ಪ್ರೈಮ್ ಸಂಸ್ಥೆ ಉಡುಪಿ : ಎಲ್.ಐ.ಸಿ, ಐ.ಬಿ.ಪಿ.ಎಸ್ ಕ್ಲರ್ಕ್ ಪರೀಕ್ಷಾ ತರಬೇತಿ ಪಡೆಯಿರಿ,ಬದುಕು ಕಟ್ಟಿಕೊಳ್ಳಿ

ಉಡುಪಿ: ಭಾರತೀಯ ಜೀವವಿಮಾ ನಿಗಮ (ಎಲ್.ಐ.ಸಿ) 8 ವಲಯಗಳಲ್ಲಿ ಖಾಲಿ ಇರುವ 7,871 ಅಸಿಸ್ಟೆಂಟ್ (ಕ್ಲರ್ಕ್) ಹುದ್ದೆಗಳ ನೇಮಕ ಪರೀಕ್ಷೆಗೆ ಹಾಗೂ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 17 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಟ್ಟು 12,075 ಕ್ಲರಿಕಲ್ ಹುದ್ದೆಗಳ ನೇಮಕಕ್ಕಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು, ಎಲ್.ಐ.ಸಿ ಪ್ರಿಲಿಮ್ಸ್ ಅಕ್ಟೋಬರ್ 21 ಮತ್ತು 22 ರಂದು ಹಾಗೂ ಐಬಿಪಿಎಸ್ ಪ್ರಿಲಿಮ್ಸ್ ಪರೀಕ್ಷೆಯು ಡಿಸಂಬರ್ ತಿಂಗಳಿನಲ್ಲಿ ನಡೆಯಲಿದೆ. ಈ ಎರಡೂ ನೇಮಕಾತಿ ಪರೀಕ್ಷೆಗಳಿಗೆ ಹಿರಿಯ ಪ್ರಾಧ್ಯಾಪಕ ವೃಂದ […]

ಮಂಗಳೂರು ದಸರಾಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ‌‌ ಅದ್ದೂರಿ ಚಾಲನೆ

ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆಯಿತು. ಸರ್ಕಾರದ ಯಾವುದೇ ಅನುದಾನ ಇಲ್ಲದ ಈ ಮಂಗಳೂರು ದಸರಾಕ್ಕೆ ಈ ಬಾರಿ 28ನೇ ವರ್ಷದ ಸಂಭ್ರಮ. ನವರಾತ್ರಿಯ ೯ ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ಇಂದು ಅದ್ದೂರಿಯಿಂದ ನಡೆಯಿತು. ಮಂಗಳೂರು ಪೊಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ ದೀಪಬೆಳಗಿಸಿ ನವರಾತ್ರಿ ದಸರಾ ಮಹೋತ್ಸಕ್ಕೆ ಚಾಲನೆ ನೀಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ […]

ಶ್ರೀ ಕೃಷ್ಣ ದೇವರಿಗೆ “ಗಜಲಕ್ಷ್ಮೀ ” ಅಲಂಕಾರ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸೋದೆ ಮಠದ  ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರು ನವರಾತ್ರಿಯ ಪ್ರಯುಕ್ತ  ಶ್ರೀ ಕೃಷ್ಣ ದೇವರಿಗೆ “ಗಜಲಕ್ಷ್ಮೀ ” ಅಲಂಕಾರ ಮಾಡಿದರು.  ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಲಕ್ಷ ತುಳಸಿ ಅರ್ಚನೆ ಮಾಡಿ, ಮಹಾಪೂಜೆಯನ್ನು ನೆರವೇರಿಸಿದರು.

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ‌ ಮೂವರು ಸಾವು, ಮನೆಯೊಡೆಯನ ಸಾವಿನಿಂದ ನೊಂದಿದ್ದ ಕುಟುಂಬ

ಬಂಟ್ವಾಳ: ಪತಿ ಸಾವಿನಿಂದ ಮನನೊಂದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳ ಜೊತೆ ನದಿಗೆ ಹಾರಿದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮೈಸೂರು ಸರಸ್ವತಿ ಪುರಂ ನಿವಾಸಿಗಳಾದ ಕವಿತಾಮಂಡಣ್ಣ(55), ಮಕ್ಕಳಾದ ಕೌಶಿಕ್ ಮಂಡಣ್ಣ(29) ಹಾಗೂ ಕಲ್ಪಿತಾ ಮಂಡಣ್ಣ(22) ನದಿಗೆ ಹಾರಿ ಸಾವನ್ನಪ್ಪಿದ್ದಾರೆ. ಈ ಮೂವರ ಪೈಕಿ ಕವಿತಾ ಮಂಡಣ್ಣರವರನ್ನು ಗೂಡಿನಬಳಿ ಸಮೀಪ ಸ್ಥಳೀಯ ಈಜುಗಾರರು ರಕ್ಷಿಸಿದ್ದು , ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ನೀರುಪಾಲಾಗಿದ್ದು ಅವರಿಗಾಗಿ ಹುಡುಕಾಟ […]

ಕೆರುವಾಶೆ ಬಂಗ್ಲೆಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ:ರಾಷ್ಟ್ರೀಯ ಪೋಷಣ್ ಅಭಿಯಾನ

ಕಾರ್ಕಳ: ಸ್ವಸ್ಥ ಸದೃಢ ಆರೋಗ್ಯವೇ ನಮ್ಮ ಆಸ್ತಿ. ಉತ್ತಮ  ಗುಣಮಟ್ಟದ ಪೋಷಕಾಂಶಗಳ ಪೌಷ್ಟಿಕಾಹಾರ ಸೇವಿಸುವುದು  ನಮ್ಮ ಆರೋಗ್ಯ ಕಾಪಾಡಲು ಸಹಕಾರಿ ಎಂದು  ಕಾರ್ಕಳ ತಾಲೂಕು ಅಕ್ಷರ ದಾಸೋಹ  ಸಹಾಯಕ ನಿರ್ದೇಶಕ ಟಿ. ಭಾಸ್ಕರ್  ಎಂದು ತಿಳಿಸಿದರು. ಕೆರುವಾಶೆಯ ಬಂಗ್ಲೆಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ  ರಾಷ್ಟ್ರೀಯ ಪೋಷಣ್ ಅಭಿಯಾನ ದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ   ಡಾ| ಹರಿಪ್ರಕಾಶ್ ಮಾತನಾಡಿ,  ಸಾವಯವ ಕೃಷಿ ಯಿಂದ ಬೆಳೆದ  ತರಕಾರಿ ಬೆಳೆಗಳು ನಮ್ಮ  ದೇಹವನ್ನು ರೋಗರುಜಿನಗಳಿಂದ ಮುಕ್ತ […]