ಉಡುಪಿ: ಅ.6-21, ಪದವಿ ಪೂರ್ವ ಕಾಲೇಜುಗಳಿಗೆ ದಸರಾ ರಜೆ

ಉಡುಪಿ:ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಿಗೆ ಅಕ್ಟೋಬರ್ 6 ರಿಂದ 21 ರ ವರೆಗೆ ಮಧ್ಯಂತರ ರಜೆಯನ್ನು ನಿಗದಿಪಡಿಸಲಾಗಿದ್ದು, ಅಕ್ಟೋಬರ್ 23 ರಿಂದ ಮಧ್ಯ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿಯಲ್ಲಿ ಕಾಡು ಬೆಳೆಸಲು ಜಪಾನ್ ನ “ಮಿಯಾವಾಕಿ ಕಾಡು” ಯೋಜನೆ ಜಾರಿ: ಕಟಪಾಡಿ ಮಹೇಶ ಶೆಣೈ

ಉಡುಪಿ:  ಅವಿಭಜಿತ ಜಿಲ್ಲೆಯ ಪರಿಸರವು ದಿನೇ ದಿನೇ ಕಲುಷಿತಗೊಳ್ಳುತ್ತಿದೆ. ನಾವಿನ್ನು ಎಚ್ಚೆತ್ತದಿದ್ದರೆ ಪರಿಸರದ ಜೊತೆ ನಮಗೂ ಕಷ್ಟಕಾಲ ಬರಲಿದೆ. ಪರಿಸರದಲ್ಲಿರುವ ಶುದ್ಧಗಾಳಿ, ಕುಡಿಯುವ ನೀರು ಮತ್ತು ಜೀವ ವೈವಿಧ್ಯಗಳನ್ನು ಸಂರಕ್ಷಿಸದಿದ್ದರೆ ಮುಂದೆ ಎಣಿಸಲಾಗದ ಘೋರ ಅನಾಹುತ ಸಂಭವಿಸಲಿದೆ. ಜಿಲ್ಲೆಯಲ್ಲಿ ಜಪಾನ್ ದೇಶದ ಮಾದರಿಯಲ್ಲಿ ಮರಗಿಡಗಳನ್ನು ಬೆಳೆಸಿ ಆ ಮೂಲಕ ಪರಿಸರ ರಕ್ಷಣೆಗೆ ಇಲ್ಲಿನ ಸಾಮಾಜಿಕ ಸೇವಾ ಕಾರ್ಯಕರ್ತರು ಧ್ವನಿಯಾಗಲು ನಿರ್ಧರಿಸಿದ್ದಾರೆ ಎಂದು ಸಾವಯುವ ಬದುಕು ತಂಡದ ಸಂಯೋಜಕ ಕಟಪಾಡಿ ಮಹೇಶ ಶೆಣೈ ಹೇಳಿದ್ದಾರೆ. ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ […]

ಮಾನಸಿಕ‌ ಅಸ್ವಸ್ಥನಿಂದ ರಸ್ತೆಯಲ್ಲಿ ತಲ್ವಾರ್ ಹಿಡಿದು ರಂಪಾಟ

ಮಂಗಳೂರು: ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ತಲ್ವಾರ್ ಬೀಸಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಂಚತ್ತಾರಿನಲ್ಲಿ ಬುಧವಾರ ನಡೆದಿದೆ. ಪುಂಚತ್ತಾರಿನ ನಿವಾಸಿ ಅವಿನಾಶ್ ಮಾನಸಿಕ ಅಸ್ವಸ್ಥಗೊಂಡ ಯುವಕನಾಗಿದ್ದು, ಪುಂಚತ್ತಾರು ಪೇಟೆಯ ಸುತ್ತ ತಲವಾರು ಝಳಪಿಸುತ್ತಾ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ. ಸ್ಥಳೀಯರು ಹಾಗೂ ಪೋಲೀಸರು ಈತನನ್ನು ಹಿಡಿಯಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಪೋಲೀಸ್ ಜೀಪ್ ನ ಬಳಿಗೂ ಬಂದು ಈತ ತಲ್ವಾರ್ ಬೀಸಿದ್ದು, ಬಳಿಕ ಪೋಲೀಸರು ಹಾಗೂ ಸ್ಥಳೀಯರು ಉಪಾಯವಾಗಿ ಆತನನ್ನು ಹಿಡಿದು ಮಂಗಳೂರಿನ […]

ಮಂಗಳೂರು: ಮಾಲ್ ನಲ್ಲಿ ವಿದ್ಯಾರ್ಥಿಗಳ ನಡುವೆ ವಾಗ್ವಾದ-ಯುವಕನ ಮೇಲೆ ಹಲ್ಲೆ

ಮಂಗಳೂರು: ನಗರದ ಮಾಲ್ ವೊಂದರಲ್ಲಿ ಬುಧವಾರ ವಿದ್ಯಾರ್ಥಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದೆ. ಈ ಬಗ್ಗೆ ಯುವಕ ನೀಡಿದ ದೂರಿನಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳು , ಮಂಜುನಾಥ್ ಅವರನ್ನು ಥಳಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಂಜುನಾಥ್ ಎಂಬಾಂತ ಇದು ಹಿಂದೂ ರಾಷ್ಟ್ರ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ‘ಯುವಕ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು ವಿದ್ಯಾರ್ಥಿಗಳ ಗುಂಪಿನಿಂದ ದೂರುದಾರ ಮಂಜುನಾಥ್ ನನ್ನು ಥಳಿಸಲಾಯಿತು’ ಎಂದು […]

ಬಾಲಿವುಡ್ ಅಮಿತಾಭ್‌ ಬಚ್ಚನ್‌ಗೆ ‘ದಾದಾ ಸಾಹೇಬ್‌ ಫಾಲ್ಕೆ’ ಪ್ರಶಸ್ತಿ

ನವದೆಹಲಿ: ಬಾಲಿವುಡ್ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು 2019ನೇ ಸಾಲಿನ ‘ದಾದಾ ಸಾಹೇಬ್‌ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಿನಿ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಗೆ ಅಮಿತಾಭ್‌ ಅವರ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಟ್ವೀಟ್‌ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ. ವಿನೋದ್ ಖನ್ನ ಅವರಿಗೆ 2017ರಲ್ಲಿ ಈ ಪ್ರಶಸ್ತಿ ಸಿಕ್ಕಿದ್ದರೆ  ಡಾ. ರಾಜ್ ಕುಮಾರ್ ಅವರು 1995ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಅಮಿತಾಭ್‌ ಬಚ್ಚನ್‌ ಅವರನ್ನು ಪದ್ಮಭೂಷಣ, ಪದ್ಮವಿಭೂಷಣ […]