉದ್ಘಾಟನೆ

ಉಡುಪಿ: ಇಲ್ಲಿನ ಪಿಪಿಸಿ ರಸ್ತೆಯ ಟಿಎಪಿಸಿಎಂಎಸ್‌ ಕಟ್ಟಡದ ಎರಡನೇ ಮಹಡಿಯಲ್ಲಿರುವ ನವೀಕೃತಗೊಂಡ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಕಚೇರಿಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎ.ಎನ್‌. ರಾಜೇಂದ್ರ ಕುಮಾರ್‌ ಮಂಗಳವಾರ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ‌ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರುಗಳಾದ ಡಾ. […]

ಸುಳ್ಯ: ಲಾರಿ-ಸ್ವಿಫ್ಟ್ ಕಾರು ಅಪಘಾತ ನಾಲ್ವರು ಸಾವು

ಮಂಗಳೂರು: ಸ್ವಿಫ್ಟ್ ಕಾರು ಮತ್ತು ಲಾರಿ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮಂಗಳವಾರ ಸಂಭವಿಸಿದೆ. ಮಡಿಕೇರಿ ನಾಪೋಕ್ಲು ಕೊಟ್ಟಮುಡಿ ನಿವಾಸಿಗಳಾದ ಹಸೈನಾರ್ ಹಾಜಿ, ಅವರ ಮಕ್ಕಳಾದ ಇಬ್ರಾಹಿಂ, ಅಬ್ದುಲ್  ರಹಿಮಾನ್ ಮತ್ತು ಹಾರೀಸ್ ಎಂಬವರು ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲ್ಸೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಈ ಅಪಘಾತ ನಡೆದಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ KA-12-MA-4587 ನೊಂದಣಿ ಸಂಖ್ಯೆಯ ಮಾರುತಿ ಸ್ವಿಫ್ಟ್ […]

ಅ.6 ರಂದು ಜಿಲ್ಲಾ ಕಂಬಳ ಸಮಿತಿ ಮಹಾಸಭೆ

ಮಂಗಳೂರು: ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಮಹಾಸಭೆ ಅ.6ರಂದು ಬೆಳಗ್ಗೆ 10ಗಂಟೆಯಿಂದ ಮೂಡುಬಿದಿರೆ ಸಮಾಜ ಭವನದಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ತಿಳಿಸಿದ್ದಾರೆ. ಮಹಾಸಭೆ ಕ್ಲಪ್ತ ಸಮಯಕ್ಕೆ ಆರಂಭವಾಗಲಿದ್ದು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿರಬೇಕು. ಈ ಸಭೆಯಲ್ಲಿ ಮುಂದಿನ ಕಂಬಳ ಸಿದ್ಧತೆ, ಯೋಜನೆಗಳು ಸೇರಿದಂತೆ ನಾನಾ ವಿಚಾರದಲ್ಲಿ ಚರ್ಚೆ ನಡೆಯಲಿದೆ. ಕಂಬಳ ದಿನಾಂಕ ನಿಗದಿ: 2019-20ನೇ ಸಾಲಿನ ಕಂಬಳ ದಿನಾಂಕವನ್ನು ಇದೇ ಸಭೆಯಲ್ಲಿ ಚರ್ಚಿಸಿ ನಿಗದಿಪಡಿಸಲಾಗುವುದು. ಆದುದರಿಂದ ಕಂಬಳ ಸಮಿತಿಯ ಎಲ್ಲ ಸದಸ್ಯರು, […]

ಅ. 4: ಮಣಿಪಾಲದಲ್ಲಿ ಅಂತರಾಷ್ಟ್ರೀಯ ಮಟ್ಟದ ಇ-ಪೋಸ್ಟರ್ ಸಮ್ಮೇಳನ

ಉಡುಪಿ: ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುವ ನಿಟ್ಟಿನಿಂದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ವಾಣಿಜ್ಯ ವಿಭಾಗದ ವತಿಯಿಂದ ಅ.4ರಂದು ಮಣಿಪಾಲ ಕೆಎಂಸಿಯ ಡಾ. ಟಿಎಂಎ ಪೈ ಹಾಲ್‌ನಲ್ಲಿ ಒಂದು ದಿನದ ಅಂತರರಾಷ್ಟ್ರೀಯ ಮಟ್ಟದ ಇ–ಪೋಸ್ಟರ್‌ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಮಾಹೆಯ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅಂಕಿತಾ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಮ್ಮೇಳನವು ಆಡಳಿತ ನಿರ್ವಹಣೆ, ವಾಣಿಜ್ಯ, ಆರೋಗ್ಯ ನಿರ್ವಹಣೆ, ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ, ವ್ಯವಹಾರ ವಿಶ್ಲೇಷಣೆ ಮುಂತಾದ ವಿಚಾರಗಳನ್ನು ಮಂಡಿಸಲು […]