ಆಳ್ವಾಸ್ ಕಾಲೇಜಿನಲ್ಲಿ ‘ವಿಶ್ವ ವಿಜೇತ’ ಕಾರ್ಯಕ್ರಮ ಉದ್ಘಾಟನೆ

ಮೂಡಬಿದ್ರಿ: ಸ್ವಂತಿಕೆ ಇದ್ದರೆ ಜಗತ್ತಿನಲ್ಲಿ ಬದುಕುವ ದಾರಿಗಳು ಹಲವು. ಇನ್ನೊಬ್ಬರನ್ನು ಅನುಕರಣೆ ಮಾಡದೆ ಬದುಕುವುದು ಹೇಗೆ ಎಂಬುದನ್ನು ಜಗತ್ತಿಗೆ ಸಾರಿದ ಮಹಾನ್ ಪುರುಷ ಸ್ವಾಮಿ ವಿವೇಕಾನಂದರು ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯರು ತಿಳಿಸಿದರು. ಅವರು  ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲಿ   ಸ್ವಾಮಿ ವಿವೇಕಾನಂದರ ಚಿಕಾಗೋ ಸರ್ವಧರ್ಮ ಸಮ್ಮೇಳನದ ಭಾಷಣಕ್ಕೆ ೧೨೫ನೇ ವರ್ಷದ ಪ್ರಯುಕ್ತ ರಾಮಕೃಷ್ಣ ಮಠದ ವತಿಯಿಂದ ಹಮ್ಮಿಕೊಂಡ   ‘ವಿಶ್ವ ವಿಜೇತ’ ಕಾರ್ಯಕ್ರಮದಲ್ಲಿ ಮಾತನಾಡಿದರು.. ಸ್ವಾಮಿ ವಿವೇಕಾನಂದರ ನೆನಪಿನ ಶಕ್ತಿಗೆ ಕಾರಣ ಬ್ರಹ್ಮಚರ್ಯ. ಮನಸ್ಸಿನ ಪರಿಶುದ್ಧತೆ ಕಾಪಾಡಿದರೆ […]

ಸಸಿಕಾಂತ್ ಸೆಂಥಿಲ್‌ ದೇಶದ್ರೋಹಿ ಎಂದಿದ್ದ ಸಂಜೀವ ಮಠಂದೂರು ವಿರುದ್ಧ ಕಾಂಗ್ರೆಸ್ ದೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿದ್ದ ‘ಸಸಿಕಾಂತ್ ಸೆಂಥಿಲ್ ದೇಶದ್ರೋಹಿ’ ಎಂದಿದ್ದ ಪುತ್ತೂರು ಶಾಸಕರ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ. ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್ ಮಠಂದೂರು ಯಾವುದೇ ದಾಖಲೆಯಿಲ್ಲದೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರಿಗೆ ದೂರು ನೀಡಿದ್ದಾರೆ. ಐಎಎಸ್ ಅಧಿಕಾರಿಗಳು ಸೇವೆ ಸಲ್ಲಿಸುವ […]

ಶ್ರೀ ಕೃಷ್ಣ ಮಠದಲ್ಲಿ ನಾಟ್ಯ ಜಯಂತಿ ಮತ್ತು ನೃತ್ಯೋತ್ಸವ ಉದ್ಘಾಟನೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ಪರ್ಯಾಯ ಶ್ರೀ ಪಲಿಮಾರು ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ,ಇವರ ಆಶ್ರಯದಲ್ಲಿ ನೃತ್ಯನಿಕೇತನ,ಉಡುಪಿ ಇವರು ಅರ್ಪಿಸುವ ನಾಟ್ಯ ಜಯಂತಿ ಮತ್ತು ನೃತ್ಯೋತ್ಸವ – 2019 ವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥಶ್ರೀಪಾದರು ಮತ್ತು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉದ್ಘಾಟಿಸಿದರು,ಈ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ,ನೃತ್ಯನಿಕೇತನದ ನಿರ್ದೇಶಕಿ ಲಕ್ಷ್ಮಿ ಗುರುರಾಜ್ ಕೊಡವೂರ್ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟಮಟ್ಟದ ಪ್ರತಿಭೆಗಳು ಬೆಳೆಯಲಿ: ರಘುಪತಿ ಭಟ್

ಉಡುಪಿ:  ಉಡುಪಿ ಜಿಲ್ಲೆಯಲ್ಲಿ ಕ್ರೀಡಾಪಟುಗಳ ಸಾಧನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಹ ಕ್ರೀಡಾಪಟುಗಳು , ಜಿಲ್ಲೆಯಿಂದ ಹೊರಹೊಮ್ಮಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಮಂಗಳವಾರ, ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ನಡೆದ, ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡಾಪಟುಗಳು ನಿರಂತರವಾಗಿ ಅಭ್ಯಾಸ ಮಾಡುವುದರ ಜೊತೆಗೆ, ಕ್ರೀಡೆಯಲ್ಲಿ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಇತರೆ ಸ್ಥಳಗಳಲ್ಲಿ ನಡೆಯುವ ಕ್ರೀಡಾಕೂಟಗಳನ್ನು ವೀಕ್ಷಿಸಿ ಅಲ್ಲಿನ […]

ವಿ.ಎಸ್. ಆಚಾರ್ಯ ನಿವಾಸಕ್ಕೆ ನಳಿನ್ ‌ಕುಮಾರ್ ಕಟೀಲ್ ಭೇಟಿ

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಉಡುಪಿಯಲ್ಲಿ ಕರ್ನಾಟಕದ ಮಾಜಿ  ಸಚಿವರಾದ ದಿ. ವಿ.ಎಸ್ ಆಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ‌ ಸಂದರ್ಭದಲ್ಲಿ ವಿ.ಎಸ್ ಆಚಾರ್ಯ ಅವರ ಧರ್ಮಪತ್ನಿ ಶ್ರೀಮತಿ ಶಾಂತ ವಿಎಸ್ ಆಚಾರ್ಯ ಇವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.