ಉಡುಪಿ: ಸೆಪ್ಟಂಬರ್ 21 ರಿಂದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ
ಉಡುಪಿ: 2019-20ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ಈ ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ. ಸ್ಪರ್ಧೆಗಳು ನಡೆಯುವ ದಿನಾಂಕ, ಸ್ಥಳದ ವಿವರಗಳು: ಸೆಪ್ಟಂಬರ್ 21 ರಂದು ಮಣಿಪಾಲ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಫುಟ್‍ಬಾಲ್ ಸ್ಪರ್ಧೆಯು ನಡೆಯಲಿದೆ. ಸೆಪ್ಟಂಬರ್ 21 ಮತ್ತು 22 ರಂದು ಮಂಡ್ಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜೂಡೋ ಮತ್ತು ಟೇಕ್ವಾಂಡೋ ಸ್ಪರ್ಧೆಗಳಿಗೆ ನೇರ ಆಯ್ಕೆ ಪ್ರಕ್ರಿಯೆಯು ನಡೆಯಲಿದೆ. ಸೆಪ್ಟಂಬರ್ 22 ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆಯ ನೇರ ಆಯ್ಕೆ […]
ಉಡುಪಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬೊಕ್ಕೆ ಬೇಡ- ದಿನಕರ ಬಾಬು

ಉಡುಪಿ: ಜಿಲ್ಲೆಯಲ್ಲಿ ನಡೆಯುವ ವಿವಿಧ ಸರಕಾರಿ ಕಾರ್ಯಕ್ರಮಗಳಲ್ಲಿ ಅತಿಥಿ ಗಣ್ಯರನ್ನು ಸ್ವಾಗತಿಸುವಾಗ, ಪ್ಲಾಸ್ಟಿಕ್‍ನಿಂದ ಸುತ್ತಿದ ಹೂವಿನ ಬೊಕ್ಕೆಗಳನ್ನು ನೀಡಲಾಗುತ್ತಿದೆ, ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದ್ದು, ಸರಕಾರಿ ಕಾರ್ಯಕ್ರಮಗಳಲ್ಲಿ ಈ ರೀತಿ ಪ್ಲಾಸ್ಟಿಕ್ ಬಳಕೆ ಮಾಡುವುದು ಸಮಂಜಸವಾಗಿರುವುದಿಲ್ಲ. ಆದ್ದರಿಂದ ಕಾರ್ಯಕ್ರಮಗಳಲ್ಲಿ ಅತಿಥಿ ಗಣ್ಯರನ್ನು ಸ್ವಾಗತಿಸುವಾಗ, ಪ್ಲಾಸ್ಟಿಕ್ ರಹಿತ ಬೊಕ್ಕೆಗಳನ್ನು ನೀಡುವ ಮೂಲಕ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಎಲ್ಲಾ ಇಲಾಖೆಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನ ವೆಬ್‌ಸೈಟ್ ಉದ್ಘಾಟನೆ

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ನೂತನ ವೆಬ್‌ಸೈಟ್‌ನ (www.mahalakshmicoopbank.com) ಉದ್ಘಾಟನೆ ಬ್ಯಾಂಕ್ ನ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು. ಬ್ಯಾಂಕಿನ ಗ್ರಾಹಕರೂ, ಗೀತಾನಂದ ಫೌಂಡೇಶನ್ ಕೋಟ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರು ವೆಬ್ಸೈಟ್ ಉದ್ಘಾಟಿಸಿದರು. ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಮಂದಾಗಿರುವ ಬ್ಯಾಂಕಿನ ಕಾರ್ಯವೈಖರಿಯನ್ನು ಮೆಚ್ಚಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಉಪಾಧ್ಯಕ್ಷ ಪಿ. ಮಾಧವ ಸುವರ್ಣ, ಬ್ಯಾಂಕ್ ನ ಗ್ರಾಹಕ ಆನಂದ ಪಿ. […]
‘ಕೋಟ ಶ್ರೀನಿವಾಸ ಪೂಜಾರಿ ಗೆ ಜಿಲ್ಲಾ ಉಸ್ತುವಾರಿ ತಪ್ಪಿಸಲು ಐವರು ಶಾಸಕರ ಒತ್ತಡವೇ ಕಾರಣ..!
ಉಡುಪಿ: ಬಿಲ್ಲವ ಮುಖಂಡ ಹಾಗೂ ಸಾಕಷ್ಟು ಅನುಭವ ಹೊಂದಿರುವ ಸಜ್ಜನ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ತಪ್ಪಿಸಿ, ದ.ಕ. ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲು ಜಿಲ್ಲೆಯ ಐವರು ಶಾಸಕರ ಒತ್ತಡವೇ ಕಾರಣ ಎಂಬ ಗುಮಾನಿ ಇದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಕಲ್ಮಾಡಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ. ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಲು ಒತ್ತಡ ಹಾಕಿರುವ ಶಾಸಕರ ಮನೆಗೆ ತೆರಳಿ ಮನವಿ ಮಾಡುವ ಕೆಲಸ ಮಾಡಲಾಗುವುದು. […]
ಡಿಕೆಶಿ ಬಿಡುಗಡೆಗೆ ಅಭಿಮಾನಿ ಬಳಗದಿಂದ ದೇವರಿಗೆ ಪ್ರಾರ್ಥನೆ

ಮಂಗಳೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ಬಿಡುಗಡೆಗೆ ಪ್ರಾರ್ಥಿಸಿ ಡಿಕೆಶಿ ಅಭಿಮಾನಿ ಬಳಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಹೋಮ ಹಾಗೂ ಪುತ್ತೂರಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮನ್ಯು ಸೂಕ್ತ ಹೋಮ (ಮಣಿ ಸೂಕ್ತ ಹವನ) ನಡೆಯಿತು. ಬೆಳಿಗ್ಗೆ 10ರಿಂದ ಆರಂಭಗೊಂಡ ಹೋಮ 12.30ರ ವೇಳೆಗೆ ಪೂರ್ಣಾಹುತಿ ನಡೆಯಿತು. ನಾರಾಯಣ ಅಸ್ರಣ್ಣರ ನೇತೃತ್ವದಲ್ಲಿ ಹವನ ನಡೆಯಿತು. ಡಿಕೆಶಿ ಅವರ ಸಂಕಷ್ಟ ನಿವಾರಣೆಯಾಗಬೇಕು. ಅವರ ಆರೋಗ್ಯ ಸುಧಾರಣೆ ಆಗಬೇಕು. […]