ಮಹಿಳಾ ಮೀನುಗಾರರ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಬ್ಯಾಂಕ್‌ಗಳಿಗೆ ಆದೇಶ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಬಿ. ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಘೋಷಿಸಿರುವಂತೆ ಮಹಿಳಾ ಮೀನುಗಾರರು 2017-18 ಮತ್ತು 2018-19ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದಿದ್ದ 50,000 ವರೆಗಿನ  60 ಕೋಟಿ ಸಾಲವನ್ನು ಮನ್ನಾ ಮಾಡಲು ಸರಕಾರ ಬದ್ಧವಾಗಿರುವುದಾಗಿ ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈಗಾಗಲೇ ಸರಕಾರ ಈ ಯೋಜನೆಗಾಗಿ 60 ಕೋಟಿ ಮೀಸಲಿರಿಸಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಹಿಳಾ ಮೀನುಗಾರರ ಸಾಲದ ಬಗ್ಗೆ ಮಾಹಿತಿಯನ್ನು ಕೇಳಲಾಗಿದೆ. ಕೆಲವು‌ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ […]

ದೇಶದಲ್ಲಿ ಇ-ಸಿಗರೇಟ್ ಬ್ಯಾನ್: ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ ಪ್ರಕಟಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ದೇಶದಲ್ಲಿ ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಾದ್ಯಂತ ಇ-ಸಿಗರೇಟ್‌ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇ-ಸಿಗರೇಟ್ ಮೇಲೆ ನಿರ್ಬಂಧ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಇ-ಸಿಗರೇಟ್ ಆಮದು, ಉತ್ಪಾದನೆ, ವಿತರಣೆ, ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಎಲ್ಲಾ ಬಗೆಯ ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ […]

ನೈಜೀರಿಯಾ ಸಂವಾದ ಕಾರ್ಯಕ್ರಮಕ್ಕೆ ಐಜಿಪಿ ರೂಪಾ

ಬೆಂಗಳೂರು: ನೈಜೀರಿಯಾ ‘ಗುಸೌ ಇನ್ಸ್‌ಟಿಟ್ಯೂಟ್‌’ ಏರ್ಪಡಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ರಾಜ್ಯದ ರೈಲ್ವೆ ಐಜಿಪಿ ಡಿ.ರೂಪಾ ಅವರು ಪಾಲ್ಗೊಳ್ಳಲಿದ್ದಾರೆ. ಡಿ.ರೂಪಾ ಅವರು ನೈಜೀರಿಯಾಕ್ಕೆ ಅಧಿಕೃತ ಆಹ್ವಾನ ಪಡೆದು ತೆರಳುತ್ತಿರುವ ರಾಜ್ಯದ ಮೊದಲ ಪೊಲೀಸ್‌ ಅಧಿಕಾರಿ ಆಗಿದ್ದಾರೆ. ಸೆ.19ರಂದು ನೈಜೀರಿಯಾದ ಅಬುಜದ ಶೆರಟನ್‌ ಹೋಟೆಲ್‌ನಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವ ರೂಪಾ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ನಾಯಕತ್ವ, ಪಾತ್ರ ಹಾಗೂ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಬಗ್ಗೆ ಮಾತನಾಡಲಿದ್ದಾರೆ. ಅಲ್ಲದೆ, ಪೊಲೀಸ್‌ ಇಲಾಖೆಯಲ್ಲಿನ ವ್ಯವಸ್ಥೆ […]

ಸಕಾಲ ಸೇವೆಗಳನ್ನು, ಸಕಾಲ ಯೋಜನೆಯ ಹೊರಗೆ ವಿತರಿಸಿದರೆ ಕ್ರಿಮಿನಲ್ ಮೊಕದ್ದಮೆ: ಉಡುಪಿ ಎಡಿಸಿ

ಉಡುಪಿ: ಸಾರ್ವಜನಿಕರಿಗೆ ಸಕಾಲದಲ್ಲಿ  ಯೋಜನೆಯಲ್ಲಿ ಅಳವಡಿಸಿರುವ ಸೇವೆಗಳನ್ನು ಸಕಾಲ ತಂತ್ರಾಂಶದ ಮೂಲಕವೇ ಸ್ವೀಕರಿಸಿ, ಸೇವೆಗಳನ್ನು ಒದಗಿಸಬೇಕು, ಸಕಾಲ ತಂತ್ರಾಂಶವನ್ನು ಬೈಪಾಸ್  ಮಾಡಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಎಚ್ಚರಿಕೆ ನೀಡಿದ್ದಾರೆ. ಅವರು, ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಕಾಲ ಸೇವೆಗಳ ಅಧಿನಿಯಮದ ಸಮರ್ಪಕ ಅನುಷ್ಟಾನದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸರಕಾರವು ಸಾರ್ವಜನಿಕರಿಗೆ ಶೀಘ್ರದಲ್ಲಿ ಅಗತ್ಯ ಸೇವೆಗಳು ದೊರೆಯುವ ಉದ್ದೇಶದಿಂದ ಸಕಾಲ […]

ಇಲ್ಲಿ ವಿದ್ಯಾರ್ಥಿಗಳಿಗೆ ಪಾಠ ಇಲ್ಲ, ಬರೀ ಆಟ ಮಾತ್ರ: ಶಿಕ್ಷಕರೇ ಇಲ್ಲ,ಮಕ್ಕಳಿಗೆ ಆಟದ ಮೈದಾನವೇ ಎಲ್ಲಾ !

ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ಸರ್ಕಾರಿ ಶಾಲೆ ಉಳಿಸಿ-ಬೆಳೆಸಿ ಎನ್ನುವ ಸರ್ಕಾರದ ಆಶಯ ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಿಬಿಟ್ಟಿವೆ. ಆಳುವ ಸರ್ಕಾರಗಳು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ, ಬೇಜವಾಬ್ದಾರಿ ನಡೆಗಳಿಂದಾಗಿ ಇಂದು ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಿದರೂ ಇನ್ನೂ ಕೂಡ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳು ಪಾಠ ಕಲಿತಂತೆ ಕಾಣುತ್ತಿಲ್ಲ. ಪಶ್ಚಿಮಘಟ್ಟದ ಬುಡ ಎಂದು ಕರೆಯಲ್ಪಡುವ ಯಡಮೊಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಹಲವರಿಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ದಿನಗಳಿಂದ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. […]