ವೃದ್ಧಾಶ್ರಮದಲ್ಲಿ ಅಪ್ಪನನ್ನೇ ಗೃಹ ಬಂಧನದಲ್ಲಿರಿಸುವಂತೆ ಸೂಚಿಸಿದ ಮಗ ! ತಂದೆಯಿಂದ ದೂರು
ಕುಂದಾಪುರ : ತನ್ನನ್ನು ವೃದ್ಧಾಶ್ರಮದಲ್ಲಿ ಗೃಹ ಬಂಧನದಲ್ಲಿ ಇರಿಸಿರುವ ಕುರಿತು ಉಪವಿಭಾಗಾಧಿಕಾರಿಯವರಿಗೆ ಹಿರಿಯ ನಾಗರಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಪ್ರಕರಣದ ತನಿಖೆ ನಡೆದಿದೆ. ಸ್ಥಳೀಯ ವೃದ್ಧಾಶ್ರವೊಂದರ ನಿಲಯವಾಸಿಯಾಗಿ ಸೇರ್ಪಡೆಯಾಗಿರುವ ಹಿರಿಯಡ್ಕದ ನಿವಾಸಿ ಮಂಜುನಾಥ ಜೋಗಿ ಎನ್ನುವವರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಯೋಗ ಕ್ಷೇಮಾಧಿಕಾರಿ ಗಣೇಶ್ ಮರಾಠೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಪ್ರಕರಣದ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಜು.10 ರಂದು ವೃದ್ಧಾಶ್ರಮಕ್ಕೆ ಬಂದಿರುವ ನನ್ನನ್ನು ಗೃಹಬಂಧನದಲ್ಲಿ ಇರಿಸಲು ಮಂಗಳೂರಿನಲ್ಲಿ ಇರುವ […]
ಮಾಜಿ ಪ್ರಧಾನಿ ಡಾ|ಮನಮೋಹನ್ ಸಿಂಗ್ ಎಸ್‌ಪಿಜಿ ಭದ್ರತೆ ವಾಪಸ್
ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ|ಮನಮೋಹನ್ ಸಿಂಗ್‌ಗೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ)ಯ ಭದ್ರತೆಯನ್ನು ಕೇಂದ್ರ ಸರ್ಕಾರ ಸೋಮವಾರ ವಾಪಸ್ ಪಡೆದಿದೆ. ಈ ಕುರಿತು ಸೋಮವಾರ ಪ್ರಕಟಣೆ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ, ಮಾಜಿ ಪ್ರಧಾನಿ ಡಾ. ಸಿಂಗ್ ಅವರಿಗೆ ಇನ್ನು ಮುಂದಿನ ದಿನಗಳಲ್ಲಿ ಎಸ್‌ಪಿಜಿ ಭದ್ರತೆ ಇರುವುದಿಲ್ಲ. ಆದರೆ ಅವರಿಗೆ ಸಿಆರ್‌ಪಿಎಫ್ ಸಿಬ್ಬಂದಿಗಳ ಮೂಲಕ ಝೆಡ್ ಪ್ಲಸ್ ಭದ್ರತೆ ಮುಂದುವರಿಯಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಅಂಗರಕ್ಷಕರಿಂದಲೇ ಕೊಲೆಗೀಡಾದ ಕಾರಣಕ್ಕಾಗಿ 1985ರಲ್ಲಿ ಗಣ್ಯ ವ್ಯಕ್ತಿಗಳ ಭದ್ರತೆಗಾಗಿ ಎಸ್‌ಪಿಜಿ ವ್ಯವಸ್ಥೆ […]