ರಾಜ್ಯ ಸರಕಾರ ಕಾರ್ಮಿಕರ ಪರ ಕೆಲಸ ಮಾಡಬೇಕು: ಯು.ಟಿ. ಖಾದರ್
ಮಂಗಳೂರು: ರಾಜ್ಯಸರ್ಕಾರ ಯಾವುದೇ ಕಾರಣಕ್ಕೂ ಕಾರ್ಮಿಕ ಪರವಾಗಿಯೇ ಕೆಲಸ ಮಾಡಬೇಕು. ಕಾರ್ಮಿಕರ ಸವಲತ್ತುಗಳನ್ನು ಸ್ಥಗಿತಗೊಳಿಸಬಾರೆಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಕಾರ್ಮಿಕರ ಪರವಾಗಿರುವ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು. ಈ ಸರ್ಕಾರ ಕಾರ್ಮಿಕರ ಪರವಾಗಿಲ್ಲ, ಬಂಡವಾಳಶಾಹಿಗಳ ಪರವಾಗಿದೆ ಎಂದು ಆರೋಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಸಭೆ ನಡೆಯಬೇಕು. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಕೆಲಸವಾಗಬೇಕಾಗಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ […]
ಮಾಲ್ನಲ್ಲಿ ಯುವಕನಿಗೆ ಹಲ್ಲೆ ಪ್ರಕರಣ ಕ್ಷಮಿಸಲಾಗದು: ಖಾದರ್
ಮಂಗಳೂರು: ಮಂಗಳೂರಿನ ಮಾಲ್ನಲ್ಲಿ ಯುವಕನಿಗೆ ಹಲ್ಲೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಮರ್ಥಿಸುವ ಪ್ರಶ್ನೆ ಇಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು. ಮಂಗಳೂರಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಸೌಹಾರ್ದಯುತ ಹೆಸರು ಪಡೆದುಕೊಂಡಿದೆ. ಹಾಗಾಗಿ ಎಲ್ಲರೂ ಒಗ್ಗಟ್ಟಿನಲ್ಲಿ ಹೋಗಬೇಕು. ಸಮಾಜ ಶಾಂತಿ ಕದಡಲು ಸಾಮಾಜಿಕ ಜಾಲತಾಣ ಉಪಯೋಗ ಮಾಡಬಾರದು. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಬೇಕು. ಅಧಿಕಾರಿಗಳು ಇಂತಹ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. […]
ನೀವು ಮಂತ್ರಿ ಆಗ್ತೀರಿ, ಆದ್ರೆ ? : ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಶ್ರೀರಾಮುಲು ಹೇಳಿದ್ದೇನು?
ಕುಂದಾಪುರ: ಸದಾ ಜನರ ಸೇವೆಯಲ್ಲಿ ಸಂತೃಪ್ತಿ ಪಡೆಯುವ ವಿಶಾಲ ಮನೋಭಾವದ ಹಾಲಾಡಿ ಶ್ರೀನಿವಾಸ ಶೆಟ್ಟರು ಜನರ ನಡುವೆ ಇರಬೇಕು ಎಂದು ಬಯಸುತ್ತಾರೆ. ಹೆಚ್ಚು ಮಾತನಾಡದ ಹಾಲಾಡಿಯವರು ಖಂಡಿತಾ ಮಂತ್ರಿಗಳಾಗುತ್ತಾರೆ. ಆದರೆ ಹಿಂದೆ ಉಳಿಯುವ ಅವರ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಕಿವಿಮಾತು ಹೇಳಿದ್ದಾರೆ. ಕುಂದಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಡುಪಿ ಅಂಬಲಪಾಡಿಯ ಜಿ.ಶಂಕರ್ಫ್ಯಾಮಿಲಿ ಟ್ರಸ್ಟ್ವತಿಯಿಂದ ಅಂದಾಜು ೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ೧೫೦ ಹಾಸಿಗೆಗಳ […]
ಉಗುರಿನ ಆರೈಕೆ ಮಾಡಿ ಹಗುರಾಗಿ: ಚಂದದ ಉಗುರಿಗಾಗಿ ಇಷ್ಟೆಲ್ಲಾ ಮಾಡಲೇಬೇಕು
ಸ್ವಸ್ಥ ಸುಂದರವಾದ ಉಗುರು ಎಲ್ಲರಿಗೂ ಇಷ್ಟ. ಉಗುರು ನಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಕೆಲವು ಕಾರಣಗಳಿಂದ ಉಗುರುಗಳು ತಮ್ಮ ಸಹಜ ಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಇದು ಉಗುರುಗಳ ಸೊಂಕು ಅಥವಾ ನಮ್ಮ ದೇಹದೊಳಗಿನ ಕೆಲವು ಸಮಸ್ಯೆಗಳಿಂದ ಕೂಡ ಆಗಬಹುದು. ಇಲ್ಲಿ ಉಗುರಿನ ಆರೈಕೆ ಬಗ್ಗೆ ನೀವು ಪಾಲಿಸಲೇಬೇಕಾದ ಒಂದಷ್ಟು ಟಿಪ್ಸ್ ಗಳನ್ನು ನೀಡಿದ್ದಾರೆ ಡಾ.ಹರ್ಷಾ ಕಾಮತ್. ಉಗುರಿನ ಅಸಹಜತೆ ಬಗ್ಗೆ ನಿಮ್ಗೆ ಗೊತ್ತಿರಲಿ: ಉಗುರಿನ ಮೇಲೆ ಉದ್ದದ ರೇಖೆಗಳು ಕಂಡುಬಂದಲ್ಲಿ ಅಗ್ನಿ ಮಾಂದ್ಯ ,ವಿಷಮಾಗ್ನಿ ಹಾಗೂ ಅಜೀರ್ಣತೆಯನ್ನು […]
ಸಾಲಿಗ್ರಾಮ- ಪ್ಲಾಸ್ಟಿಕ್ ಬಳಸಿದರೆ ಕಠಿಣ ಕ್ರಮ
ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ಟೋಬರ್ 2 ರಿಂದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ, ದಾಸ್ತಾನು, ಮಾರಾಟ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾವುದೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ , ದಂಡ ವಿಧಿಸಿ ಜೊತೆಗೆ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು. ೩ ತಿಂಗಳ ಜೈಲು ಶಿಕ್ಷೆ ಸಹ ವಿಧಿಸಲಾಗುವುದು . ಸಾರ್ವಜನಿಕರು ಸಹ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ , ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.