ಶ್ರೀಕೃಷ್ಣ ಮಠಕ್ಕೆ ಬಿಜೆಪಿ‌ ರಾಜ್ಯಾಧ್ಯಕ್ಷ‌ ನಳಿನ್ ಭೇಟಿ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪಲಿಮಾರು ಮಠದ ಪರ್ಯಾಯ ಶ್ರೀಗಳಾದ ಶ್ರೀ ವಿದ್ಯಾಧೀಶ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ಶ್ರೀ ರಘುಪತಿ ಭಟ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಕಳ ಪುರಸಭೆಯನ್ನು ನಿದ್ದೆಯಿಂದ ಎಬ್ಬಿಸಿದ ಆಡಳಿತಾಧಿಕಾರಿ ಡಾ. ಮಧುಕೇಶ್ವರ್ :ಸಾರ್ವಜನಿಕರಿಂದ ಅಧಿಕಾರಿಗೆ ಪ್ರಶಂಸೆ

ವರದಿ : ಚರಣ್ ಸಂಪತ್ ಕಾರ್ಕಳ ಕಾರ್ಕಳ : ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ  ಹಾಗೂ ಜನಪರ ಅಭಿವೃದ್ಧಿಯ ಕಾಳಜಿ ಹೊಂದಿರುವ ಕುಂದಾಪುರ ಸಹಾಯಕ ಕಮೀನಷನರ್ ಡಾ ಮಧುಕೇಶ್ವರ್ ಕಾರ್ಕಳ ಪುರಸಭೆ ಆಡಳಿತಾಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿದ್ದೆಗೆ ಜಾರಿದ ಕಾರ್ಕಳ ಪುರಸಭೆಯನ್ನು ಒಮ್ಮೆಲೇ ನಿದ್ದೆಯಿಂದ ಎಬ್ಬಿಸದ್ದಾರೆ. ಕುಂಠಿತಗೊಂಡ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಚುರುಕುಗೊಳಿಸಿದ್ದಾರೆ. ಯಸ್. ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದ ಹಲವಾರು ಕಾಮಗಾರಿಗಳಿಗೆ ಜೀವ ತುಂಬುವಂತಹ ಕೆಲಸವನ್ನು ಕುಂದಾಪುರ ಸಹಾಯಕ ಕಮಿಷನರ್ ಹಾಗೂ ಕಾರ್ಕಳ […]

ಮೋಟಾರು ವಾಹನ‌ ಕಾಯ್ದೆ ಮೂಲಕ ಜನಸಾಮಾನ್ಯರ ಮೇಲೆ ಕೇಂದ್ರ ಸರಕಾರ ಯುದ್ದ: ಯು.ಟಿ. ಖಾದರ್

ಮಂಗಳೂರು: ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ ಉಲ್ಲಂಘನೆ ಪ್ರಕರಣಗಳಿಗೆ ಭಾರೀ ದಂಡ ಹಾಕುವ ಮೂಲಕ ಜನಸಾಮಾನ್ಯರ ಮೇಲೆ ಯುದ್ಧ ನಡೆಸುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ. ಮಂಗಳೂರಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದು ಹದ್ದುಬಸ್ತಿನಲ್ಲಿಟ್ಟು , ನುಸುಳುಕೋರರಿಗೆ ತಕ್ಕ ಶಾಸ್ತಿ ಮಾಡುವ ಭಾವನೆ ಇತ್ತು. ಆದರೆ ಸರಕಾರ ಆ ಕಾರ್ಯ ಮಾಡದೆ ಮೋಟಾರು […]

ಡಿಎಲ್ ಇಲ್ಲದ ವ್ಯಕ್ತಿಗೆ ಬುಲೆಟ್ ನೀಡಿದ ಮಾಲಕನಿಗೆ 5000 ರೂ. ದಂಡ..! 

ಉಡುಪಿ: ವಾಹನ‌ ಚಲಾವಣಾ ಪರವಾನಿಗೆ (ಡ್ರೈವಿಂಗ್ ಲೈಸನ್ಸ್ ) ಇಲ್ಲದ ವ್ಯಕ್ತಿಗೆ ಬುಲೆಟ್ ನೀಡಿದ ಬುಲೆಟ್ ಮಾಲಕನಿಗೆ 5000 ರೂ. ದಂಡ ಹಾಕಲಾಗಿದೆ..! ಅಷ್ಟೇ ಅಲ್ಲ ಅದೊಂದೇ ಪ್ರಕರಣದಲ್ಲಿ ಒಟ್ಟು 12 ಸಾವಿರ ರೂ. ದಂಡ ವಿಧಿಸಲಾಗಿದ್ದು, ಈ  ಘಟನೆ ಉಡುಪಿಯಲ್ಲಿ ಬಳಿ ಸೆ.7ರಂದು ನಡೆದಿದೆ. ಚಾಲನಾ ಪರವಾನಿಗೆ ಹೊಂದಿರದ ಬುಲೆಟ್ ಸವಾರನಿಗೆ 5000ರೂ., ಸವಾರ ಹಾಗೂ ಸಹ ಸವಾರರು ಹೆಲ್ಮೆಟ್ ಧರಿಸದಕ್ಕೆ ಒಟ್ಟು 2 ಸಾವಿರ ರೂ. ಮತ್ತು ಚಾಲನಾ ಪರವಾನಿಗೆ ಇಲ್ಲದವರಿಗೆ ವಾಹನ ನೀಡಿದ […]