ಉಡುಪಿ ಜಿಲ್ಲೆಯಲ್ಲಿ ಭತ್ತದ ಬೆಳೆ ಉತ್ತಮ:ರಸಗೊಬ್ಬರದ ಕೊರತೆ ಇಲ್ಲ:ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳ ಮಾಹಿತಿ

ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ 4100 ಮಿಮೀ ವಾಡಿಕೆ ಮಳೆ ಬರಬೇಕಾಗಿದ್ದು, ಪ್ರಸ್ತುತ 4400 ಮಿಮೀ ಮಳೆ ಯಾಗಿದ್ದು, ಜಿಲ್ಲೆಯಾದ್ಯಂತ ಬಹಳ ಉತ್ತಮ ಭತ್ತದ ಬೆಳೆ ಬಂದಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುರುವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿ.ಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈ ಬಾರಿ ಮಳೆ ಬಿಟ್ಟು ಬಿಟ್ಟು ಬಂದಿದ್ದು, ಭತ್ತದ ಬೆಳೆಗೆ ಪೂರಕವಾಗಿದೆ, 35470 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ […]
ಹೆಮ್ಮಾಡಿ: ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಮಹಾಸಭೆ

ಕುಂದಾಪುರ: ೧೯೭೩ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇದೀಗ ಸುವರ್ಣಮಹೋತ್ಸವದ ಸಮೀಪದಲ್ಲಿದೆ. ಕಳೆದ ಹತ್ತು ವರ್ಷಗಳಿಂದ ಸ್ವಲ್ಪಮಟ್ಟಿನ ಲಾಭ ಪಡೆದುಕೊಂಡು ಪ್ರಸ್ತುತ ೮೬ಲಕ್ಷ ಲಾಭವನ್ನು ಗಳಿಸಿದೆ. ಸಂಸ್ಥೆಯ ಈ ಸಾಧನೆಗೆ ಗ್ರಾಮೀಣಭಾಗದ ರೈತರು ಕೊಡುಗೆ ಅಪಾರವಾದುದು ಎಂದು ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ದೇವಾಡಿಗ ಹೇಳಿದರು. ಅವರು ಬುಧವಾರ ಹೆಮ್ಮಾಡಿಯಲ್ಲಿರುವ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಡಳಿತ ಮಂಡಳಿ ಹಾಗೂ […]
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಅನಿತಾ ಪಿ.ಪೂಜಾರಿ ಪ್ರಥಮ ರ್ಯಾಂಕ್

ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕಳೆದ 2019ನೇ ಮೇ ತಿಂಗಳಲ್ಲಿ ನಡೆಸಿದ ಕನ್ನಡ ಎಂ.ಎ ಪರೀಕ್ಷೆಯಲ್ಲಿ ಅನಿತಾ ಪಿ.ಪೂಜಾರಿ ತಾಕೊಡೆ ಅವರು ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಕೊಡೆಯ ಅನಿತಾ ಅವರು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದಾರೆ. ಕಳೆದ ಎರಡು ದಶಕಗಳಿಂದ ಮುಂಬಯಿ ವಾಸಿಯಾಗಿರುವ ಅನಿತಾ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿನಿ, ಕವಯತ್ರಿ, ಕಥೆಗಾರ್ಥಿ, ಅಂಕಣಕಾರರಾಗಿ ಗುರುತಿಸಿಕೊಂಡಿದ್ದು ಕನ್ನಡದ ಕೃತಿಗಳನ್ನೂ ಪ್ರಕಟಿಸಿದ್ದಾರೆ
ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಕೋಟದ ಹುಡುಗನಿಗೆ ನೆರವಾಗಿ ಪ್ಲೀಸ್

ತನ್ನ ಮನೆಗೆ ಆಧಾರಸ್ತಂಭವಾಗಿದ್ದ ಕೋಟದ ಯುವಕನೋರ್ವ ಹೃದಯ ಖಾಯಿಲೆಯಿಂದ ಬಳಲುತ್ತಿದ್ದು ಯುವಕನ ಚಿಕಿತ್ಸೆ ವೆಚ್ಚ ನೀಡಲಾಗದೇ ಕುಟುಂಬ ಕಂಗಾಲಾಗಿ ಕೂತಿದೆ. ಹೌದು ಮೂಲತ ಕೋಟದ ಕಲ್ಮಾಡಿ ನಿವಾಸಿ, ಪ್ರಸ್ತುತ ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ವಾಸವಿರುವ ಸುಜಾತ ಗಾಣಿಗ ಹಾಗೂ ಆರ್. ಹರಿ ದಂಪತಿಯ ಮಗ 21 ವರ್ಷದ ಸುರದ್ರೂಪಿ ಮಗ ಸಚಿನ್ ಹೃದಯ ಖಾಯಿಲೆಗೆ ತುತ್ತಾಗಿದ್ದಾರೆ. ಸಚಿನ್ ಅವರದ್ದು ತೀರಾ ಬಡತನದ ಕುಟುಂಬ. ತಾಯಿ ಸುಜಾತ ಅವರು ಬಾಲ್ಯದಿಂದಲೂ ಮನೆಯ ಜವಬ್ದಾರಿಯನ್ನು ಹೊತ್ತು ಸುತ್ತಲಿನ ಮನೆಗಳಲ್ಲಿ ಮನೆಗೆಲಸ ಮಾಡಿ ತನ್ನೆರಡು […]
ಕೊಲ್ಲೂರು ಅಭಯಾರಣ್ಯದಲ್ಲಿ ಟೆಂಟ್ ಪತ್ತೆ: ಊಹಾಪೋಹಗಳಿಗೆ ಬಿತ್ತು ತೆರೆ

ಕುಂದಾಪುರ: ಕೊಲ್ಲೂರು ಸಮೀಪ ದಳಿ ಹಾಗೂ ಅರಿಶಿನ ಗುಂಡಿ ಫಾಲ್ಸ್ ಅಭಯಾರಣ್ಯದಲ್ಲಿ ಪತ್ತೆಯಾದ ಟೆಂಟ್ ಅನ್ನು ಯಾರೋ ವಿರಕ್ತರು ದ್ಯಾನಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಎಎನ್‍ಎಫ್ ಸ್ಪಷ್ಟಪಡಿಸಿದೆ. ಈ ಮೂಲಕ ಕಳೆದೆರಡು ದಿನಗಳಿಂದ ಕೊಲ್ಲೂರು ಅಭಯಾರಣ್ಯದಲ್ಲಿ ಪತ್ತೆಯಾದ ಟೆಂಟ್‍ಗೂ ನಕ್ಸಲರಿಗೂ ಸಂಬಂಧವಿದೆ ಎಂಬ ಊಹಾಪೋಹ, ಚರ್ಚೆಗಳಿಗೆ ಕೊನೆಗೂ ತೆರೆ ಬಿದ್ದಂತಾಗಿದೆ. ಸೋಮವಾರ ಕಾಡಿಗೆ ಹೋದ ಸ್ಥಳೀಯರಿಗೆ ಅಭಯಾರಣ್ಯದಲ್ಲಿ ಟೆಂಟ್ ಕಣ್ಣಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರು […]