ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಯುವಕ ದೇವರಗದ್ದೆಯಲ್ಲಿರುವ ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ದೇಗುಲಕ್ಕೆ ಕಾಡಿನಿಂದ ನೀರು ಸರಬರಾಜಿಗೆ ಅಳವಡಿಸಿದ್ದ ಪೈಪುಗಳ ಮೂಲಕವೇ ಸಾಗಿ ಬಂದು ದೇವರಗದ್ದೆಗೆ ತಲುಪಿದ್ದಾರೆ. ಬೆಂಗಳೂರು ಗಾಯತ್ರಿ ನಗರದ ನಿವಾಸಿ ಸಂತೋಷ್ ಸೋಮವಾರ ಸುಬ್ರಹ್ಮಣ್ಯದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ಹೋಗಿದ್ದಾಗ ನಾಪತ್ತೆಯಾಗಿದ್ದರು. ಹೀಗಾಗಿ ಪುಷ್ಪಗಿರಿ ವನ್ಯಧಾಮದ ಗಿರಿಗದ್ದೆಯಲ್ಲಿ ನಾಲ್ಕು ತಂಡಗಳಲ್ಲಿ ಹುಡುಕಾಟ ನಡೆಸಿದ್ದರು. ಬೆಂಗಳೂರಿಂದ ಸುಮಾರು 12 ಮಂದಿಯ ತಂಡ ಚಾರಣಕ್ಕೆ ತೆರಳಿದ್ದರು. ಈ ಮಧ್ಯೆ ಸಂತೋಷ್ ಧಿಡೀರ್ […]
ಶಾಲಾ, ಕಾಲೇಜುಗಳಿಗೆ ಸೆ.30ರಿಂದಲೇ ದಸರಾ ರಜೆ ನೀಡಿ; ಶಾಸಕ ಕಾಮತ್ ಸಚಿವರಿಗೆ ಮನವಿ

ಮಂಗಳೂರು: ಮಂಗಳೂರಿನಲ್ಲಿ ನವರಾತ್ರಿ ಸಂಭ್ರಮ ಸೆಪ್ಟೆಂಬರ್ 30ರಿಂದಲೇ ಆರಂಭವಾಗಲಿದ್ದು, ಅದಕ್ಕೆ ಸರಿಯಾಗಿ ದಸರಾ ರಜೆಯನ್ನು ಮಂಜೂರು ಮಾಡಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ರಾಜ್ಯ ಪ್ರಾರ್ಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿಯಾಗಿ, ಹೇಗೆ ಮೈಸೂರು ದಸರಾ ಸುಪ್ರಸಿದ್ಧವಾಗಿದೆಯೋ ಹಾಗೆಯೇ ಮಂಗಳೂರು ದಸರಾ ಕೂಡ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಮಂಗಳೂರಿನಲ್ಲಿ ನವರಾತ್ರಿಯ ಧಾರ್ಮಿಕ ವಿಧಿವಿಧಾನಗಳು ಸೆಪ್ಟೆಂಬರ್ 28 […]
ಸೆ.17-19: ದೊಡ್ಡಣಗುಡ್ಡೆ ಕ್ಷೇತ್ರದ ರಮಾನಂದ ಗುರೂಜಿ ಮುಂಬಯಿ ಭೇಟಿ

ಉಡುಪಿ: ಉಡುಪಿಯ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಯಾದ ಶ್ರೀ ರಮಾನಂದ ಗುರೂಜಿ ಅವರು ಸೆ. 17ರಿಂದ 19ರ ವರೆಗೆ ಮುಂಬಯಿಗೆ ಭೇಟಿ ನೀಡಲಿದ್ದು, ಅಲ್ಲಿ ತಮ್ಮ ಹಲವು ಭಕ್ತರ ಭೇಟಿಗೆ ಲಭ್ಯವಿರಲಿದ್ದಾರೆ. ಅವರು ಸೆ. 17, 18ರಂದು ದಾದರ್ ಹಾಗೂ ಸೆ. 19ರಂದು ದಹಿಸರ್ ಪರಿಸರದಲ್ಲಿ ಇರುತ್ತಾರೆ. ಭಕ್ತ ಜನರ ಸಂಕಷ್ಟ ನಿವಾರಿಸಬಲ್ಲ ಗುರೂಜಿ ದರ್ಶನ ಬಯಸುವ ಭಕ್ತರು ಅವರ ಆಪ್ತ ಕಾರ್ಯದರ್ಶಿ ಕುಸುಮಾ ನಾಗರಾಜ್ (7738387979/ 6360459569) ಅವರನ್ನು ಸಂಪರ್ಕಿಸಿ […]