ಮಂಗಳೂರು: ಡಿಸೆಂಬರ್ ತಿಂಗಳಲ್ಲಿ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ
ಮಂಗಳೂರು: ತುಳು ಪರಿಷತ್ ಆಶ್ರಯದಲ್ಲಿ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನವನ್ನು ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಮಂಗಳೂರು ಹೋಟೆಲ್ ವುಡ್ ಲ್ಯಾಂಡ್ಸ್ ಸಭಾಂಗಣದಲ್ಲಿ ನಡೆದ ತುಳು ಪರಿಷತ್ ಕೇಂದ್ರೀಯ ಸಮಿತಿ ಸಭೆಯಲ್ಲಿ ಸಮ್ಮೇಳನದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾಗಿ ಕಲಾವಿದ, ಸಂಘಟಕ ಸ್ವರ್ಣ ಸುಂದರ್ ಅವರನ್ನು ಆಯ್ಕೆ ಮಾಡಲಾಯಿತು. ಸಮಾರಂಭದಲ್ಲಿ ಮಾತನಾಡಿದ ಸ್ವರ್ಣ ಸುಂದರ್ ಅವರು, ಯುವ ಸಮುದಾಯದಲ್ಲಿ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ಮತು […]
ಓಣಂ ಹಬ್ಬ ಸಮಾಜವನ್ನು ಬೆಸೆಯುತ್ತದೆ: ಕೋಟ
ಉಡುಪಿ: ಓಣಂ ಕೇರಳಿಗರ ಅತ್ಯಂತ ವಿಶಿಷ್ಟ ಹಬ್ಬವಾಗಿದ್ದು, ಇದನ್ನು ಯಾವುದೇ ಜಾತಿ, ಮತ ಭೇದವಿಲ್ಲದೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಓಣಂ ಹಬ್ಬ ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತದೆ ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕೇರಳ ಕಲ್ಚರಲ್ ಅಂಡ್ ಸೋಷಿಯಲ್ ಸೆಂಟರ್ನ 27ನೇ ವಾರ್ಷಿಕೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ ಓಣಂ ಹಬ್ಬದ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವು ದೀಪಾವಳಿ ಹಬ್ಬದ ಮೂಲಕ ಬಲಿಚಕ್ರವರ್ತಿಯನ್ನು […]
ತುಮಕೂರು: ಬಸ್ಗೆ ಬೆಂಕಿ: ಅಪಾಯದಿಂದ ಪಾರಾದ 30 ಪ್ರಯಾಣಿಕರು
ತುಮಕೂರು: ರಾಷ್ಟ್ರೀಯ ಹೆದ್ದಾರಿ ಊರುಕೆರೆ ಬಳಿ ವಿಜಯಪುರದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ರಾಯಲ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಖಾಸಗಿ ಬಸ್ಗೆ ಶನಿವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡು ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ. ಘಟನೆಯಲ್ಲಿ ಬಸ್ನಲ್ಲಿದ್ದ ಆರು ಮಂದಿಗೆ ತೀವ್ರ ಗಾಯಗೊಂಡಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ವಿಜಯಪುರದ ನೀಲಮ್ಮ ಎಂಬುವರು ತಮ್ಮ ಸೀಟಿನ ಕೆಳಗಡೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಕಿರುಚಾಡಿದ್ದಾರೆ. ಅವರ ಕಿರುಚಾಟಕ್ಕೆ ಬಸ್ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಎಚ್ಚೆತ್ತು ಬಸ್ನಿಂದ ಇಳಿದು, ಜಿಗಿದು ದುರಂತದಿಂದ ಪಾರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಪ್ರಸಾದ್, ಕೆಂಭಾವಿಯ ಅಯೂಬಿ, ತಾಳಿಕೋಟೆಯ ತೌಸಿಫ್, ಮೆಹಬೂಬ್, ಶಬ್ಬೀರ್ […]
ಕಡೆಕಾರ್: ಶ್ರೀ ಅನಂತ ಪದ್ಮನಾಭ ದೇವರಿಗೆ ವಿಶೇಷ ಪೂಜೆ
ಉಡುಪಿ: ಕಡೆಕಾರ್ ಶ್ರೀ ಲಕ್ಷ್ಮೀನಾರಾಯಣ ಮಠದಲ್ಲಿ ಅನಂತನ ಚತುರ್ದಶಿ ಪ್ರಯುಕ್ತ ಶ್ರೀ ಅನಂತ ಪದ್ಮನಾಭ ದೇವರಿಗೆ ಶುಕ್ರವಾರ ಶ್ರೀಶ ಭಟ್ ಕಡೆಕಾರ್ ಇವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೊಲ್ಲೂರು ಭೇಟಿ
ಕೊಲ್ಲೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಹಾಗೂ ಚಿತ್ರನಟ ಶ್ರೀಶಾಂತ್ ಅವರು ತಮ್ಮ ಕಟುಂಬಿಕರ ಜತೆ ಶನಿವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಕೊಲ್ಲೂರು ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ, ಚಂಡಿಕಾ ಹೋಮ ನೆರವೇರಿಸಿದರು. ಅಧೀಕ್ಷಕ ರಾಮಕೃಷ್ಣ ಅಡಿಗ, ಸಮಿತಿ ಸದಸ್ಯ ರಮೇಶ ಗಾಣಿಗ ಕೊಲ್ಲೂರು, ಉದ್ಯಮಿ ವೆಂಕಟೇಶ ಕಿಣಿ, ದೇಗುಲದ ಪಿಆರ್ಒ ಜಯಕುಮಾರ್ ಅವರು ಶ್ರೀಶಾಂತ್ ದಂಪತಿಯನ್ನು ಸ್ವಾಗತಿಸಿ, ಗೌರವಿಸಿದರು. ದೇವಾಲಯಕ್ಕೆ 4 ದಿನಗಳಿಂದ ಕ್ಷೇತ್ರಕ್ಕೆ ಅಪಾರ ಭಕ್ತರು […]