ಬಿಜೆಪಿ ಸರ್ಕಾರ ಹೆಚ್ಚು ಕಾಲ ಇರಲ್ಲ: ಐವನ್ ಡಿಸೋಜಾ, ವ್ಯಂಗ್ಯ
ಮಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಭಿನ್ನಮತ ಸ್ಫೋಟಗೊಂಡಿದೆ. ಹೀಗಾಗಿ ಬಿಜೆಪಿ ಸರ್ಕಾರ ಆರು ತಿಂಗಳು ಸಹ ಇರಲ್ಲ ಎಂದು ಸ್ವತಃ ಬಿಜೆಪಿ ಹೈಕಮಾಂಡೇ ಸೂಚನೆ ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವ್ಯಂಗ್ಯವಾಡಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತ ಸಿ.ಟಿ. ರವಿಯಿಂದ ಪ್ರಾರಂಭವಾಗಿದೆ. ಇದು ಹೊಸ ದಿಕ್ಕೊಂದನ್ನು ಪಡೆಯಲಿದೆ. ಇಂದಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಬಿಜೆಪಿ ಸರ್ಕಾರ ಹೆಚ್ಚು ಕಾಲ ಇರಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಸರ್ಕಾರ […]
ಪಶುಸಂಗೋಪನೆ ಕಾರ್ಯಕ್ರಮ-ಅರ್ಜಿ ಆಹ್ವಾನ
ಉಡುಪಿ: ಜಿಲ್ಲೆಯ ಅಲೆಮಾರಿ, ಮೂಲನಿವಾಸಿ ಮತ್ತು ಅರಣ್ಯ ಅವಲಂಬಿತ ಜನಾಂಗದವರಿಗೆ ಪಶುಸಂಗೋಪನೆ ಕಾರ್ಯಕ್ರಮಗಳಾದ ಹೈನುಗಾರಿಕೆ, ಹಸು, ಎಮ್ಮೆ, ಕುರಿ ಮೇಕೆ, ಸರಕು ಸಾಗಾಣಿಕೆ ವಾಹನ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ ಇತ್ಯಾದಿ ಸ್ವಯಂ ಉದ್ಯೋಗ ಕಾರ್ಯಕ್ರಮ ಅನುಷ್ಟಾನ ಮಾಡುತ್ತಿದ್ದು, ಆಸಕ್ತಿಯುಳ್ಳ ಅಲೆಮಾರಿ, ಮೂಲನಿವಾಸಿ ಮತ್ತು ಅರಣ್ಯ ಅವಲಂಬಿತ ಜನಾಂಗದವರು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಅರ್ಜಿಯನ್ನು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ರಜತಾದ್ರಿ, ಮಣಿಪಾಲ ಇಲ್ಲಿ ಹಾಗೂ ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗಳಲ್ಲಿ ಸೆಪ್ಟಂಬರ್ 3 ರಿಂದ […]
ಪಡಿತರ ಚೀಟಿ ಸಮಸ್ಯೆ ಶೀಘ್ರ ಪರಿಹರಿಸಿ -ಉಡುಪಿ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ
ಉಡುಪಿ: ಜಿಲ್ಲೆಯಲ್ಲಿ ಕಳೆದ 6-7 ತಿಂಗಳಿನಿಂದ ಪಡಿತರ ಚೀಟಿ ವಿತರಣೆಯಾಗದೇ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಒತ್ತಾಯಿಸಿದರು. ಈ ಕುರಿತು ಉತ್ತರಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕುಸುಮಾಧರ್ ಮಾತನಾಡಿ, ಜಿಲ್ಲೆಯಲ್ಲಿ 4771 ಪಡಿತರ ಚೀಟಿ ವಿತರಣೆಗೆ ಮಾರ್ಚ್ 2019 ವರೆಗೆ […]
ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಾಯಚೂರಿನಲ್ಲಿ ವಿಟ್ಲಪಿಂಡಿ
ಉಡುಪಿ: ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ರಾಯಚೂರಿನ ಸತ್ಯನಾಥ ಕಾಲೋನಿಯ ಶ್ರೀ ಪ್ರಾಣ ದೇವರ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವೃತ ಕೈಗೊಂಡಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಪಾದರ ನೇತೃತ್ವದಲ್ಲಿ ವೈಭವದಿಂದ ವಿಟ್ಲಾಪಿಂಡಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಕುಂಜಾರು ಗಿರಿ ಬಳಗದ ಸದಸ್ಯರು ಚೆಂಡೆ ವಾದನ, ಹುಲಿವೇಷ ಕುಣಿತ, ಯಕ್ಷಗಾನ ವೇಷಧಾರಿಗಳಾಗಿ ಭಾಗವಹಿಸಿದ್ದರು.ನಂತರ ದೇವಸ್ಥಾನದಲ್ಲಿ ವಾದ್ಯಮೇಳದೊಂದಿಗೆ ದೇವರ ದರ್ಶನ ಬಲಿ ನಡೆಯಿತು. ಉತ್ಸವದಲ್ಲಿ ಸಹಸ್ರಾರು ಭಕ್ತಾಧಿಗಳು ನೆರೆದಿದ್ದರು.
ಕುಬ್ಜಾ ನದಿಯಲ್ಲಿ ಮಕ್ಕಳನ್ನು ಸಾಯಿಸಿದ ಪ್ರಕರಣ:ತಾಯಿಗೆ ನಿರೀಕ್ಷಣಾ ಜಾಮೀನು
ಕುಂದಾಪುರ : ತಾಲ್ಲೂಕಿನ ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಜು.11 ರಂದು ಬೆಳಿಗ್ಗೆ 4.30 ರ ವೇಳೆಯಲ್ಲಿ ಮನೆಯ ಸಮೀಪದಲ್ಲಿ ಇರುವ ಕುಬ್ಜಾ ನದಿಯಲ್ಲಿ 1 ವರ್ಷ 3 ತಿಂಗಳ ಹೆಣ್ಣು ಮಗು ಸಾನ್ವಿಕಾಳನ್ನು ಕೊಂದು, 5 ವರ್ಷದ ಪ್ರಾಯದ ಪುತ್ರ ಸಾತ್ವಿಕನನ್ನು ಕೊಲ್ಲಲು ಯತ್ನಿಸಿದ ಆರೋಪಗಳನ್ನು ಎದುರಿಸುತ್ತಿದ್ದ ಮಕ್ಕಳಿಬ್ಬರ ತಾಯಿ ರೇಖಾ (32) ಎಂಬಾಕೆಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಮನೆಯಲ್ಲಿ ಮಲಗಿದ್ದ ವೇಳೆ ನಸುಕಿನಲ್ಲಿ ಮನೆಗೆ ಬಂದ ಅಪರಿಚಿತ ಅಪಹರಣಾಕಾರರು ಮಲಗಿದ್ದ ಮಗುವನ್ನು ಅಪಹರಿಸಿಕೊಂಡು […]