ಪುತ್ತೂರು: ಹಿಂದೂ ಮುಖಂಡನ ಬರ್ಭರ ಹತ್ಯೆ; ಗಣೇಶೋತ್ಸವ ನಡೆಯುತ್ತಿದ್ದಾಗಲೇ  ದುರ್ಘಟನೆ 

ಪುತ್ತೂರು: ಪುತ್ತೂರು ತಾಲೂಕಿನ  ಗ್ರಾಮಾಂತರ ಪೊಲೀಸ್ ಠಾಣೆಯಾದ ಸಂಪ್ಯ ಪೊಲೀಸ್ ಠಾಣೆಯ ಎದುರಿನ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲೇ ಹಿಂದೂ‌ ಮುಖಂಡನೋರ್ವನನ್ನು ಬರ್ಭರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪುತ್ತೂರು ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ  ಕೊಲೆಯಾದ ದುರ್ದೈವಿ. ಮಂಗಳವಾರ ಮಧ್ಯರಾತ್ರಿ ಅಂದಾಜು 12 ಗಂಟೆಯ ಸುಮಾರಿಗೆ  ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಕಾರ್ತಿಕ್ ಮೇರ್ಲರ ಎದೆಗೆ ಚೂರಿ ಹಾಕಿದ್ದರೆ. ಕೊಲೆಗೆ ಈ ಹಿಂದಿನ ವೈಷಮ್ಯವೇ ಕಾರಣ ಎಂದು […]

ಹುಲಿವೇಷಧಾರಿಗಳ ಟೆಂಪೋ ಪಲ್ಟಿ; ಓರ್ವ ಸಾವು, ಹಲವರಿಗೆ ಗಾಯ

ಉಡುಪಿ: ಹುಲಿವೇಷ ತಂಡ ಹೋಗುತ್ತಿದ್ದ ಟೆಂಪೋ ಪಲ್ಟಿಯಾಗಿ ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಸಂತೆಕಟ್ಟೆ ನೇಜಾರು ಸಮೀಪ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಹುಲಿವೇಷಧಾರಿ‌ ಪಡುಬಿದ್ರಿಯ ಸುಮಂತ್ (22) ಮೃತಪಟ್ಟವರು.  ಗಾಯಗೊಂಡ ಹುಲಿವೇಷಧಾರಿಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹುಲಿವೇಷಧಾರಿಗಳನ್ನು ಹೊತ್ತ ಟೆಂಪೋ ನೇಜಾರಿನಿಂದ ಸಂತೆಕಟ್ಟೆಗೆ ಹೋಗುತ್ತಿತ್ತು ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆಯ ಬದಿ ಪಲ್ಟಿ ಆಯಿತು ಎಂದು ತಿಳಿದುಬಂದಿದೆ. ಪರಿಣಾಮ ಗಂಭೀರಗಾಯಗೊಂಡ ಸುಮಂತ್ […]