ನಿಟ್ಟೂರು ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಶಿಕ್ಷಕರಿಗೆ ಅಭಿನಂದನೆ

ಉಡುಪಿ: ಸುವರ್ಣ ಸಂಭ್ರಮದಲ್ಲಿರುವ ನಿಟ್ಟೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆಗೈದು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 60ಕ್ಕೂ ಹೆಚ್ಚು ಹಳೆವಿದ್ಯಾರ್ಥಿ ಶಿಕ್ಷಕರನ್ನು ಶಾಲಾ ರಜತ ಸಭಾಭವನದಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದಿಸುವ ಹೃದಯಸ್ಪರ್ಶಿ ಕಾರ್ಯಕ್ರಮ ಜರಗಿತು. ಪೂರ್ಣಪ್ರಜ್ಞ ಕಾಲೇಜೀನ ನಿವೃತ್ತ ಉಪನ್ಯಾಸಕ ಡಾ| ಬಿ.ಎಂ. ಸೋಮಯಾಜಿ ಅಧ್ಯಕ್ಷತೆಯಲ್ಲಿ ಹಳೆವಿದ್ಯಾರ್ಥಿ ಶಿಕ್ಷಕರನ್ನು ಅಭಿನಂದಿಸಲಾಯಿತು. ಶಿಕ್ಷಕರನ್ನು ಅಭಿನಂದಿಸಿದ ಡಾ| ಬಿ.ಎಂ. ಸೋಮಯಾಜಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಸದಾ ಕಲಿಯುವ ತುಡಿತ ಮತ್ತು ವಿದ್ಯಾರ್ಥಿ ಪ್ರೀತಿ ಶಿಕ್ಷಕರಲ್ಲಿ […]

ಸಾಂಸ್ಕೃತಿಕ-ಕಲಾ ಚಟುವಟಿಕೆ ಹೃದಯ ಬೆಸೆಯುವ‌ ಮಾಧ್ಯಮ: ಅಂಬಾತನಯ ಮುದ್ರಾಡಿ

ಉಡುಪಿ: ಸಾಂಸ್ಕೃತಿಕ ಕಲಾ ಚಟುವಟಿಕೆಗಳು ಹೃದಯ ಬೆಸೆಯುವ ಮಾಧ್ಯಮವಾಗಿದ್ದು, ಇದರ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು. ಉಡುಪಿ ಸಂಸ್ಕೃತಿ ವಿಶ್ವಪ್ರತಿಷ್ಠಾನದ ವತಿಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಸಂಸ್ಕೃತಿ ಪ್ರತಿಷ್ಠಾನದ ಉದ್ಘಾಟನೆ, ನಾಟಕೋತ್ಸವ, ಸಾಕ್ಷ್ಯ ಚಿತ್ರ ಬಿಡುಗಡೆ ಹಾಗೂ ಯುವ ಪ್ರತಿಭೆಗಳ ಭಾವಾಭಿವ್ಯಕ್ತಿ ಕಾರ್ಯಕ್ರಮದಲ್ಲಿ ‘ಉಡುಪಿ ವಿಶ್ವನಾಥ ಶೆಣೈ’ ಅವರ ಜೀವನ ಚರಿತ್ರೆ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ […]

ಗಿರ್ ಗಿಟ್ ನಿಷೇದಾಜ್ಞೆ ವಿಚಾರ: FB ಖಾತೆಗಳ ಟೀಕೆ, ಆರೋಪಿಗಳಿಗೆ ವಕಾಲತು ಹಾಕಲ್ಲ: ವಕೀಲರ ಸಂಘ ನಿರ್ಧಾರ

ಮಂಗಳೂರು: ಗಿರಿಗಿಟ್ ಚಿತ್ರದ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ ನ್ಯಾಯವಾದಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟಿದೆ. ಈಗಾಗಲೇ ಎರಡು ಖಾತೆಗಳನ್ನು ಸ್ತಂಬನ ಮಾಡಲಾಗಿದ್ದು, ಇನ್ನಷ್ಟು ಫೇಸ್‌ಬುಕ್ ಖಾತೆಗಳ ವಿರುದ್ಧ ಕ್ರಮ ಕೈಗೊಂಡು ಆರೋಪಿಗಳನ್ನು ತಕ್ಷಣ ಬಂಧಿಸಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನ ಬಂದರು ಠಾಣೆಯಲ್ಲಿ ತಮ್ಮನ್ನು ಭೇಟಿಯಾದ ವಕೀಲರ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ. […]

ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸ್ಪಿಕ್ ಮೆಕೆ’ ಸಾಂಸ್ಕೃತಿಕ ಕಾರ್ಯಕ್ರಮ

ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸೆ.13 ರಂದು ಮಾಹೆಯ ಸಾಂಸ್ಕೃತಿಕ ಸಂಯೋಜನಾ ಸಮಿತಿಯ ವತಿಯಿಂದ .`ಸ್ಪಿಕ್ ಮೆಕೆ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಾರಂಪರಿಕ ಭಾರತೀಯ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಲಾಮಂಡಲಂ ಸುರೇಶ್ ಅವರ ಗಾಯನದಲ್ಲಿ, ಕಲಾಮಂಡಲಂ ರಾಜೀವ್‌ ಅವರ ಮೃದಂಗದಲ್ಲಿ ಕಲಾಮಂಡಲಂ ಮೋಹನಕೃಷ್ಣ ಅವರಿಂದ ಕಥಕ್ಕಳಿ ನೃತ್ಯ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಮಂಜುನಾಥ್ ಎ ಕೋಟ್ಯಾನ್, ಮಾಹೆಯ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. […]

ಕೌಶಲ್ಯ- ಉದ್ಯೋಗ ಅಭಿವೃದ್ಧಿ ಶಿಬಿರದಲ್ಲಿ ಪಾಲ್ಗೊಳ್ಳಿ, ಭವಿಷ್ಯದ ದಾರಿ ಕಂಡುಕೊಳ್ಳಿ

ಉಡುಪಿ:  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಮತ್ತು ಸಿಡಾಕ್ ಧಾರವಾಡ ಇವರ ಜಂಟಿ ಆಶ್ರಯದಲ್ಲಿ ಸ್ವಉದ್ಯೋಗಾಂಕ್ಷಿಗಳಿಗೆ ಉಚಿತ ಉದ್ಯೋಗ ಅಭಿವೃದ್ಧಿ ತರಬೇತಿ ಶಿಬಿರವನ್ನು ಸೆಪ್ಟಂಬರ್ 27 ಮತ್ತು 28 ರಂದು ಉಡುಪಿಯಲ್ಲಿ ಏರ್ಪಡಿಸಲಾಗಿದೆ. ಸರಕಾರದ ವಿವಿಧ ಇಲಾಖೆಗಳಲ್ಲಿ ಸ್ವಯಂ ಉದ್ಯೋಗಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯವಿದ್ದು, ಸ್ವಉದ್ಯೋಗಾಂಕ್ಷಿಗಳಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಈ ಶಿಬಿರದಲ್ಲಿ ಸ್ವಂತ ಉದ್ಯೋಗಕ್ಕೆ ಬೇಕಾಗುವ ನಾಯಕತ್ವದ ಗುಣಗಳು, ಸರಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ ವಿವಿಧ ಯೋಜನೆಗಳು, ಸಣ್ಣ […]