ನೀಲಾವರ: ಮನಸ್ವಿನಿ ಅನ್ನಛತ್ರ ಉದ್ಘಾಟನೆ-ಜೀರ್ಣೋದ್ದಾರಕ್ಕೆ ಶಿಲಾ-ದಾರು ಮುಹೂರ್ತ: ಜೀರ್ಣೋದ್ದಾರ ದೇವರ ಸೇವೆ ಮಾಡಲು ಅವಕಾಶ: ಪುತ್ತಿಗೆ ಶ್ರೀ
ಉಡುಪಿ: ಜಿಲ್ಲೆಯ ಬ್ರಹ್ಮಾವರ ಸಮೀಪದ ನೀಲಾವರದ ಮಹತೋಭಾರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನವರಾತ್ರಿಯ ಸಂದರ್ಭ ನೂತನ ‘ಅನ್ನಛತ್ರ ಮನಸ್ವಿನಿ’ಯನ್ನು ಉದ್ಘಾಟನೆ ಹಾಗೂ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶಿಲಾ ಮತ್ತು ದಾರು ಮುಹೂರ್ತ ಭಾನುವಾರ ನಡೆಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಮನುಷ್ಯನ ಜೀವನದಲ್ಲಿ ದೇವರ ಸೇವೆಗೆ ಸಿಗುವ ಅವಕಾಶವೆಂದರೆ ಅದು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಳ್ಳುವುದು. ಕ್ಷೇತ್ರದಲ್ಲಿ ಅನ್ನದಾನ ಮಾಡುವುದರಿಂದ ದೇವರ ಮೂರ್ತಿಯಲ್ಲಿ ಸಾನಿಧ್ಯ ವೃದ್ಧಿಸಿ, ಕ್ಷೇತ್ರ ಮಹಿಮೆ ಹೆಚ್ಚುತ್ತದೆ ಅದು […]