ಮರಳುಗಾರಿಕೆ ಆರಂಭಿಸುವಂತೆ ಆಗ್ರಹಿಸಿ ಸಿಐಟಿಯು: ಕಟ್ಟಡ ಕಾರ್ಮಿಕರ‌ ಪ್ರತಿಭಟನೆ 

ಉಡುಪಿ: ಜಿಲ್ಲೆಯಲ್ಲಿ ಶೀಘ್ರವೇ ಮರಳುಗಾರಿಕೆ ಆರಂಭಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಕೇಂದ್ರ ಹಾಗೂ ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವಿದೆ. ಜಿಲ್ಲೆಯಲ್ಲಿ ಶಾಸಕರು, ಸಂಸದರು ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಬಿಜೆಪಿ ಪಕ್ಷದವರಿದ್ದಾರೆ. ಆದರೂ ಈವರೆಗೆ ಮರಳಿನ ಸಮಸ್ಯೆಯನ್ನು ಪರಿಹಾರ ಮಾಡಲು ಆಗದಿರುವುದು ವಿಪರ್ಯಾಸವೇ ಸರಿ ಎಂದರು. ಮರಳಿನ ಸಮಸ್ಯೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಜನಪ್ರತಿನಿಧಿಗಳು […]

ಉಡುಪಿ ಸಂಸ್ಕ್ರತ ಕಾಲೇಜಿನ ವಿದ್ಯಾರ್ಥಿಗೆ ಸಂಸ್ಕ್ರತ ಭಾಷಣ ಸ್ಪರ್ಧೆಯಲ್ಲಿ ಸ್ವರ್ಣ ಪದಕ 

ಉಡುಪಿ: ಸಂಸ್ಕೃತ ಭಾರತೀ ಹಾಗೂ ತರುಣೋದಯ ಸಂಸ್ಕ್ರತ ಸೇವಾ ಸಂಸ್ಥೆಯ ಜಂಟಿ ಆಯೋಜನೆಯಲ್ಲಿ 29ನೇ ವರ್ಷದ ಕರ್ನಾಟಕ ರಾಜ್ಯಸ್ತರೀಯ ಸಂಸ್ಕ್ರತ ಭಾಷಣ ಸ್ಪರ್ಧೆ ಶಿವಮೊಗ್ಗದ ಸಂಸ್ಕ್ರತ ಭವನದಲ್ಲಿ ನಡೆಯಿತು. ನೂತನ ರಾಷ್ಟ್ರೀಯ ಶಿಕ್ಷಣ-ನೀತೌ ಸಂಸ್ಕ್ರತಸ್ಯ ಪ್ರಾಸಂಗಿಕತಾಃ” ವಿಷಯದಲ್ಲಿ ಭಾಷಣ ನೀಡಿದ ಉಡುಪಿ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧ ಸಂಸ್ಕ್ರತ ಮಹಾ ವಿದ್ಯಾಯಲಯದ ಜೋತಿಷ್ಯ ಆಚಾರ್ಯ-1 ತರಗತಿಯ ವಿದ್ಯಾರ್ಥಿ ‘ರಾಹುಲ ಮಿಶ್ರಾ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ. ರಾಹುಲ ಮಿಶ್ರಾ ಅವರು ಒಡಿಶಾ ರಾಜ್ಯದ ಬರಗಡ ಜಿಲ್ಲೆಯವರಾಗಿದ್ದು, ಉಡುಪಿಯ ಸಂಸ್ಕ್ರತ […]

ಹಿಂ.ವರ್ಗದ ವಿದ್ಯಾರ್ಥಿಗಳಿಗೆ ಡಿ. ದೇವರಾಜ ಅರಸು ವಿದೇಶಿ ವ್ಯಾಸಾಂಗ ವೇತನ – ಅರ್ಜಿ ಆಹ್ವಾನ

ಉಡುಪಿ: 2019-20 ನೇ ಸಾಲಿನಲ್ಲಿ ವಿದೇಶಿ ವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ/ ಪಿಹೆಚ್‍ಡಿ ವ್ಯಾಸಾಂಗ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3 ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಲಾಗುವ ಡಿ.ದೇವರಾಜ ಅರಸು ವಿದೇಶಿ ವ್ಯಾಸಾಂಗ ವೇತನಕ್ಕೆ ಆನ್‍ಲೈನ್ ಮೂಲಕ ಅರ್ಜಿಗಳನ್ನು  ಆಹ್ವಾನಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 15. ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‍ಸೈಟ್ ಅನ್ನು ಹಾಗೂ ದೂರವಾಣಿ ಸಂಖ್ಯೆ; 080-2574881 / […]

ಪರಿಸರ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ- ರಘುಪತಿ ಭಟ್

ಉಡುಪಿ: ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದ್ದು, ಸ್ವಚ್ಛತೆಯ ಕುರಿತು  ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆ ಆಗಬೇಕು, ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾದುದು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಸೋಮವಾರ, ಅಜ್ಜರಕಾಡು ಪುರಭವನದ ಮಿನಿ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ […]

ಮುಕ್ಕಚ್ಚೇರಿ: ಹೊಡೆದಾಟ-ಗುಂಡು ಹಾರಾಟ ಪ್ರಕರಣ ಹಲವರ ಬಂಧನ

ಮಂಗಳೂರು: ಮಂಗಳೂರಿನ ‌ಮುಕ್ಕಚ್ಚೇರಿ ಕಡಪರದಲ್ಲಿ ನಡೆದಿದ್ದ ಎರಡು ತಂಡಗಳ ನಡುವಿನ ಹೊಡೆದಾಟ ಹಾಗೂ ಗುಂಡು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹಾಗೂ ಕಡಪರ ನಿವಾಸಿ ಇರ್ಶಾದ್ ಎಂಬುವವರು ಗಾಯಗೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಸಂದೇಶದ ವಿಚಾರವಾಗಿ ಸುಹೈಲ್ ಕಂದಕ್ ಮತ್ತು ಕಡಪರ ನಿವಾಸಿ ಸಲ್ಮಾನ್ ಎಂಬುವವರ ತಂಡಗಳ ನಡುವೆ ರಾತ್ರಿ ಹೊಡೆದಾಟ ನಡೆದು ಗುಂಡು ಹಾರಿಸಲಾಗಿತ್ತು. ಆರಂಭದಲ್ಲಿ ವಾಟ್ಸ್‌ಆ್ಯಪ್ ಸಂದೇಶದ ವಿಚಾರವಾಗಿ ಸುಹೈಲ್ […]