14ನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ: ದ್ವಿತೀಯ ಸ್ಥಾನ ಪಡೆದ ಕುಂದಾಪುರ ಘಟಕದ ವಿದ್ಯಾರ್ಥಿಗಳು

ಗಂಗೊಳ್ಳಿ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ. ಲಿಮಿಟೆಡ್ ಇದರ ವತಿಯಿಂದ ಮೈಸೂರಿನಲ್ಲಿ ನಡೆದ 14ನೇ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಕುಂದಾಪುರ ಘಟಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಕುಂದಾಪುರ ತಾಲೂಕಿನ 60 ವಿದ್ಯಾರ್ಥಿಗಳ ಪೈಕಿ ವಿವಿಧ ವಿಭಾಗದಿಂದ 6 ವಿದ್ಯಾರ್ಥಿಗಳು ಪ್ರಥಮ ಹಾಗೂ 12 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಸುಮಾರು 1500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶ್ರೀ‌ಗುರುನಾರಾಯಣ ಜಯಂತಿಗೆ‌ ಜನಪ್ರತಿನಿಧಿಗಳ ಅನುಪಸ್ಥಿತಿ; ಬಿಲ್ಲವ ಸಮಾಜ‌ ಬೇಸರ

ಉಡುಪಿ: ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ನಡೆದ ಜಿಲ್ಲಾಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಜಿ.ಪ. ಅಧ್ಯಕ್ಷರೂ ಭಾಗವಹಿಸದೇ ಇರುವುದು‌ ಇಡೀ ಬಿಲ್ಲವ ಸಮಾಜಕ್ಕೆ ನೋವು ತಂದಿದೆ ಎಂದು ಬಿಲ್ಲವರ ಪರಿಷತ್ ಜಿಲ್ಲಾಧ್ಯಕ್ಷ ನವೀನ್ ಅಮೀನ್ ಶಂಕರಪುರ ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಬಂದರೆ ಬಿಲ್ಲವರ ಮತ ಬ್ಯಾಂಕ್ ಉದ್ದೇಶದಿಂದ ಒಲೈಕೆ ಮಾಡುತ್ತಾರೆ. ಆದರೆ ಇತರ ಮಹನೀಯರ ಜನ್ಮದಿನಾಚರಣೆಗಳಿಗೆ ತೋರುವ ಆಸಕ್ತಿ ಗುರುಜಯಂತಿಗೆ ತೋರಿಸದೆ ಇರುವುದು ನೋವು ತಂದಿದೆ […]

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ದ.ಕ.ಗೆ ಕೋಟ, ಉಡುಪಿಗೆ ಬೊಮ್ಮಯಿ 

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳ ಅನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಜಿಲ್ಲೆಗೆ ಬಸವರಾಜ ಬೊಮ್ಮಯಿ ಅವರನ್ನು ನೇಮಕ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಅನಂತರ ಸಚಿವ ಸಂಪುಟದ ಬಳಿಕ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮತ್ತು ಸಚಿವ ಸ್ಥಾನ ಪಡೆದುಕೊಂಡ ಸಚಿವರಲ್ಲೂ ಹಲವರು ಗೊಂದಲ ಹೊಂದಿದ್ದರು. ಹೀಗಾಗಿ ಸಿಎಂ ಯಡಿಯೂರಪ್ಪ […]

ಉಡುಪಿ: ಸಾಲುಮರಗಳ ಕಾವ್ಯ-ತಿಮ್ಮಕ್ಕ ಸಾಕ್ಷ್ಯಚಿತ್ರ ಬಿಡುಗಡೆ

ಉಡುಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕನವರ ಕುರಿತು ರಂಗ ನಿರ್ದೇಶಕ ಎಚ್‌.ಪಿ. ರವಿರಾಜ್‌ ಪರಿಕಲ್ಪನೆಯಲ್ಲಿ ಮೂಡಿಬಂದ ‘ಸಾಲುಮರಗಳ ಕಾವ್ಯ–ತಿಮ್ಮಕ್ಕ’ ಸಾಕ್ಷ್ಯಚಿತ್ರವನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಕಲಾವಿದ ಮಹೇಶ್‌ ಮಲ್ಪೆ ಅವರು ರುಬಿಕ್‌ ಕ್ಯೂಬ್‌ನಲ್ಲಿ ರಚಿಸಿದ ಸಾಲುಮರದ ತಿಮ್ಮಕ್ಕನವರ ಚಿತ್ರವನ್ನು ಅನಾವರಣಗೊಳಿಸಲಾಯಿತು. ಉಡುಪಿಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಾಲುಮರದ ತಿಮ್ಮಕ್ಕ ಹಾಗೂ ಅವರ ದತ್ತು ಪುತ್ರ ಬಿ.ಎನ್‌. ಉಮೇಶ್‌ ಅವರನ್ನು ಸನ್ಮಾನಿಸಲಾಯಿತು. ಆ ಬಳಿಕ ನಡೆದ […]

ಮಂಗಳೂರು: ಬಾಲಕನ ‌ಅಪಹರಣ: ಓರ್ವನ ಬಂಧನ

ಮಂಗಳೂರು: ಬಾಲಕನೋರ್ವನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಮಹೇಶ್ ಬಂಧಿತ ಆರೋಪಿ. ಈತ 7 ವರ್ಷ ವಯಸ್ಸಿನ ಬಾಲಕನನ್ನು ಬೆಂಗಳೂರಿನ ಯಲಹಂಕದ ರೈಲ್ವೆ ನಿಲ್ದಾಣದಿಂದ ಅಪಹರಿಸಿ ತಂದು ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಚನಿಲ ಎಂಬಲ್ಲಿನ ಕಾರ್ಮಿಕ ಪೂರೈಕೆಯ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಇರಿಸಿ ಹೋಗಿದ್ದ. ಈ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಬೆಂಗಳೂರಿನ ಬನಶಂಕರಿಯ ಶಿಲ್ಪಾ ಮತ್ತು ಆಕೆಯ ಪತಿ ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹೇಶ್ ಎಂಬಿಬ್ಬರ […]