ಚೆಸ್ ಆಟ ಮಕ್ಕಳ ಬೌದ್ಧಿಕ ಮಟ್ಟ ಚುರುಕಾಗಿಸುತ್ತದೆ: ರಾಜಗೋಪಾಲ‌‌ ಶೆಣೈ

ಉಡುಪಿ: ಚೆಸ್‌ ಆಟ ಜೀವನದಲ್ಲಿ ಯಶಸ್ಸು ಗಳಿಸಲು ಬೇಕಾಗುವ ಏಕಾಗ್ರತೆ, ಸಮಯದ ನಿರ್ವಹಣೆ ಹಾಗೂ ತಂತ್ರಗಾರಿಕೆಯನ್ನು ಕಲಿಸಿಕೊಡುತ್ತದೆ. ಮಕ್ಕಳ ಬೌದ್ಧಿಕ ಮಟ್ಟವನ್ನು ಚುರುಕಾಗಿಸಲು ಚೆಸ್‌ ಸಹಕಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಚೆಸ್‌ ಸಂಘದ ಅಧ್ಯಕ್ಷ ಡಾ. ಕೆ. ರಾಜಗೋಪಾಲ ಶೆಣೈ ಹೇಳಿದರು. ಅವರು ಶನಿವಾರ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಕಾಲೇಜು ಚೆಸ್‌ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಒತ್ತಡ ನಿರ್ವಹಣೆಗೆ ಚೆಸ್‌ ಆಟ ಪೂರಕವಾಗಿದ್ದು, ಸಕ್ರಿಯವಾಗಿ ಇದರಲ್ಲಿ ಪಾಲ್ಗೊಂಡಲ್ಲಿ […]

ಡಿಕೆಶಿ ವಿಚಾರಣೆ ಬಿಜೆಪಿಯ ದ್ವೇಷ ರಾಜಕಾರಣ: ಸಿದ್ದರಾಮಯ್ಯ

ಮಂಗಳೂರು: ಇ.ಡಿ. ಅಧಿಕಾರಿಗಳಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ‌ ತಿಳಿಸಿದ್ದಾರೆ. ಶನಿವಾರ ದ.ಕ.‌ಜಿಲ್ಲೆಗೆ ಆಗಮಿಸಿದ ಅವರು ಮಂಗಳೂರಿನಲ್ಲಿ ಮಾಧ್ಯಮದ ಮಾತನಾಡಿದರು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಬೆಳ್ತಂಗಡಿ: ನೆರೆಯಿಂದ ಹಾನಿಗೊಂಡ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ

ಮಂಗಳೂರು: ಬೆಳ್ತಂಗಡಿಯ ನೆರೆಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿದರು. ಬೆಳ್ತಂಗಡಿಯ ಅನಾರ್ ಎಂಬ ಹಳ್ಳಿಗೆ ಬೇಟಿ ನೀಡಿ ನೆರೆಪೀಡಿತರಿಂದ ಅಹವಾಲು ಸ್ವೀಕರಿಸಿದರು. ನೆರೆಗೆ ಕೊಚ್ಚಿ ಹೋಗಿರುವ ಕೃಷಿ ಭೂಮಿ, ಸೇತುವೆಗಳನ್ನು‌ ವೀಕ್ಷಿಸಿದರು. ಮಾಜಿ ಸಚಿವರಾದ ಯುಟಿ ಖಾದರ್, ಅಭಯ‍ಚಂದ್ರ ಜೈನ್, ಮಾಜಿ ಶಾಸಕ‌ ವಸಂತ ಬಂಗೇರಾ ಉಪಸ್ಥಿತರಿದ್ದರು. ಅಧಿಕಾರಿಗಳಿಗೆ ಕರೆ: ನೆರೆ ಹಾನಿಗೆ ಒಳಗಾದ ಪ್ರದೇಶದಿಂದಲೇ ಸಿದ್ದರಾಮಯ್ಯ‌ ದ.ಕ.ಜಿಲ್ಲಾಧಿಕಾರಿ, ತಹಶೀಲ್ದಾರ್ ಗೆ ಕರೆ ಮಾಡಿ ವಿಚಾರಿಸಿದರು. ಸೂಕ್ತ ವಸತಿ, ಪರಿಹಾರಕ್ಕಾಗಿ ಸಿದ್ದರಾಮಯ್ಯ ಬಳಿ […]

ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವ‌ ಮನೋಭಾವ‌ ಬೆಳೆಸಿಕೊಳ್ಳಬೇಕು: ಡಾ. ಡೈಝಿವಾಸ್

ಉಡುಪಿ: ವಿದ್ಯಾರ್ಥಿಗಳು ಸೋಲು-ಗೆಲುವಿನ ಕಡೆಗೆ ಗಮನ ಹರಿಸದೇ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾ ಮನೋಭಾವ ಬೆಳಸಬೇಕು.‌ ಇದರಿಂದ ಉತ್ತಮ ಭವಿಷ್ಯದಲ್ಲಿ ರೂಪಿಸಿಕೊಳ್ಳಲು ಸಾಧ್ಯ ಎಂದು ಮಣಿಪಾಲ ಡಾ|ಟಿ ಎಂ‌. ಎ ಪೈ ಶಿಕ್ಷಣ ಕಾಲೇಜು ಇದರ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ|ಡೈಝಿ ವಾಸ್ ಹೇಳಿದರು. ಅವರು ಶನಿವಾರ ಶಿರ್ವ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಉಡುಪಿ‌ ಜಿಲ್ಲಾ ಅಂತರ್ ಶಾಲಾ ಸಿಬಿಎಸ್ ಇ ಶಾಲೆಗಳ ಫುಟ್ ಬಾಲ್ ಪಂದ್ಯಾಟ “ ಕಿಕ್…ಆನ್ – 2019” ಗೆ […]

ವಿದ್ಯಾರ್ಥಿಗಳು ಸಮಸ್ಯೆಗೆ ಸ್ಪಂಧಿಸುವ‌ ಗುಣ ಬೆಳೆಸಿಕೊಂಡರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ: ಜಯಪ್ರಕಾಶ್ ಹೆಗ್ಡೆ

ಉಡುಪಿ: ವಿದ್ಯಾರ್ಥಿ ಸಂಘಟನೆಗಳಿಂದ ನಾಯಕತ್ವದ ತರಬೇತಿ ಸಿಗುತ್ತದೆ. ವಿದ್ಯಾರ್ಥಿ ಸಂಘಟನೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು. ಉಡುಪಿ ಕಿದಿಯೂರು ಹೊಟೇಲ್‌ನ ಸಭಾಂಗಣದಲ್ಲಿ ಶನಿವಾರ ದಕ್ಷಿಣ ಕರ್ನಾಟಕ ವಿದ್ಯಾರ್ಥಿ ಪರಿಷತ್‌ ಇದರ ಉಡುಪಿ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯ, ರಾಜ್ಯ ಹಾಗೂ ದೇಶದ ಸಮಸ್ಯೆಯ ಕುರಿತು ತಿಳುವಳಿಕೆ ಹೊಂದಬೇಕು. […]