ಶ್ರೀ ಕೃಷ್ಣ ಮಠಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ
ಉಡುಪಿ: ಶ್ರೀ ಕೃಷ್ಣ ಮಠಕ್ಕೆ ಕರ್ನಾಟಕ ಸರ್ಕಾರದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಇವರು ಭೇಟಿ ನೀಡಿ ಕೃಷ್ಣ ದೇವರ ದರ್ಶನ ಮಾಡಿದರು.ನಂತರ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್,ಲಾಲಾಜಿ ಮೆಂಡನ್,ಸುನಿಲ್ ಕುಮಾರ್,ಸುಕುಮಾರ್ ಶೆಟ್ಟಿ ಬಿ.ಜೆ.ಪಿ ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ,ಉದಯಕುಮಾರ್ ಶೆಟ್ಟಿ,ಸುಪ್ರಸಾದ್ ಶೆಟ್ಟಿ,ಪರ್ಯಾಯ ಸ್ವಾಮೀಜಿಯವರ ಆಪ್ತ ಕಾರ್ಯದರ್ಶಿ ಗಿರೀಶ್ ಉಪಾದ್ಯಾಯ, ಮಠದ ಪಿ.ಆರ್.ಓ ಶ್ರೀಶ ಭಟ್ […]
ಕುಂದಾಪುರ: ಹಳ್ಳಿಗಾಡಿನ ಈ ಯುವಕ ವಿಶ್ವದ ಗಮನ ಸೆಳೆದ್ರು: ವಿಶ್ವನಾಥ ಗಾಣಿಗರ ಸಾಧನೆಯ ಕತೆ ಕೇಳಿ
-ಶ್ರೀಕಾಂತ ಹೆಮ್ಮಾಡಿ ಬಾಲ್ಯದಲ್ಲಿ ಕಿತ್ತುತಿನ್ನುವ ಬಡತನವೇ ತಮ್ಮ ಸಾಧನೆಗೆ ಅಡ್ಡಿಯಾಯಿತು ಎಂದು ಹೇಳುವ ಮಂದಿ ಹಲವರಿದ್ದಾರೆ. ಆದರೆ ಬಡತನಕ್ಕೆ ಸೆಡ್ಡು ಹೊಡೆದು ಅದ್ಭುತ ಕ್ರೀಡಾಳುವಾಗಿ ರೂಪುಗೊಂಡು ದೇಶದ ಗಮನವನ್ನೇ ಸೆಳೆದ ಈ ಹಳ್ಳಿಗಾಡಿನ ಯುವಕನ ಯಶೋಗಾಥೆಯನ್ನು ಕೇಳಿದರೆ ನೀವೂ ಕೂಡ ಶಹಬ್ಬಾಸ್ ಎನ್ನುತ್ತೀರಿ. ಹಾಗಾದರೆ ಯಾರು ಆ ಸಾಧಕ.. ಆತ ಮಾಡಿರುವ ಸಾಧನೆಯಾದರು ಏನು ಅಂತೀರಾ ಇಲ್ಲಿದೆ ಆ ಸಾಧಕನ ಯಶೋಗಾಥೆ. ಹಳ್ಳಿ ಹುಡುಗನ ಯಶೋಗಾಥೆ: ಇತ್ತೀಚೆಗಷ್ಟೇ ಕೆನಡಾದಲ್ಲಿ ನಡೆದ ಕಾಮನ್ವೆಲ್ತ್ ಅಥ್ಲೆಟಿಕ್ಸ್ನ ಪವರ್ಲಿಫ್ಟಿಂಗ್ನಲ್ಲಿ ಎರಡು ಚಿನ್ನ […]
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ 2 ಕೋ.ರೂ. ವೆಚ್ಚದ ಬ್ರಹ್ಮರಥ
ಉಡುಪಿ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಹಾಗೂ ಉದ್ಯಮಿ ಅಜಿತ್ ಶೆಟ್ಟಿ ಅವರು ಜಂಟಿಯಾಗಿ ಅಕ್ಟೋಬರ್ 2ರಂದು ಎರಡು ಕೋಟಿ ವೆಚ್ಚದ ಬ್ರಹ್ಮರಥವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಅರ್ಪಣೆ ಮಾಡಲಿದ್ದಾರೆ ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ನೂತನ ಬ್ರಹ್ಮರಥದ ಸಮರ್ಪಣೆಯ ಪೂರ್ವಭಾವಿಯಾಗಿ ಸೆ. 30ರಂದು ಬೆಳಿಗ್ಗೆ 9ಗಂಟೆಗೆ ಕೋಟೇಶ್ವರದಿಂದ ಸುಬ್ರಹ್ಮಣ್ಯದವರೆಗೆ ಭವ್ಯ ಮೆರವಣಿಗೆ ಹೊರಡಲಿದೆ. ಅಲ್ಲಿಂದ ಸಾಲಿಗ್ರಾಮ, […]
ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಯಿ
ಉಡುಪಿ: ಮಾಜಿ ಸಿಎಂ ಕುಮಾರಸ್ವಾಮಿ ಮೊಸರಲ್ಲಿಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಡುಪಿಗೆ ಭೇಟಿ ನೀಡಿದ ಅವರು ಕುಮಾರ ಸ್ವಾಮಿ ಅವರ ‘ಪ್ರಭಾವ ಬಳಸಿ ಉಪ ಚುನಾವಣೆ ಮುಂದೂಡಲಾಗಿದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಫೋನ್ ಕದ್ದಾಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿಯ ಖಾಸಗಿ ಮಾತುಕತೆಯ ಕದ್ದಾಲಿಕೆ ತಪ್ಪು ಎಂದು ಅವರು ಹೇಳಿದರು. ಪೊಲೀಸರ ವೇತನ ಪರಿಷ್ಕರಣೆ ವಿಚಾರ ಖಂಡಿತವಾಗಿಯೂ ಔರಾದ್ಕರ್ ವರದಿ ಜಾರಿಯಾಗುತ್ತದೆ. […]
ಆರ್ಎಸ್ಎಸ್ ಪಥಸಂಚಲನದಂತೆ ಕಾಂಗ್ರೆಸ್ಸಿಗರಿಗೆ ಖಾದರ್ ತರಬೇತಿ: ವಿಡಿಯೋ ವೈರಲ್
ಮಂಗಳೂರು: ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಆರ್ಎಸ್ಎಸ್ ಪಥಸಂಚಲನ ಮಾಡುವ ರೀತಿಯೇ ಕಾಂಗ್ರೆಸ್ಸಿಗರಿಗೂ ಮಾಜಿ ಸಚಿವ ಯು.ಟಿ ಖಾದರ್ ತರಬೇತಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ. ಗಾಂಧಿ ಜಯಂತಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ನಿಂದ ಭರದ ಸಿದ್ಧತೆಯಾಗುತ್ತಿದ್ದು, ಕಾಂಗ್ರೆಸ್ ಸೇವಾದಳದಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಮಂಗಳೂರು ಹೊರವಲಯದ ಕೋಣಾಜೆ ಪಿಎ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರರಗೆ ಮಾಜಿ ಸಚಿವ ಯು.ಟಿ. ಖಾದರ್ ಪಥಸಂಚಲನ ಅಭ್ಯಾಸ ಮಾಡಿಸುತ್ತಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪರ […]