ಬಡವರ ಆಕ್ರಂದನ ಯಾರಿಗೂ ಕೇಳಿಸುತ್ತಿಲ್ಲ: ಜಿ.ರಾಜಶೇಖರ್

ಉಡುಪಿ: ಕೊಬ್ಬಿದ ಶ್ರೀಮಂತರ ಹಾಗೂ ಅಟ್ಟಹಾಸದಲ್ಲಿ ಮೆರೆಯುತ್ತಿರುವ ಅಧಿಕಾರಿಶಾಹಿಗಳ ನಡುವೆ ಬಡವರ ಆಕ್ರಂದನ ಯಾರಿಗೂ ಕೇಳಿಸುತ್ತಿಲ್ಲ. ಮಾಧ್ಯಮಗಳಿಗೂ ಬಡವರ ನೋವು, ಹತಾಶೆ, ಅಳು ಕೇಳಿಸುತ್ತಿಲ್ಲ. ನರೇಂದ್ರ ಮೋದಿಯ ದುರಹಂಕಾರ ಆಡಳಿತದ ಜತೆಗೆ ಪತ್ರಿಕೋದ್ಯಮದ ಕರಾಳ ಅಧ್ಯಾಯವೂ ಆರಂಭವಾಗಿದೆ ಎಂದು ಚಿಂತಕ ಜಿ. ರಾಜಶೇಖರ್ ಹೇಳಿದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಉಡುಪಿ ಜಿಲ್ಲಾ ಗೌರಿ ಬಗಳದ ವತಿಯಿಂದ ನಗರದ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗೌರಿ ಸಂಸ್ಮರಣೆ ಹಾಗೂ ಗೌರಿ ಬಳಗದ ಆರಂಭ […]
ಎಸ್‌ಸಿಡಿಸಿಸಿ ಬ್ಯಾಂಕ್: ಸಾರ್ವಕಾಲಿಕ ಗರಿಷ್ಠ 30.29 ಕೋ.ರೂ. ಲಾಭ: ಮಹಾಸಭೆಯಲ್ಲಿ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2018-19ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ 30.29 ಕೋ .ರೂ. ಲಾಭ ಗಳಿಸಿದ್ದು ಸದಸ್ಯ ಸಂಘಗಳಿಗೆ ಶೇ. 9 ಡಿವಿಡೆಂಡ್ ಅನ್ನು ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಿಸಿದ್ದಾರೆ. ಬ್ಯಾಂಕಿನ ಸಭಾಭವನದಲ್ಲಿ ಶನಿವಾರ ನಡೆದ 105ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನೇ ದಿನೇ ಸ್ಪರ್ಧೆಯನ್ನು ಎದುರಿಸಿದರೂ ಬ್ಯಾಂಕ್ ದೇಶದ ಅಗ್ರಮಾನ್ಯ ಸಹಕಾರಿ ಬ್ಯಾಂಕ್ ಎನಿಸಿಕೊಂಡಿದೆ […]
ವಕ್ವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ವಾಹನ ಕೊಡುಗೆ

ಕುಂದಾಪುರ: ತನ್ನ ಊರಿನ ಸರಕಾರಿ ಶಾಲೆಗೆ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಶಾಲಾ ವಾಹನವಾಗಿ ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ. ವಕ್ವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಹನ ನೀಡಿದ್ದು ಶನಿವಾರ ಮಧ್ಯಾಹ್ನ ವಾಹನದ ಕಿಲೀ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಧ್ಯಾಯರಿಗೆ ವಾಹನದ ಕಿಲಿಕೈ ಹಸ್ತಾಂತರಿಸಿದ ಬಳಿಕ ಮಾತನಾಡಿದ ದಾನಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಆಂಗ್ಲ ಮಾಧ್ಯಮ ಶಾಲೆಗಳ ಹೆಚ್ಚುವಿಕೆಯಿಂದ ಸರಕಾರಿ ಕನ್ನಡ ಶಾಲೆಗಳು ಅಳಿವಿನಂಚಿನತ್ತ ಸಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಸಮಾಜದಲ್ಲಿ […]
ಕೋಟ ಮೂರ್ತೆದಾರರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ

ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕೋಟ ಮೂರ್ತೆದಾರರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇವರು ಸಂಘದ ಅಧ್ಯಕ್ಷ ಕೊರಗ ಪೂಜಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕೆಮ್ಮಣ್ಣು ಇವರಿಗೆ ಸೆ.7ರಂದು ಬ್ಯಾಂಕಿನ ಸಭಾಂಗಣದಲ್ಲಿ ನೀಡಿ ಗೌರವಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ದೇವಿಪ್ರಸಾದ ಶೆಟ್ಟಿ , ಮೂರ್ತೆದಾರ ಮಹಾಮಂಡಲ […]
ಹಿರಿಯ ವಕೀಲ ರಾಮ್ ಜೇಠ್ಮಲಾನಿ ಇನ್ನಿಲ್ಲ

ದೆಹಲಿ: ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ರಾಮ್ ಜೇಠ್ಮಲಾನಿ (96)ಅವರು ಭಾನುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿದ್ದ ಇವರು ದೇಶದ ಪ್ರಸಿದ್ದ ಕ್ರಿಮಿನಲ್ ವಕೀಲರಲ್ಲಿ ಒಬ್ಬರಾಗಿದ್ದರು. ಬಿಜೆಪಿಯಿಂದ ರಾಜ್ಯಸಭಾ ಸಂಸದರೂ ಆಗಿದ್ದರು. ಕಳೆದ ಎರಡು ವಾರಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.