ಹೆಮ್ಮಾಡಿ: ನಾಪತ್ತೆಯಾಗಿದ್ದ ಹೆಂಗಸಿನ ಶವ ಬಾವಿಯಲ್ಲಿ ಪತ್ತೆ

ಕುಂದಾಪುರ: ಕಳೆದ ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹೆಮ್ಮಾಡಿ ಸಮೀಪದ ಕಟ್ಬೇಲ್ತೂರು ಮಹಿಳೆ ಇಂದು ತಮ್ಮ ಮನೆ ಬಾವಿಯಲ್ಲೇ ಶವವಾಗಿ ಪತ್ತೆಯಾದ ಕಳವಳಕಾರಿ ಘಟನೆ ವರದಿಯಾಗಿದೆ. ಮರದ ಕೆತ್ತನೆ ಕೆಲಸ ನಿರ್ವಹಿಸುತ್ತಿರುವ ಕಟ್ಬೇಲ್ತೂರು ನಿವಾಸಿ ಮಂಜುನಾಥ ಆಚಾರ್ಯ ಅವರ ಪತ್ನಿ ಸುನಿತಾ ಆಚಾರ್ಯ(39) ಸಾವನ್ನಪ್ಪಿದ ಮಹಿಳೆ. ಶುಕ್ರವಾರ ತಡರಾತ್ರಿ 11.30ರ ಸುಮಾರಿಗೆ ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಸ್ಥಾನದ ರಸ್ತೆ ಸಮೀಪವಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಶುಕ್ರವಾರ ರಾತ್ರಿಯಿಂದಲೂ ಸುನಿತಾ ಪತ್ತೆಗಾಗಿ ಸ್ಥಳೀಯರು ವ್ಯಾಪಕ ಹುಡುಕಾಟ ಆರಂಭಿಸಿದ್ದರು. […]

ನವದೆಹಲಿ: ಈರುಳ್ಳಿ ಕೆ.ಜಿಗೆ 80 ರೂ.

ನವದೆಹಲಿ: ದೆಹಲಿಯಲ್ಲಿ ಈರುಳ್ಳಿ ಬೆಲೆ  70 ರೂ. ರಿಂದ 80 ರೂ. ವರೆಗೆ ತಲುಪಿದ್ದು, ಕೇಂದ್ರ ಸರ್ಕಾರದ ಬೆಲೆ ನಿಯಂತ್ರಿಸಲು ಮುಂದಾಗಿದೆ. ದೇಶದ  ಹಲವು ಭಾಗಗಳಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ದೆಹಲಿಯಲ್ಲಿ ಕಳೆದ ವಾರ ಕೆ.ಜಿಗೆ 57 ರೂ. ಇತ್ತು. ಈ ವಾರ  70–80 ರೂ. ಕ್ಕೆ ಏರಿದೆ. 2-3 ದಿನಗಳಲ್ಲಿ ಬೆಲೆಯಲ್ಲಿ ಸ್ಥಿರತೆ ಮೂಡದೇ ಇದ್ದರೆ ಸರ್ಕಾರ ದಾಸ್ತಾನು ಮಿತಿ ಹೇರಲಿದೆ. ಈರುಳ್ಳಿ ಪೂರೈಕೆ ಹೆಚ್ಚಿಸುವ ಮೂಲಕ ಬೆಲೆಯನ್ನು ನಿಯಂತ್ರಣಕ್ಕೆ  ತರಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರದ […]