ನೆರೆ ಸಂತ್ರಸ್ತರಿಗೆ ಒಡಿಯೂರು ಸಂಸ್ಥಾನದಿಂದ 10 ಲಕ್ಷ ರೂ. ಪರಿಹಾರ
ಮಂಗಳೂರು: ಜಳಪ್ರಳಯದಿಂದಾಗಿ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ತತ್ತರಿಸಿದ್ದು, ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ನಾನಾ ದೇವಾಲಯದ ಆಡಳಿತ ಮಂಡಳಿ ಮುಂದಾಗಿದೆ. ಅದರಂತೆ ದಕ್ಷಿಣ ಕನ್ನಡದ ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನದ ಸ್ವಾಮಿಜಿಗಳು ಸಂಸ್ಥಾನದ ವತಿಯಿಂದ ನೆರೆ ಸಂತ್ರಸ್ತರ ಪುನಶ್ಚೇತನಕ್ಕಾಗಿ 10 ಲಕ್ಷ ರೂ ನೀಡಲಾಗಿದೆ. ಚೆಕ್ ನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ಬೈಕ್ ಗಳ ಢಿಕ್ಕಿ: ಸವಾರ ಸಾವು
ಸುಳ್ಯ: ಸುಳ್ಯದ ಬೆಳ್ಳಾರೆ- ಸವಣೂರು ರಸ್ತೆಯ ಮುಕ್ಕೂರು ಸನಿಹದ ಕಾಯರ್ಮಾರ್ ಬಳಿ ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ. ಸ್ಕೂಟಿ ಸವಾರ ಪೆರುವಾಜೆ ಗ್ರಾಮದ ಅಡ್ಯತಕಂಡ ನಿವಾಸಿ ಪುರುಷೋತ್ತಮ ಗೌಡ ಅಡ್ಯತಕಂಡ (42) ಅವರು ಮೃತಪಟ್ಟ ದುರ್ದೈವಿ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆ. 24ರಂದು ರಾತ್ರಿ ಅಪಘಾತ ಸಂಭವಿಸಿತ್ತು. ತಕ್ಷಣ ಆಸ್ಪತ್ರೆ ಗೆ ಕೊಂಡೊಯ್ಯಲಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರುಷೋತ್ತಮ […]
ಶ್ರೀ ಕೃಷ್ಣ ಮಠ:ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣೆ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ಉಡುಪಿ ಇದರ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹದಿನೈದನೇ ವರ್ಷದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ.ಜಿ.ಶಂಕರ್ ವಹಿಸಿದ್ದರು. ರತ್ನಕುಮಾರ್, ಆನಂದ್ ಸಿ.ಕುಂದರ್,ಪ್ರಮೋದ್ ಮಧ್ವರಾಜ್,ಮಹಾಲಿಂಗೇಶ್ವರ ಕೆ.,ಸುಜಿತ್ ಕುಮಾರ್, ಡಾ.ತಲ್ಲೂರ್ ಶಿವರಾಮ ಶೆಟ್ಟಿ, […]
ಶ್ರೀ ಕೃಷ್ಣ ಮಠ: ಅನುಗ್ರಹ ಸಂದೇಶ ಕಾರ್ಯಕ್ರಮ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲಮಹಾಸಂಸ್ಥಾನಂ ಶ್ರೀಹೃಷಿಕೇಶತೀರ್ಥಪೀಠಮ್ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಎಂಟನೇ ದಿನದಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಸಮಾರಂಭದಲ್ಲಿ ನಾಡೋಜ ಡಾ.ಜಿ.ಶಂಕರ್, ಭುವನೇಂದ್ರ ಕಿದಿಯೂರು, ಆನಂದ ಸಿ.ಕುಂದರ್, ಹರಿಯಪ್ಪ ಕೋಟಿಯಾನ್, ವಿದ್ವಾನ್ ಮಧೂರು ಬಾಲಸುಬ್ರಮಣ್ಯ, ಪ್ರತಿಭಾ ಸಾಮಗ, ಭೋಜರಾಜ ಕಿದಿಯೂರು, ಜಯಚಂದ್ರ ಐ.ಕೆ, ವಿಷ್ಣು ಆರ್. ಆಚಾರ್ಯ, […]
ಶ್ರೀ ಕೃಷ್ಣ ಮಠದಲ್ಲಿ ಸಂಗೀತ ಕಾರ್ಯಕ್ರಮ
ಉಡುಪಿ: ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಮಾ ನಾರಾಯಣ್ ಮತ್ತು ಬಳಗ, ದುಬೈ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.